ಫ್ರೆಂಡ್ಸ್ ಕೋಡಿ ಉಳ್ಳಾಲ ಇವರ ಆಶ್ರಯದಲ್ಲಿ ಕ್ರೀಡಾ ಪ್ರೋತ್ಸಾಹಕರಾದ ಲತೀಫ್,ರಶೀದ್,ಅಲ್ತಾಫ್,ಶಾಕಿರ್ ಸಾರಥ್ಯದಲ್ಲಿ ಸಂಸ್ಥೆಯ ಸದಸ್ಯರ ಸಹಯೋಗದೊಂದಿಗೆ,
ಡಿಸೆಂಬರ್ 31 ಜನವರಿ 1,2,3 ಈ ನಾಲ್ಕು ದಿನಗಳ ಕಾಲ ಉಳ್ಳಾಲದ ಆಟಗಾರರಿಗೆ ಸೀಮಿತವಾಗಿ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ “ಫ್ರೆಂಡ್ಸ್ ಕೋಡಿ ಟ್ರೋಫಿ” ಆಯೋಜಿಸಲಾಗಿದೆ.
ಉಳ್ಳಾಲದ ಸೀ ಗ್ರೌಂಡ್ ನಲ್ಲಿ ನಡೆಯಲಿರುವ ಈ ಪಂದ್ಯಾವಳಿ
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿದೆ.
ಪ್ರಥಮ ಪ್ರಶಸ್ತಿ ವಿಜೇತ ತಂಡ 1 ಲಕ್ಷ ನಗದು,ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡುವ ಆಟಗಾರರಿಗೆ ಬಹುಮಾನ ನೀಡಿ ಗೌರವಿಸಲಾಗುತ್ತಿದೆ.
M 9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ಮೂಲಕ ಪಂದ್ಯಾವಳಿಯ ನೇರ ಪ್ರಸಾರ ವೀಕ್ಷಿಸಬಹುದಾಗಿದೆ.