ದಾವಣಗೆರೆ ಇಲೆವೆನ್ಸ್ ಹಾಗೂ ಜಿಲ್ಲಾ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಇವರ ಆಶ್ರಯದಲ್ಲಿ ದಾವಣಗೆರೆಯ ವಿಧಾನಸಭಾ ಸದಸ್ಯ ಶ್ಯಾಮನೂರು ಶಿವಶಂಕರಪ್ಪನವರ ಧರ್ಮಪತ್ನಿ ದಿ||ಪಾರ್ವತಮ್ಮನವರ ಸವಿ ನೆನಪಿನ ಅಂಗವಾಗಿ,ದಾವಣಗೆರೆಯ ಸತತ 13 ನೇ ಬಾರಿಗೆ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎಸ್.ಎಸ್. ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ನ್ನು ರೇಣು ಗೌಡ ಸಾರಥ್ಯದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ.
ರಾಷ್ಟ್ರೀಯ ಮಟ್ಟದಲ್ಲಿ ದಾಖಲೆ ಸೃಷ್ಟಿಸಿದ ಈ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರ,ಚೆನ್ನೈ ಹಾಗೂ ಕರ್ನಾಟಕ ರಾಜ್ಯ ಸೇರಿ ಒಟ್ಟು 36 ತಂಡಗಳು ಸೆಣಸಾಡಿದ್ದವು.
ಲೀಗ್ ಹಂತದ ರೋಚಕ ಪಂದ್ಯಗಳ ಬಳಿಕ ರೋಚಕ ಸೆಮಿಫೈನಲ್ ನಲ್ಲಿ ಕ್ರಮವಾಗಿ ದಾವಣಗೆರೆ ಇಲೆವೆನ್ ಮಹಾರಾಷ್ಟ್ರದ ಸಾಯಿಶ್ ಇಲೆವೆನ್ ತಂಡವನ್ನು ಹಾಗೂ ಫ್ರೆಂಡ್ಸ್ ಬೆಂಗಳೂರು,ಜಾನ್ಸನ್ ರಿಯಲ್ ಫೈಟರ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ದಾವಣಗೆರೆಯ ಜನಪ್ರಿಯ ಇಲೆವೆನ್ ತಂಡ ನೀಡಿದ್ದ 36 ರನ್ ಗಳ ಗುರಿಯನ್ನು ಫ್ರೆಂಡ್ಸ್ ಬೆಂಗಳೂರು ತಂಡದ ಅಗ್ರ ಕ್ರಮಾಂಕದ ದಾಂಡಿಗರ ಸಾಹಸದಿಂದ ಪ್ರತಿಷ್ಟಿತ ಪ್ರಶಸ್ತಿಯನ್ನು ಫ್ರೆಂಡ್ಸ್ ಬೆಂಗಳೂರು ತನ್ನದಾಗಿಸಿಕೊಂಡಿತ್ತು.
ಶನಿವಾರ ಸಂಜೆ ನಡೆದ ಪ್ರದರ್ಶನ ಪಂದ್ಯದಲ್ಲಿ ಮಹಾರಾಷ್ಟ್ರ ಇಲೆವೆನ್ ತಂಡ ಕರ್ನಾಟಕ ಇಲೆವೆನ್ ತಂಡವನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದರು.
ಆಫಿಶಿಯಲ್ ಪಂದ್ಯದಲ್ಲಿ ದಾವಣಗೆರೆ ನಗರ ಪಾಲಿಕೆಯ ತಂಡ ಡಾಕ್ಟರ್ಸ್ ಇಲೆವೆನ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿತ್ತು.
ಪ್ರಶಸ್ತಿ ವಿಜೇತ ಫ್ರೆಂಡ್ಸ್ ಬೆಂಗಳೂರು
ತಂಡ ಶ್ಯಾಮನೂರು-ಶಿವಗಂಗಾ ಟ್ರೋಫಿ ಸಹಿತ 3.5 ಲಕ್ಷ ನಗದು,ದ್ವಿತೀಯ ಸ್ಥಾನಿ ದಾವಣಗೆರೆ ಇಲೆವೆನ್ ತಂಡ 2.25 ಲಕ್ಷ ಹಾಗೂ ತೃತೀಯ ಸ್ಥಾನಿ 1.25 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.ಸಮಾರೋಪ ಸಮಾರೋಪ ಸಮಾರಂಭದಲ್ಲಿ
ಗಣ್ಯರಾದ ಶಿವಗಂಗಾ ಶ್ರೀನಿವಾಸ್,ದಿನೇಶ್.ಕೆ.ಶೆಟ್ಟಿ, ಕುರುಡಿ ಗಿರೀಶ್,ಟೂರ್ನಮೆಂಟ್ ನ ರೂವಾರಿ ಜಯಪ್ರಕಾಶ್ ಗೌಡ(ಜೆ.ಪಿ),ಹಾಲಪ್ಪ,ಮಧು ಮಹೇಶ್ ಪಟೇಲ್ ಇನ್ನಿತರರು ಉಪಸ್ಥಿತರಿದ್ದರು.
ಟೂರ್ನಮೆಂಟ್ ನ ನೇರ ಪ್ರಸಾರವನ್ನು M ಸ್ಪೋರ್ಟ್ಸ್ ಬಿತ್ತರಿಸಿದ್ದು,ವೀಕ್ಷಕ ವಿವರಣೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ
ಪ್ರಶಾಂತ್ ಅಂಬಲಪಾಡಿ ಹಾಗೂ ಹಿರಿಯ ಕಾಮೆಂಟೇಟರ್ ವಿನಯ್ ಉದ್ಯಾವರ ಭಾಗವಹಿಸಿದ್ದು,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ಮಧು ಮೈಸೂರು ತಂಡ ಹಾಗೂ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಿದರು.