ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ),ಉಡುಪಿ ಜಿಲ್ಲಾ ಘಟಕ ಮತ್ತು ಕೋಟ ಹೋಬಳಿ ಯುವ ಘಟಕದ ಆಶ್ರಯದಲ್ಲಿ 2022 ರ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕರ್ಮ ಮಹಾಸಭಾ ಟ್ರೋಫಿ-2022 ಪೋಸ್ಟರನ್ನು ವಿಧಾನ ಪರಿಷತ್ ಸದಸ್ಯರು ಮತ್ತು ಅ.ಕ.ವಿ.ಮ ರಾಜ್ಯಾಧ್ಯಕ್ಷರು ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಇವರು ಬಿಡುಗಡೆಗೊಳಿಸಿದರು.
ಜೂನ್ 12 ರವಿವಾರ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ)ಕೋಟ ಹೋಬಳಿ ಯುವಘಟಕದ ಉದ್ಘಾಟನಾ ಕಾರ್ಯಕ್ರಮ,ಟೂರ್ನಮೆಂಟ್ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದ ಕೆ.ಪಿ.ನಂಜುಂಡಿಯವರು
“ವಿಶ್ವಕರ್ಮ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರೋತ್ಸಾಹ ಮತ್ತು
ಅಶಕ್ತರ ಬಾಳಿನ ಆಶಾಕಿರಣ ವಾಗುವಂತೆ ಸಹಾಯನಿಧಿ ಸಂಗ್ರಹಣೆ-ಸಮಾಜದ ಅಭಿವೃದ್ಧಿಯ ಕುರಿತಾದ ಮುಖ್ಯ ಉದ್ದೇಶದೊಂದಿಗೆ ವಿಶ್ವಕರ್ಮ ಮಹಾಸಭಾ ಕೋಟ ಹೋಬಳಿ ದಿಟ್ಟ ಹೆಜ್ಜೆಯಿಟ್ಟಿದ್ದು ಸಮಾಜಕ್ಕೆ ಮಾದರಿಯಾಗಲಿ ಎಂದು ಈ ಸಂದರ್ಭ ಹೇಳಿದರು.ಮತ್ತು ವೈಯಕ್ತಿಕವಾಗಿ 50 ಸಾವಿರ ನೀಡುವುದಾಗಿ ಘೋಷಿಸಿದರು.”
ಈ ಸಂದರ್ಭ ವಾಸ್ತುಶಿಲ್ಪಿಗಳಾದ ಸುದರ್ಶನ್ ಆಚಾರ್,ಯೋಗೀಶ್ ಇನ್ನಾ
ಮತ್ತು ಸುಧೀರ್ ಆಚಾರ್ ಪೆರ್ಡೂರು ಇವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಅಧಿಕ ಅಂಕಗಳಿಸಿದ ಸುಶಾನ್,
ಅಂಕಿತಾ,ದೀಪ್ತಿ,ಅಶ್ವಿನಿ,ದಿಶಾ, ಪ್ರಮೋದ್ ಮತ್ತು ಸುಜಯ್ ಇವರಿಗೆ ಸನ್ಮಾನದ ಜೊತೆಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಯುವ ಸಾಧಕರಾದ ಇತ್ತೀಚೆಗಷ್ಟೇ ಸಿನಿಮಾ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದ ಶ್ಲಾಘ ಸಾಲಿಗ್ರಾಮ(ಸಿನಿಮಾ ನಟನೆ),ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಕವನಾ ಕಾರ್ಕಳ(ಯೋಗ),
ಸಚಿನ್ ಕುಂಭಾಶಿ (ಯಕ್ಷಗಾನ),ವೈಷ್ಣವಿ ಕಡಿಯಾಳಿ(ಕ್ರಿಕೆಟ್),ನವನೀತ್
(ಕರಾಟೆ) ಮತ್ತು ಸಮೀಕ್ಷಿತ್(ಯಕ್ಷಗಾನ) ಇವರನ್ನು ಗೌರವಿಸಲಾಯಿತು.
ವಿಶ್ವಕರ್ಮ ಸಮಾಜದ ಕ್ರಿಕೆಟ್ ಪಂದ್ಯಾಟ ಸಂಘಟಿಸಿ ಸಮಾಜದ ನೆರವು ನೀಡಿದ ಶಿವರಾಮ ಆಚಾರ್ ಕಿನ್ನಿಗೋಳಿ,ಭಾಸ್ಕರ್ ಆಚಾರ್ ಉಡುಪಿ,ರಾಜ್ಯ ಮಟ್ಟದಲ್ಲಿ ಸಮಾಜದ ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ ವಿಜೇಂದ್ರ ಆಚಾರ್(ವೃಷ್ಟಿ ಸಾಲಿಗ್ರಾಮ),ಶ್ರೀಶ ಆಚಾರ್(ಹನ್ಸಿನಿ ಉಡುಪಿ),ಪ್ರಶಾಂತ್ ಆಚಾರ್(ಭಾರ್ಗವ ಸಾಲಿಗ್ರಾಮ),ಸುಧೀರ್ ಪೆರ್ಡೂರು(ಬಾಲಾಜಿ ಬುಲ್ಸ್ ಪೆರ್ಡೂರು),ಶ್ರೀಕಾಂತ್ ಆಚಾರ್(ವಿ.ವಿ.ಸಿ ಕುಂದಾಪುರ)ಸದಾಶಿವ ಆಚಾರ್ (ವಿ.ಕೆ.ಅವರಾಲು) ಮತ್ತು ಪ್ರಕಾಶ್ ಆಚಾರ್(ಖುಷಿ ಬೆನಗಲ್) ನಾಯಕರನ್ನು ಸನ್ಮಾನಿಸಲಾಯಿತು.
ಬಹು ನಿರೀಕ್ಷೆಯನ್ನು ಮೂಡಿಸಿದ ವಿಶ್ವಕರ್ಮ ಮಹಾಸಭಾ ಟ್ರೋಫಿ-2022 ಈ ವರ್ಷಾಂತ್ಯದಲ್ಲಿ ನಡೆಯಲಿದ್ದು,ವಿನೂತನ ಪ್ರಯೋಗದೊಂದಿಗೆ ವಿಶ್ವಕರ್ಮ ಸಮಾಜದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಸಮನಾವಕಾಶ ಲಭಿಸಲಿದ್ದು,
ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಇತಿಹಾಸ ಸೃಷ್ಟಿಸಲಿದೆ ಎಂದು ಉಡುಪಿ ಜಿಲ್ಲೆ ಯುವ ಘಟಕಾಧ್ಯಕ್ಷರು ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.