9.9 C
London
Thursday, October 3, 2024
Homeಕ್ರಿಕೆಟ್ಕತ್ತಲಿಗೆ ಸವಾಲೊಡ್ಡಿ ನಿಂತು ಮೊಬೈಲ್ ಫ್ಲಾಶ್ ಲೈಟ್ ನಲ್ಲಿ ನಡೆದು ಇತಿಹಾಸ ಸೃಷ್ಟಿಸಿದ ಪಂದ್ಯಾಕೂಟ

ಕತ್ತಲಿಗೆ ಸವಾಲೊಡ್ಡಿ ನಿಂತು ಮೊಬೈಲ್ ಫ್ಲಾಶ್ ಲೈಟ್ ನಲ್ಲಿ ನಡೆದು ಇತಿಹಾಸ ಸೃಷ್ಟಿಸಿದ ಪಂದ್ಯಾಕೂಟ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಇದೇ 2020 ನವೆಂಬರ್ ತಿಂಗಳ ಕೊನೆಯ ಆದಿತ್ಯವಾರದ ಉಡುಪಿ ಪೆರ್ಡೂರು ಸಮೀಪದ  ದೊಂಡೆರಂಗಡಿ ಎಂಬಲ್ಲಿ  40ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ರೈಸಿಂಗ್ ಸ್ಟಾರ್ ಸಂಘಟಕತ್ವದಲ್ಲಿ ನಡೆಯುತಿತ್ತು.ಸುಮಾರು 34 ತಂಡಗಳು ಭಾಗವಹಿಸಿದ್ದವು ಟೂರ್ನಿಯ ಶುರುವಿನಿಂದಲೂ “ಈ  ಟೂರ್ನಿ ಒಂದು ದಿನದಲ್ಲಿ ಮುಗಿದು ವಿನ್ನರ್ ಪಲಿತಾಂಶ ಬರುವುದು ಅಸಾಧ್ಯ”ವೆಂಬ ಮಾತುಗಳು ಕೇಳಿಬರುತ್ತಿತ್ತು.
 ಎಲ್ಲರೂ ಅಂದಾಜಿಸಿದಂತೆ ಕ್ವಾಟರ್ ಫೈನಲ್, ನಡೆಯುವಾಗಲೇ ಲೇಟ್ ಈವ್ನಿಂಗ್.
 ಸೆಮಿಫೈನಲ್ ಕೊನೆಗಳುತ್ತಿದ್ದಂತೆ ಕತ್ತಲು ಕವಿದು ಬಿಟ್ಟು ಇನ್ನೇನು ಫೈನಲ್ ನಡೆಯದಿರುವಂತಹ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಸಂಘಟಕರು ಟಾಸ್, ಬಾಲೌಟ್ ಎಂದು ಚರ್ಚೆ ನಡೆಸುತ್ತಿದ್ದಂತೆ ಎರಡು ತಂಡದ ಆಟಗಾರರು ಇದ್ಯಾವುದಕ್ಕೂ ಸಮ್ಮತಿಸದೇ ಪಂದ್ಯವನ್ನು ಹೇಗಾದರೂ ಮಾಡಿ ನಡೆಸುವ ಬಗ್ಗೆ ಒಲವು ತೋರುತ್ತಾರೆ. ವಿನ್ನರ್ ಟ್ರೋಫಿಯನ್ನು ಪಂದ್ಯ ಆಡಿ ಜಯಿಸಿಯೇ ಪಡೆಯಬೇಕೆಂಬ ಇರಾದೆ ಎರಡು ತಂಡದವರದ್ದಾಗಿತ್ತು.
 ಈ ಪರಿಸ್ಥಿತಿ ಸಂಘಟಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿ ಕೊನೆಗೆ ಸಂಘಟಕರು ಮತ್ತು ಅನಿಶ್ ಶೆಟ್ಟಿ ತುಂಬಾ ಹೊತ್ತು ಚರ್ಚಿಸಿ ಕತ್ತಲಲ್ಲಿ ಪಂದ್ಯ ನಡೆಸುವ ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ಸಂಘಟಕರು ಮತ್ತು ಅಂಪಾಯರ್ ಗಳು  ಪ್ರೇಕ್ಷಕವರ್ಗದಲ್ಲಿ ತಮ್ಮಲ್ಲಿರುವ ಎಲ್ಲ ಮೊಬೈಲ್ ಗಳ ಫ್ಲಾಶ್ ಲೈಟ್  ಅನ್ನು ಆನ್ ಮಾಡಲು ವಿನಂತಿಸಿದರು . ಒಂದು ಎರಡರಿಂದ ಶುರುವಾದ ಫ್ಲಾಶ್ ಲೈಟ್ ಇಡೀ ಗ್ರೌಂಡ್ ಅನ್ನು ಕತ್ತಲೆಗೆ ಸವಾಲೆಸೆಯುವಂತೆ ಸುಮಾರು 100 ಫ್ಲಾಶ್ ಲೈಟ್ ಗಳು ಗ್ರೌಂಡ್ ಅನ್ನು ಬೆಳಗುತ್ತದೆ. ಫೈನಲ್ ಪಂದ್ಯಾಟ ಯಾವುದೇ ಅಡೆತಡೆಯಿಲ್ಲದೆ ನಡೆದು ವಿನ್ನರ್ ಮತ್ತು ರನ್ನರ್ ಫಲಿತಾಂಶ ಮೂಡಿಬರುತ್ತದೆ.  ಪಂದ್ಯಾಟದಲ್ಲಿ ಹೆಬ್ರಿ ಬ್ರದರ್ ವಿನ್ನರ್ ಆಗಿ ಮೂಡಿ ಬಂದರೆ ರನ್ನರ್ ಪಟ್ಟ ಸವಾರಿ ಫ್ರೆಂಡ್ಸ್ ಪಡೆದುಕೊಂಡಿತು.
ಅಂಡರ್ ಆರ್ಮ್ ಕ್ರಿಕೆಟ್ ಇತಿಹಾಸದಲ್ಲಿ ಫ್ಲಾಶ್ ಲೈಟ್ ನಲ್ಲಿ ನಡೆದ ಮೊದಲ ಪಂದ್ಯ ಇದು ಆಗಿರುತ್ತದೆ. ಆಟಗಾರರ ಕ್ರೀಡಾ ಪ್ರೇಮ, ಪ್ರೇಕ್ಷಕರ ಕ್ರೀಡಾಸಕ್ತಿ, ಹಾಗೂ ಸಂಘಟಕರ ಸಮಯೋಚಿತ ನಿರ್ಧಾರ ಪಂದ್ಯಾಟದ ಯಶಸ್ಸಿಗೆ ಕಾರಣವಾಯಿತು.
 ಇಲ್ಲಿ ಪಂದ್ಯಾಟದ ಯಶಸ್ಸು ಕೂಡ ಒಂದು ಸಾಧನೆಯಾದರೂ ಕ್ರೀಡಾಪಟುಗಳ ಹಾಗೂ ಪ್ರೇಕ್ಷಕ ವರ್ಗದ ಕ್ರೀಡಾ ಪ್ರೇಮ ತುಂಬಾ ಇಷ್ಟವಾಗಿ ಕ್ರೀಡಾ ಸ್ಫೂರ್ತಿಗೆ ನಿದರ್ಶನವಾದ  ಪಂದ್ಯಾಕೂಟ.
Hats off to your “CRICKET LOVE”
Live cricket Love cricket.

ಅಶೋಕ್ ಹೆಗ್ಡೆ ಹೆಬ್ರಿ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

three × one =