2.4 C
London
Saturday, January 18, 2025
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಸಮಾಜ ಸೇವೆಯ ಸದುದ್ದೇಶದಿಂದ-ಗಿಳಿಯಾರು ಫ್ರೆಂಡ್ಸ್ ಆಶ್ರಯದಲ್ಲಿ ಕುಟೀರ ಟ್ರೋಫಿ 2023

ಸಮಾಜ ಸೇವೆಯ ಸದುದ್ದೇಶದಿಂದ-ಗಿಳಿಯಾರು ಫ್ರೆಂಡ್ಸ್ ಆಶ್ರಯದಲ್ಲಿ ಕುಟೀರ ಟ್ರೋಫಿ 2023

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕೋಟ-ಗಿಳಿಯಾರು ಫ್ರೆಂಡ್ಸ್ ಗ್ರೂಪ್ ಇವರ ಆಶ್ರಯದಲ್ಲಿ ಕ್ರೀಡಾ ಸಂಘಟಕ‌ ಮತ್ತು ಕ್ರೀಡಾಪಟು ಅಮರ್ ಶೆಟ್ಟಿ ಗಿಳಿಯಾರು ಇವರ ಸಾರಥ್ಯದಲ್ಲಿ ಸತತ 6 ನೇ ಬಾರಿಗೆ,ಸಮಾಜ ಸೇವೆಯ ಸದುದ್ದೇಶದಿಂದ ಫೆಬ್ರವರಿ 18 ಮತ್ತು 19 ರಂದು ಗಿಳಿಯಾರು ಹಕ್ಕಲ್ ಮೈದಾನದಲ್ಲಿ “ಕುಟೀರ ಟ್ರೋಫಿ-2023” ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ  ಆಯೋಜಿಸಲಾಗಿದೆ.
ಗಿಳಿಯಾರು ಪರಿಸರದ ಯುವ ಪ್ರತಿಭೆಗಳ‌‌ ಅನ್ವೇಷಣೆ ಸಲುವಾಗಿ ಜಿ.ಪಿ.ಎಲ್- ಗಿಳಿಯಾರು ಪ್ರೀಮಿಯರ್ ಲೀಗ್ ಹಮ್ಮಿಕೊಂಡಿದ್ದು,10 ತಂಡಗಳು ಭಾಗವಹಿಸಲಿದ್ದು,ಈ ಪಂದ್ಯ ಶನಿವಾರ ರಾತ್ರಿ 7.30 ಗಂಟೆಗೆ ನಡೆಯುವ ಉದ್ಘಾಟನೆಯ ಬಳಿಕ ನಡೆಯಲಿದೆ.
19 ರವಿವಾರ ಮಧ್ಯಾಹ್ನ 2 ಗಂಟೆಯ ಬಳಿಯ ಏರಿಯಾ ವೈಸ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದ್ದು ಈಗಾಗಲೇ 16 ತಂಡಗಳು ನೋಂದಣಿ ಮಾಡಿಕೊಂಡಿದ್ದು,ಭಾಗವಹಿಸಲಿಚ್ಚಿಸುವ ತಂಡಗಳು ಅಮರ್ ಶೆಟ್ಟಿ-9164199241ಇವರನ್ನು ಸಂಪರ್ಕಿಸಬಹುದು.
ಪಂದ್ಯಾಟದ ಪ್ರಥಮ ಪ್ರಶಸ್ತಿ 30 ಸಾವಿರ ನಗದು,ದ್ವಿತೀಯ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ಬೆಸ್ಟ್ ಬ್ಯಾಟರ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಕೀಪರ್ ಬಹುಮಾನ ರೂಪದಲ್ಲಿ ಸ್ಮಾರ್ಟ್ ವಾಚ್ ಮತ್ತು ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದ ಆಟಗಾರ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ‌.
ಅಮರ್ ಶೆಟ್ಟಿ ಸಾರಥ್ಯದ ಗಿಳಿಯಾರು ಫ್ರೆಂಡ್ಸ್ ಗ್ರೂಪ್ ಇದುವರೆಗೂ ಪಂದ್ಯಾಟದಲ್ಲಿ ಉಳಿದ ಹಣವನ್ನು ಜಿಲ್ಲೆಯ ವಿವಿಧ ಸಮಾಜಸೇವಾ ನಿರತ ಆಶ್ರಮಕ್ಕೆ ನೀಡುತ್ತಾ ಬಂದಿದ್ದು,ಈ ಬಾರಿ ನಾರಾಯಣ ವಿಶೇಷ ಚೇತನ ಟ್ರಸ್ಟ್ ಗೆ ನೀಡಲಿದ್ದಾರೆ.ಹಾಗೂ ಗಿಳಿಯಾರಿನ ಕ್ರೀಡಾ ಸಾಧಕರಿಗೆ ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

5 × 1 =