16.3 C
London
Monday, September 9, 2024
Homeಕ್ರಿಕೆಟ್ದಶಕ ಕಂಡ "ವೇಗ ದೂತ ವಿಕ್ರಮ"- ದಿನೇಶ್ ಗಾಣಿಗ ಬೈಂದೂರು

ದಶಕ ಕಂಡ “ವೇಗ ದೂತ ವಿಕ್ರಮ”- ದಿನೇಶ್ ಗಾಣಿಗ ಬೈಂದೂರು

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img

 

ದೊಡ್ಡ ಯಶಸ್ಸು ಎನ್ನುವುದು ಸಾವಿರಾರು ಸಣ್ಣ ಸಣ್ಣ ಪ್ರಯತ್ನಗಳ ಒಟ್ಟು ಮೊತ್ತ. ಪ್ರತಿಯೊಬ್ಬ ವ್ಯಕ್ತಿ ಕೂಡಾ ಸಮಾಜ ಮುಖಿಯಾದಾಗ ಆತ ಸಾಧನೆಯ ಹೆಜ್ಜೆಯ ನ್ನು ಮೂಡಿಸುತ್ತಾನೆ ಜೊತೆಗೆ ಜೀವನದಲ್ಲಿ ಸಾಧನೆಯನ್ನು ಮಾಡುತ್ತಾನೆ

ವಾಹನದಲ್ಲಿ ಇರುವ ಕನ್ನಡಿಯಲ್ಲಿ ಒಂದು ಸೂಚನೆ ಇದೆ “ಕನ್ನಡಿಯಲ್ಲಿ ಕಾಣುವ ವಸ್ತುಗಳು ವಾಸ್ತವಕ್ಕಿಂತ ಹೆಚ್ಚು ಹತ್ತಿರ ಇರುತ್ತದೆ ಎಚ್ಚರ”. ನಾವು ನೋಡುತ್ತಿರುವುದು ದೂರದಲ್ಲಿ ಇದೆ ಎಂದು ಭಾವಿಸಿರುವ ನಮಗೆ ಅದು ಹತ್ತಿರದಲ್ಲೇ ಇದೆ ಅನ್ನುವುದು ಅರ್ಥ ಮಾಡಿಕೊಳ್ಳಬೇಕು.

ಇದು ಬಹುಶಃ 80 – 90 ರ ದಶಕದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಟೆನ್ನಿಸ್ ಬಾಲ್ ಕ್ರಿಕೆಟ್ ಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮೆರೆದ ಸಕ್ರಿಯ ಕ್ರಿಕೆಟ್ ಆಟಗಾರ, ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಎಸೆತಗಳ ಸರದಾರ ಎಲ್ಲರ ಮೆಚ್ಚಿನ ದಿನೇಶ್ ಬೈಂದೂರು.
“ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯ ಇದೆ” ಅನ್ನುವ ಮಾತಿಗೆ ಪೂರಕವಾಗಿ ಅಪಾರ ಶ್ರದ್ಧೆ ಮತ್ತು ಬದ್ಧತೆಯನ್ನು ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಸಾಧಕ, ಎಸ್ ಎಸ್ ಎಲ್ ಸಿ ನಂತರ 1985 ರಲ್ಲಿ “ವಿಕ್ರಮ್” ಕ್ರಿಕೆಟ್ ಸಂಸ್ಥೆ ಗೆ ಸೇರಿಕೊಂಡು “ಕಾಲ ಅನ್ನುವುದು ನಿಂತ ನೀರಲ್ಲ, ಹರಿಯುತ್ತಿರುವ ಪ್ರವಾಹ “ಅಂತ ಮನಗಂಡು ನಿರಂತರ 18 ವರ್ಷ ಆ ಸಂಸ್ಥೆಯಲ್ಲಿ ಒಬ್ಬ ಕ್ರಿಯಾಶೀಲ ಆಡಳಿತ ಸದಸ್ಯ ಆಗುವುದರ ಜೊತೆಗೆ ಮುಂದಕ್ಕೆ ಸಂಸ್ಥೆಯ ಕಾರ್ಯದರ್ಶಿ ಆಗಿ 4 ಬಾರಿ ರಾಜ್ಯ ಮಟ್ಟ ಮತ್ತು 14 ಬಾರಿ ಜಿಲ್ಲಾ ಮಟ್ಟದ ಪಂದ್ಯಾಟ ಆಯೋಜಿಸುವಲ್ಲಿ ಸಾಫಲ್ಯವನ್ನು ಕಂಡಿದ್ದಾರೆ.

“ವಿಕ್ರಮ್” ಕ್ರಿಕೆಟ್ ತಂಡದ ಒಬ್ಬ ವಿನೂತನ ಆಟಗಾರನಾಗಿ, ನಾಯಕನಾಗಿ ಉಡುಪಿ, ಕುಂದಾಪುರ, ಕಾಪು, ಶಿರ್ವ, ಮಂಚಕಲ್, ಗಂಗೊಳ್ಳಿ, ಸಾಗರ, ಹೊಸನಗರ, ಸಿದ್ದಾಪುರ, ಶಿರಾಲಿ, ಭಟ್ಕಳ, ಶಿರೂರು, ಕೊಲ್ಲೂರು ಮುಂತಾದ ಅನೇಕ ಕಡೆಗಳಲ್ಲಿ ನಡೆದ ರಾಜ್ಯ ಮತ್ತು ತಾಲ್ಲೂಕು ಮಟ್ಟದ ಪಂದ್ಯದಲ್ಲಿ ತಮ್ಮ ತಂಡವನ್ನು ಪ್ರತಿನಿಧಿಸಿ ತಂಡಕ್ಕೆ ಗೆಲುವು ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಜೊತೆಗೆ ಹಲವು ಬಾರಿ ವೈಯಕ್ತಿಕ ಪಂದ್ಯ ಶ್ರೇಷ್ಠ, ಉತ್ತಮ ಎಸೆತಗಾರ ಸರಣಿ ಶ್ರೇಷ್ಠ ಪ್ರಶಸ್ತಿ ಪುರಸ್ಕೃತ, ಸವ್ಯಸಾಚಿ ಬೆಂಗಳೂರು, ಚಕ್ರವರ್ತಿ ಕುಂದಾಪುರ,ಟೊರ್ಪೆಡೋಸ್ ಕುಂದಾಪುರ ಮುಂತಾದ ಅನೇಕ ತಂಡವನ್ನು ಪ್ರತಿನಿಧಿಸಿದ ಕೀರ್ತಿ ಇವರದ್ದು, ಅಲ್ಲದೆ ಅನೇಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಂದ್ಯದಲ್ಲಿ ತೀರ್ಪುಗಾರರಾಗಿ, ಸಲಹೆಗಾರರಾಗಿ ಭಾಗವಹಿಸಿದ್ದರು ಅನ್ನುವುದು ಹೆಮ್ಮೆಯ ಸಂಗತಿ.

ಚಕ್ರವರ್ತಿ ತಂಡ ಕುಂದಾಪುರ ಎದುರಿಗಿನ ಫೈನಲ್ ಪಂದ್ಯ ಆಡುವ ಸಂದರ್ಭದಲ್ಲಿ ಮೊದಲ ಓವರ್ ನಲ್ಲೇ ಚಕ್ರವರ್ತಿಗಳ ಅಗ್ರಕ್ರಮಾಂಕದ ಮೂರು ಆಟಗಾರರನ್ನು ಬೌಲ್ಡ್ ಮಾಡುವ ಮೂಲಕ ಗಮನ ಸೆಳೆದು,ರಾಜ್ಯ ಮಟ್ಟದ ಪಂದ್ಯಾವಳಿಗಳಲ್ಲಿ ಚಕ್ರವರ್ತಿಗಳ ಪರವಾಗಿ ಆಡುವ ಅವಕಾಶ ಪಡೆದರು.
ಆತ್ಮೀಯ ಸ್ನೇಹಿತರಾದ ಟೊರ್ಪೆಡೋಸ್ ನ ಸವ್ಯಸಾಚಿ ಕೆ.ಸಿ.ಹರೀಶ್ ಮೂಲಕ ಟೊರ್ಪೆಡೋಸ್ ತಂಡವನ್ನು ಹಾಗೂ ಕೋಟೇಶ್ವರದ ಶ್ರೇಷ್ಠ ತಂಡ ಕಾಸ್ಮೊಪಾಲಿಟಿನ್ ತಂಡಗಳಲ್ಲಿ ಆಡುವ ಅವಕಾಶವನ್ನು ಪಡೆದರು.

 

ಒಮ್ಮೊಮ್ಮೆ ಬೌಲಿಂಗ್ ನಲ್ಲಿ ವಿಫಲವಾದಾಗ ಚಕ್ರವರ್ತಿಗಳ ಕಪ್ತಾನ‌ ಶ್ರೀಪಾದ ಉಪಾಧ್ಯರು
ಧೈರ್ಯ ತುಂಬಿ ಮುಂದಿನ ಪಂದ್ಯಾವಳಿಗಳಿಗೆ ಹುರಿದುಂಬಿಸುತ್ತಿದ್ದರು.

ರಾಜ್ಯ ಮಟ್ಟದ ಪಂದ್ಯಾವಳಿಗಳ ಮೆಲುಕು ಹಾಕುವ ಸಂದರ್ಭದಲ್ಲಿ ಟೊರ್ಪೆಡೋಸ್ ನ ಗೌತಮ್ ಶೆಟ್ಟಿ,ಪಡುಬಿದ್ರಿ ಫ್ರೆಂಡ್ಸ್ ನ ಶರತ್ ಶೆಟ್ಟಿ, ಸವ್ಯಸಾಚಿ ವಿಜಯ್ ಹೆಗ್ಡೆ ಹಾಗೂ ಬೆಂಗಳೂರಿನ ತಂಡಗಳನ್ನು ಸದಾ ಸ್ಮರಿಸುತ್ತಾರೆ.

ಒಬ್ಬ ಆಟಗಾರ ತನ್ನ ಆರೋಗ್ಯವನ್ನು ಹೇಗೆ ಕಾಪಾಡಿ ಕೊಳ್ಳಬೇಕು ಅನ್ನುವುದು ಬಹುಶಃ ದಿನೇಶ್ ಅವರಿಂದ ತಿಳಿಯಬಹುದಾಗಿದೆ. ದಿನದಲ್ಲಿ ಒಂದಷ್ಟು ಸಮಯ ನಡಿಗೆ, ಸ್ವಲ್ಪ ಹೊತ್ತು ಈಜು, ಇನ್ನು ಬಹುಶಃ ಯಾರೂ ಮಾಡದ ದೇಹ ದಂಡನೆ ಕಟ್ಟಿಗೆ ಒಡೆಯುವ ಮೂಲಕ ಮಾಡುತ್ತ ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಮಾಡುತ್ತಿದ್ದರು. ನಾವು ಕಂಡ ಹಲವಾರು ಆಟಗಾರರಲ್ಲಿ ಇಲ್ಲದ ಒಂದಿಷ್ಟು ಆರೋಗ್ಯ ಕಾಪಾಡಿ ಕೊಳ್ಳುವ ಗುಟ್ಟನ್ನು ಅವರಿಂದ ಕಲಿಯಬಹುದು. ಎಲ್ಲಾ ಆಟಗಾರರು ನಿಯಮಿತವಾಗಿ ಈ ಸಲಹೆಯನ್ನು ಪಾಲಿಸಿ ಕೊಂಡು ಬಂದರೆ ಹೆಚ್ಚು ಹೆಚ್ಚು ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಅನ್ನುವುದು ದಿನೇಶ್ ಅವರ ಅಭಿಪ್ರಾಯ.

ಕ್ರಿಕೆಟ್ ಕ್ಷೇತ್ರದ ಜೊತೆಗೆ ಜಾವಲಿನ್, ವಾಲಿಬಾಲ್, ಕಬಡ್ಡಿ, ಫುಟ್ಬಾಲ್ ಪಂದ್ಯದಲ್ಲಿ ಕೂಡ ಇವರದ್ದು ಎತ್ತಿದ ಕೈ. ಪ್ರತಿಷ್ಠಿತ ಕಲಾ ಸಂಸ್ಥೆ “ಲಾವಣ್ಯ” ದ ಸಕ್ರಿಯ ಸದಸ್ಯರು ಆಗಿದ್ದು ನಾಟಕ ರಂಗಗಳಲ್ಲೂ ಮಿಂಚಿದ ಇವರು ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಒಬ್ಬ ಆದರ್ಶ ವ್ಯಕ್ತಿತ್ವದ ವ್ಯಕ್ತಿ.
ನಿಟ್ಟೆ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಡಿಪ್ಲೊಮಾ ಇನ್ ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿರುವ ಇವರು ಅಲ್ಲಿಯೂ ಕೂಡ ಕಾಲೇಜ್ ತಂಡದ ಆಟಗಾರರಾಗಿ ಅಂತರ್ ಕಾಲೇಜು ಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಸೈ ಎನಿಸಿಕೊಂಡವರು.

 

ಜೀವನದಲ್ಲಿ ಎಲ್ಲವೂ ಕೂಡ ಪೂರ್ವ ನಿರ್ಧರಿತ, ನಾವು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಯಾವುದು ಕೂಡ ಕಿಂಚಿತ್ತೂ ಮೊದಲು ದಕ್ಕದು” ಇದು ಭಗವಾನ್ ಶ್ರೀ ಕೃಷ್ಣನ ಮಾತು. ಅಂತೆಯೇ ಎಲ್ಲವನ್ನೂ ತನ್ನ ಪಾಲಿನ ಸೌಭಾಗ್ಯ ಎಂದು ತಿಳಿದು ಬದುಕಿದ ಶ್ರೀಯುತ ದಿನೇಶ್ ಇವರು ಪ್ರಸ್ತುತ ಬೈಂದೂರಿನ ನಾಡಾ ಐ ಟಿ ಐ ನಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೆ ಬೈಂದೂರಿನ ಶ್ರೀನಿವಾಸ ಇಲೆಕ್ಟ್ರಿಕಲ್ಸ್ ನ ಮುಖ್ಯಸ್ಥರು ಜೊತೆಗೆ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್ ಇದರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿಭಾಗ ನಿರ್ದೇಶಕರು ಆಗಿರುವ ಇವರು ಬೈಂದೂರಿನ ಶ್ರೀಮತಿ ದೇವಮ್ಮ ಮತ್ತು ದಿವಂಗತ ಕೆ. ವೆಂಕಟ್ ಇವರ ಎರಡನೇ ಪುತ್ರ.


ಕಟ್ಟಿದ ಕನಸು ನನಸು ಆಗಲಿ, ನಿಮ್ಮ ಒಳ್ಳೆಯ ಕೆಲಸ ಮತ್ತೊಂದು ಒಳ್ಳೆಯ ಬೆಳವಣಿಗೆಗೆ ದಾರಿ ಆಗಲಿ, ನೀವು ನಡೆಯುವ ಪ್ರತಿಯೊಂದು ಹೆಜ್ಜೆಯೂ ಕೂಡ ಯಶಸ್ಸಿನ ಹೆಜ್ಜೆಯಾಗಲಿ. ನಿಮ್ಮ ಉತ್ತಮ ಬದುಕಿನ ನಂಬಿಕೆ ನಿಮ್ಮ ಬದುಕಿಗೆ ಅರ್ಥ ಕೊಡುವ ಬೆಳಕು ಆಗಲಿ, ಆ ಬೆಳಕು ಕ್ರಿಕೆಟ್ ಕ್ಷೇತ್ರದ ಸುತ್ತ ಪಸರಿಸುತ್ತಾ ಇರಲಿ. ಕ್ರಿಕೆಟ್ ಅನ್ನುವ ಸಪ್ತ ಸ್ವರಗಳ ಮಧುರ ಕ್ಷೇತ್ರಕ್ಕೆ ನಿಮ್ಮ ಶ್ರುತಿ ಯಾವತ್ತೂ ಹೊಮ್ಮುತ್ತ ಇರಲಿ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

thirteen − 6 =