ಬೆಂಗಳೂರು-ಇಲ್ಲಿನ ಹುಳಿಮಾವು ಗ್ರಾಮಸ್ಥರ ವತಿಯಿಂದ ರಾಜ್ಯ ಮಟ್ಟದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಹುಳಿಮಾವು ಕಪ್-2024 ಆಯೋಜಿಸಲಾಗಿದೆ.
ಮಾರ್ಚ್ ದಿನಾಂಕ 30 ಮತ್ತು 31 ರಂದು ಹುಳಿಮಾವು ರಾಯಲ್ ಮೀನಾಕ್ಷಿ ಹಿಂಭಾಗದ ಇಸ್ಲಾಮಿಯಾ ಆಟದ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದಲ್ಲಿ 16 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.
ಪ್ರಥಮ ಬಹುಮಾನ 1.5 ಲಕ್ಷ,ದ್ವಿತೀಯ ಬಹುಮಾನ 75 ಸಾವಿರ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ನೀಡಲಾಗುತ್ತಿದ್ದು ಭಾಗವಹಿಸಲು ಆಸಕ್ತ ತಂಡಗಳು ಪ್ರವೇಶ ಶುಲ್ಕ 15000 ಪಾವತಿಸಬೇಕಿದೆ.
ಕವರ್ ಡ್ರೈವ್ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು ಹೆಚ್ಚಿನ ವಿವರಗಳಿಗಾಗಿ 9731977362,9739991545 ಅಥವಾ 9606739236 ಈ ನಂಬರ್ ಗಳನ್ನು ಸಂಪರ್ಕಿಸಬಹುದು.