ಸ್ಪೋರ್ಟ್ಸ್ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ: ಹಿಮಾಂಶಿ ಚೌಧರಿ ಹಾಗೂ...

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ: ಹಿಮಾಂಶಿ ಚೌಧರಿ ಹಾಗೂ ಬಿ.ಆರ್. ಗೌರವ್ ಚಾಂಪಿಯನ್

-

- Advertisment -spot_img

ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ: ಹಿಮಾಂಶಿ ಚೌಧರಿ ಹಾಗೂ ಬಿ.ಆರ್. ಗೌರವ್ ಚಾಂಪಿಯನ್

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮಂಗಳೂರು ಟೇಬಲ್ ಟೆನ್ನಿಸ್ ಅಕಾಡೆಮಿ, ಮಂಗಳೂರಿನಲ್ಲಿ ಜುಲೈ 1ರಿಂದ 4ರವರೆಗೆ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಎರಡನೇ ದಿನದ ಪಂದ್ಯಗಳಲ್ಲಿ ಅಂಡರ್-19 ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ರೋಚಕ ಹಣಾಹಣಿಗಳು ನಡೆದವು.

ಅಂಡರ್-19 ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಹಿಮಾಂಶಿ ಚೌಧರಿ ಅವರು ರಾಶಿ ವಿ. ರಾವ್ ಅವರನ್ನು 9-11, 11-6, 11-13, 12-10, 11-6, 4-11, 11-6 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಹಿಮಾಂಶಿ ಚೌಧರಿ ಅವರು ಐರಿನ್ ಅಣ್ಣಾ ಸುಭಾಷ್ ಅವರನ್ನು 11-9, 7-11, 11-1, 11-9 ಅಂತರದಿಂದ ಮಣಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ರಾಶಿ ವಿ. ರಾವ್ ಅವರು ಹಿಯಾ ಸಿಂಗ್ ಅವರನ್ನು 11-4, 11-5, 9-11, 12-10 ಅಂತರದಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದರು.

ಅಂಡರ್-19 ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಬಿ.ಆರ್. ಗೌರವ್ ಅವರು ಗೌರವ್ ಗೌಡ ಅವರನ್ನು 11-6, 12-14, 11-9, 11-8, 9-11, 11-1 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಗೌರವ್ ಗೌಡ ಅವರು ಆರ್ನವ್ ನವೀನ್ ಅವರನ್ನು 5-11, 11-4, 5-11, 11-7, 11-5 ಅಂತರದಿಂದ ಮಣಿಸಿದರೆ, ಬಿ.ಆರ್. ಗೌರವ್ ಅವರು ತಮೋಘ್ನ ಮುಂಡರ್ಗಿ ಅವರನ್ನು 11-5, 11-5, 11-8 ಅಂತರದಿಂದ ಸೋಲಿಸಿ ಫೈನಲ್‌ಗೆ ಲಗ್ಗೆಯಿಟ್ಟರು.

ಪಂದ್ಯಾವಳಿಯ ವಿಶೇಷ ಅತಿಥಿಗಳಾಗಿ ಟಿ.ಜಿ. ಉಪಾಧ್ಯ ಹಾಗೂ ಕೆ.ಆರ್. ಮಂಜುನಾಥ್ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕುಂದಾಪುರ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ನೇತೃತ್ವ ವಹಿಸಿದ್ದಾರೆ.

LEAVE A REPLY

Please enter your comment!
Please enter your name here

twenty − 9 =

Latest news

Experience Lightning-Fast Slots with Casinia – Quick Play, Big Thrills

When you’re hovering over your phone in a coffee shop or waiting for a bus, the urge to test...

ಹಿರಿಯ ಕ್ರೀಡಾ ವರದಿಗಾರ ಸೋಮಶೇಖರ್ ಪಡುಕರೆ ಅವರಿಗೆ ‘ಪತ್ರಿಕಾ ದಿನದ ಪ್ರಶಸ್ತಿ

ಹಿರಿಯ ಕ್ರೀಡಾ ವರದಿಗಾರ ಸೋಮಶೇಖರ್ ಪಡುಕರೆ ಅವರಿಗೆ ‘ಪತ್ರಿಕಾ ದಿನದ ಪ್ರಶಸ್ತಿ' **ಮಂಗಳೂರು, ಜುಲೈ 2:** ಕನ್ನಡ ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಹಿರಿಯ...

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ **ಮಂಗಳೂರು, ಜುಲೈ 2:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಆಶ್ರಯದಲ್ಲಿ ರಾಜ್ಯ ರ‍್ಯಾಂಕಿಂಗ್ ಟೇಬಲ್...

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..!

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..! ಇದು ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ಯೋಧನ ‘ದೊಡ್ಡ’ ಕಥೆ..!   ಇವತ್ತು ಕರ್ನಾಟಕದ The most...
- Advertisement -spot_imgspot_img

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ

ಮಂಗಳೂರಿನಲ್ಲಿ ಜುಲೈ 1ರಿಂದ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ **ಮಂಗಳೂರು, ಜೂನ್ 29:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ವತಿಯಿಂದ ಕರ್ನಾಟಕ...

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್.

ಯಶಸ್ವೀ ಬದುಕಿಗೆ ಕ್ರೀಡೆ ಅವಶ್ಯ:ವಿಠಲ್ ರಿಶಾನ್ ನಾಯಕ್. ಬ್ರಹ್ಮಾವರ ಸಂತೆಕಟ್ಟೆಯಲ್ಲಿ ವಿರಾಟ್ ಫ್ರೆಂಡ್ಸ್ ವತಿಯಿಂದ ಆಯೋಜಿಸಲಾದ ಮಾನ್ಸೂನ್ ಟ್ರೋಫಿ -26 ಕ್ರಿಕೆಟ್ ಪಂದ್ಯಾಟವು ಶುಭಾರಂಭಗೊಂಡಿತು. ದುಬೈ ಟೆಕ್ನೋಟೈಟಾನ್ಸ್ ಕ್ರಿಕೆಟ್...

Must read

- Advertisement -spot_imgspot_img

You might also likeRELATED
Recommended to you