ಬಹ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಅದ್ಧೂರಿಯ ಕರ್ನಾಟಕ ಪ್ರೀಮಿಯರ್ ಲೀಗ್-2022

ಬಹ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಅದ್ಧೂರಿಯ ಕರ್ನಾಟಕ ಪ್ರೀಮಿಯರ್ ಲೀಗ್-2022
ಬಹ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಕರ್ನಾಟಕ  ಪ್ರೀಮಿಯರ್ ಲೀಗ್-ಕೆ.ಪಿ.ಎಲ್-2022 ಪಂದ್ಯಾವಳಿ ಆಯೋಜಿಸಲಾಗಿದೆ.
ಜುಲೈ 9 ರಂದು ಬುಸೈಟಿನ್ ಮೈದಾನದಲ್ಲಿ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ ನಮ್ಮ ಕುಡ್ಲ,ಅಭಿಜ್ಞಾ ಇಲೆವೆನ್,ರಿಫಾ ಇಂಡಿಯನ್ ಸ್ಟಾರ್,ಜೈ ಕರ್ನಾಟಕ, ಸಾಚಿ ಇಲೆವೆನ್,
ಕರಾವಳಿ ಕಿಂಗ್ಸ್,ಝಿಂಝ್ ಫ್ರೆಂಡ್ಸ್ ಮತ್ತು ಕಾಸ್ಮೊಪಾಲಿಟಿನ್ ಹೀಗೆ ಕರ್ನಾಟಕದ
ಆಟಗಾರರನ್ನೊಳಗೊಂಡ ಒಟ್ಟು 8 ಫ್ರಾಂಚೈಸಿಗಳು ಭಾಗವಹಿಸಲಿದೆ.
ಪ್ರಥಮ ಬಹುಮಾನ 666 ಡಾಲರ್,ದ್ವಿತೀಯ ಬಹುಮಾನ 333ಡಾಲರ್ ಸಹಿತ ಆಕರ್ಷಕ ಟ್ರೋಫಿಗಳನ್ನು ಮತ್ತು ಸೆಮಿಫೈನಲ್ ಪರಾಜಿತ
ತಂಡಗಳಿಗೆ ಟ್ರೋಫಿಗಳನ್ನು ನೀಡಲಾಗುತ್ತಿದೆ.
ಇದಲ್ಲದೇ ಪಂದ್ಯಶ್ರೇಷ್ಟ,ಸರಣಿ ಪುರುಷೋತ್ತಮ,ಬೆಸ್ಟ್ ಬ್ಯಾಟ್ಸ್‌ಮನ್‌,ಬೆಸ್ಟ್ ಬೌಲರ್,ಪರ್ಪಲ್ ಕ್ಯಾಪ್ ಮತ್ತು ಆರೆಂಜ್ ಕ್ಯಾಪ್ ಇನ್ನಿತರ ಆಕರ್ಷಕ ಬಹುಮಾನಗಳನ್ನು ಆಟಗಾರರು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪತ್ ಶೆಟ್ಟಿ ಸುರತ್ಕಲ್
-38119552 ಮತ್ತು ವಿವಿನ್ಜಿತ್ ಕುಂದಾಪುರ
-33003671 ನಂಬರ್ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *