ಆಸಿಫ್ ಕೋಡಿ, ಅಫ್ವಾನ್, ಇಮ್ತಿಯಾಜ್ ಮತ್ತು ಇಮ್ರಾನ್ ಇವರೆಲ್ಲರ ಒಗ್ಗೂಡುವಿಕೆಯಿಂದ ಕಿಂಗ್ಡಮ್ ಆಫ್ ಸೌದಿ ಅರೇಬಿಯಾದ ಅಲ್ ಕೋಬರ್ ದಮಾಮ್ ನ ERCA ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ 2023 ಎಂಬ ಕ್ರಿಕೆಟ್ ಪಂದ್ಯಾವಳಿಯನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ಪಂದ್ಯಾವಳಿಯ ಆಯೋಜಕರ ವರದಿಗಳು ತಿಳಿಸಿವೆ.
” ಕೆಪಿಎಲ್ ಸೀಸನ್ 1″ ಎಂದು ಕರೆಯಲ್ಪಡುವ ಪಂದ್ಯಾವಳಿಯು ERCA ಗ್ರೌಂಡ್ಸ್ ನಲ್ಲಿ ಇದೇ ಸೆಪ್ಟೆಂಬರ್ 28 ಮತ್ತು 29ರಂದು ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ. ಈ ಪಂದ್ಯಾವಳಿಯಲ್ಲಿ ಕರ್ನಾಟಕದ ಆಟಗಾರರನ್ನು ಒಳಗೊಂಡ ಎಂಟು ತಂಡಗಳು ಭಾಗವಹಿಸಲಿವೆ.
ಈ ಪಂದ್ಯಾವಳಿಯಲ್ಲಿ ವಿಜೇತ ತಂಡವು 5001 ಸೌದಿ ರಿಯಾಲ್ ಮತ್ತು ವಿಜೇತ ಟ್ರೋಫಿಯನ್ನು ಪಡೆದುಕೊಳ್ಳುತ್ತದೆ, ರನ್ನರ್ ಅಪ್ ಗಳು 3001 ಸೌದಿ ರಿಯಾಲ್ ಮತ್ತು ಟ್ರೋಫಿಯನ್ನು ಜಯಿಸಲಿದೆ. ಪ್ರತಿ ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಟ್ರೋಫಿ ಮತ್ತು ಆಕರ್ಷಕ ಉಡುಗೊರೆ ಬಹುಮಾನವನ್ನು ಗೆಲ್ಲುತ್ತಾರೆ. ಅತ್ಯುತ್ತಮ ಬ್ಯಾಟ್ಸ್‌ಮನ್, ಉತ್ತಮ ಬೌಲರ್ ,ಬೆಸ್ಟ್ ವಿಕೆಟ್ ಕೀಪರ್ ಮತ್ತು ಮ್ಯಾನ್ ಆಫ್ ದಿ ಸೀರೀಸ್ ನಂತಹ ವೈಯಕ್ತಿಕ ವಿಜೇತರಿಗೆ ಕೂಡ ಹಲವಾರು ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ಕ್ಲಬ್‌ನ ಮುಖ್ಯಸ್ಥರು ಸ್ಪೋರ್ಟ್ಸ್ ಕನ್ನಡಕ್ಕೆ ತಿಳಿಸಿದ್ದಾರೆ.