ಕೋಟ-ಗಿಳಿಯಾರು ಫ್ರೆಂಡ್ಸ್ ಗ್ರೂಪ್ ಇವರ ಆಶ್ರಯದಲ್ಲಿ ಕ್ರೀಡಾ ಸಂಘಟಕ ಅಮರ್ ಶೆಟ್ಟಿ ಗಿಳಿಯಾರು ಇವರ ಸಾರಥ್ಯದಲ್ಲಿ ಸತತ 6 ನೇ ಬಾರಿಗೆ,ಸಮಾಜ ಸೇವೆಯ ಸದುದ್ದೇಶದಿಂದ ಫೆಬ್ರವರಿ 18 ಮತ್ತು 19 ರಂದು ಗಿಳಿಯಾರು ಹಕ್ಕಲ್ ಮೈದಾನದಲ್ಲಿ “ಕುಟೀರ ಟ್ರೋಫಿ-2023” ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಶನಿವಾರ ರಾತ್ರಿ 7.30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು,ತದ ನಂತರ ಏರಿಯಾ ವೈಸ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಈಗಾಗಲೇ 16 ತಂಡಗಳು ನೋಂದಣಿ ಮಾಡಿಕೊಂಡಿದ್ದು,
ಭಾಗವಹಿಸಲಿಚ್ಚಿಸುವ ತಂಡಗಳು ಅಮರ್ ಶೆಟ್ಟಿ-9164199241ಇವರನ್ನು ಸಂಪರ್ಕಿಸಬಹುದು.
ಗಿಳಿಯಾರು ಪರಿಸರದ ಯುವ ಪ್ರತಿಭೆಗಳ ಅನ್ವೇಷಣೆ ಸಲುವಾಗಿ,ರವಿವಾರ ಮಧ್ಯಾಹ್ನ 2.30 ಗೆ ಸರಿಯಾಗಿ ಜಿ.ಪಿ.ಎಲ್- ಗಿಳಿಯಾರು ಪ್ರೀಮಿಯರ್ ಲೀಗ್ ಹಮ್ಮಿಕೊಂಡಿದ್ದು,10 ತಂಡಗಳು ಭಾಗವಹಿಸಲಿದ್ದು,ಈ
ಪಂದ್ಯಾಟದ ಪ್ರಥಮ ಪ್ರಶಸ್ತಿ 30 ಸಾವಿರ ನಗದು,ದ್ವಿತೀಯ 20 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಹಾಗೂ ಬೆಸ್ಟ್ ಬ್ಯಾಟರ್, ಬೆಸ್ಟ್ ಬೌಲರ್ ಮತ್ತು ಬೆಸ್ಟ್ ಕೀಪರ್ ಬಹುಮಾನ ರೂಪದಲ್ಲಿ ಸ್ಮಾರ್ಟ್ ವಾಚ್ ಮತ್ತು ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದ ಆಟಗಾರ ಆಕರ್ಷಕ ಸೈಕಲ್ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
ಅಮರ್ ಶೆಟ್ಟಿ ಸಾರಥ್ಯದ ಗಿಳಿಯಾರು ಫ್ರೆಂಡ್ಸ್ ಗ್ರೂಪ್ ಇದುವರೆಗೂ ಪಂದ್ಯಾಟದಲ್ಲಿ ಉಳಿದ ಹಣವನ್ನು ಜಿಲ್ಲೆಯ ವಿವಿಧ ಸಮಾಜಸೇವಾ ನಿರತ ಆಶ್ರಮಕ್ಕೆ ನೀಡುತ್ತಾ ಬಂದಿದ್ದು,ಈ ಬಾರಿ ನಾರಾಯಣ ವಿಶೇಷ ಚೇತನ ಟ್ರಸ್ಟ್ ಗೆ ನೀಡಲಿದ್ದಾರೆ.ಹಾಗೂ ಗಿಳಿಯಾರಿನ ಕ್ರೀಡಾ ಸಾಧಕರಿಗೆ ಮತ್ತು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ.