6.2 C
London
Tuesday, December 3, 2024
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ವಿಶ್ವಕರ್ಮ ಸಮಾಜದ ಅಶಕ್ತ ಕುಟುಂಬಗಳ ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ-ವಿಶ್ವಕರ್ಮ‌ ಪ್ರೀಮಿಯರ್ ಲೀಗ್ 2023

ವಿಶ್ವಕರ್ಮ ಸಮಾಜದ ಅಶಕ್ತ ಕುಟುಂಬಗಳ ವೈದ್ಯಕೀಯ ಚಿಕಿತ್ಸೆ ನೆರವಿಗಾಗಿ-ವಿಶ್ವಕರ್ಮ‌ ಪ್ರೀಮಿಯರ್ ಲೀಗ್ 2023

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಪೆರ್ಡೂರು-ಇತ್ತೀಚೆಗಷ್ಟೇ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೈಲೂರಿನ ಅಂಕಿತಾ ಆಚಾರ್ಯ ಮತ್ತು ಕುಂದಾಪುರ ಬೆಳ್ಳಾಲ ಗ್ರಾಮದ ಮೋರ್ಟು ನಿವಾಸಿ ಪ್ರಭಾಕರ ಆಚಾರ್ಯ ಮತ್ತು ಮಕ್ಕಳಾದ ಪೂಜಾ ಮತ್ತು ಪ್ರಜ್ವಲ್ ಇವರ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡುವ ಸಲುವಾಗಿ ಕದಳಿ ಪ್ರಿಯ ಕ್ರಿಕೆಟರ್ಸ್ ಪೆರ್ಡೂರು ಇವರ ಆಶ್ರಯದಲ್ಲಿ ಫೆಬ್ರವರಿ 18 ಶನಿವಾರ ಮತ್ತು 19 ಭಾನುವಾರ ಪೆರ್ಡೂರು ಹೈಸ್ಕೂಲು ಮೈದಾನದಲ್ಲಿ ವಿಶ್ವಕರ್ಮ ಪ್ರೀಮಿಯರ್ ಲೀಗ್-2023 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಹಿರಿಯ ಆಟಗಾರರು ಮತ್ತು ಕ್ರೀಡಾ ಸಂಘಟಕರಾದ  ಮಾಧವ ಆಚಾರ್ ಪೆರ್ಡೂರು ಇವರ ಸಾರಥ್ಯದ ಕದಳಿಪ್ರಿಯ ಕ್ರಿಕೆಟರ್ಸ್ ಪೆರ್ಡೂರು ತಂಡ,ವಿಶ್ವಕರ್ಮ ಸಮಾಜದ ಕ್ರಿಕೆಟ್ ಪಂದ್ಯಾಟದ ಹಲವಾರು ಪ್ರಶಸ್ತಿಗಳನ್ನು ಜಯಿಸಿದೆ ಹಾಗೂ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.
ಫೆಬ್ರವರಿ 18 ಶನಿವಾರದಂದು ಯಾವುದೇ ರಾಜ್ಯ ಮಟ್ಟದ ಆಟಗಾರರು ಭಾಗವಹಿಸಲು ಅವಕಾಶವಿಲ್ಲ ಹಾಗೂ 19 ರವಿವಾರದಂದು ಒಂದೊಂದು ತಂಡದಲ್ಲಿ 4 ರಾಜ್ಯ ಮಟ್ಟದ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಪಂದ್ಯಾಟದ ಪ್ರಥಮ ಪ್ರಶಸ್ತಿ 40,001ರೂ ನಗದು ಮತ್ತು ದ್ವಿತೀಯ ಸ್ಥಾನಿ 20,001ರೂ ನಗದು,ತೃತೀಯ ಮತ್ತು ಚತುರ್ಥ ಸ್ಥಾನಿ ತಂಡಗಳಿಗೂ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ವಿಶೇಷ ಪ್ರಶಸ್ತಿ ಮತ್ತು ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದ ಆಟಗಾರನಿಗೆ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತಿದೆ.
ಬಡ ಅಶಕ್ತ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ವಿಶ್ವಕರ್ಮ ಸಮಾಜದ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

2 × two =