ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್(ರಿ) ಕುಂದಾಪುರ ಮತ್ತು ತಾಲೂಕು ಮಹಿಳಾ ವೇದಿಕೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ,ವಿಪ್ರರಿಗಾಗಿ ಮಾರ್ಚ್ 9,10 ರಂದು ಹೊನಲು ಬೆಳಕಿನ ಕ್ರಿಕೆಟ್ ಹಬ್ಬ ವಿಪ್ರ ಟ್ರೋಫಿ-2024 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ರೂಪದಲ್ಲಿ ಆಕರ್ಷಕ ನಗದು ಮತ್ತು ಪಾರಿತೋಷಕಗಳನ್ನು ನೀಡಲಾಗುತ್ತಿದೆ.
ಇದಲ್ಲದೇ ಮಹಿಳೆಯರಿಗಾಗಿ ತ್ರೋಬಾಲ್ ಪಂದ್ಯಾಟ ನಡೆಯಲಿದ್ದು,ಸಮಾರಂಭದ ವೇದಿಕೆಯಲ್ಲಿ ರಸಮಂಜರಿ,ಗಾನವಿನೋದ,ಕ್ರೀಡಾ ಗೌರವ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ವಿಪ್ರ ವೇದಿಕೆ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ಅವನೀಶ ಹೊಳ್ಳರವರು ಸ್ಪೋರ್ಟ್ಸ್ ಕನ್ನಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಂದ್ಯಾಟದ ನೇರ ಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.