ಮಂಗಳೂರು ಮತ್ತು ಸುತ್ತಮುತ್ತಲಿನ ಐಟಿ ಕಂಪನಿಗಳಿಗೆ ಕೋಸ್ಟಲ್ IT ಕ್ರಿಕೆಟ್ ಚಾಂಪಿಯನ್‌ಶಿಪ್ (ಕೋಸ್ಟಲ್ ಐಸಿಸಿ) ಎಂಬ ಶೀರ್ಷಿಕೆಯ ಅತಿದೊಡ್ಡ ಕಾರ್ಪೊರೇಟ್ ಫ್ಲಡ್‌ಲೈಟ್ ಕ್ರಿಕೆಟ್ ಪಂದ್ಯಾವಳಿಯನ್ನು ನೋವಿಗೋ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಸಂಸ್ಥೆಯವರು ಆಯೋಜಿಸಿರುತ್ತಾರೆ.

ಮಂಗಳೂರು ವಲಯದ ಹದಿನೈದು ಐಟಿ ಕಂಪನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಭಾಗದ ಐಟಿ ವೃತ್ತಿಪರರಿಂದ ಕ್ರಿಕೆಟ್ ಪ್ರತಿಭೆಯ ಅದ್ಭುತ ಪ್ರದರ್ಶನವನ್ನು ಕಾಣಬಹುದು. ಜನವರಿ 21 ಮತ್ತು 22 ರಂದು ಮಂಗಳೂರು ಸಹ್ಯಾದ್ರಿ ಸ್ಟೇಡಿಯಂನಲ್ಲಿ ಡೇ ಅಂಡ್ ನೈಟ್ ರೂಪವಾಗಿ ಲೀಗ್ ಕಮ್ ನಾಕ್ ಔಟ್ ಟೂರ್ನಮೆಂಟ್ ಆತ್ಯಂತ ವಿಜ್ರಂಭಣೆಯಾಗಿ ನಡೆಯಲಿದೆ.
ಪಂದ್ಯಾವಳಿಯ ವಿಜೇತರಿಗೆ 1 ಲಕ್ಷ ನಗದು ಬಹುಮಾನ ಮತ್ತು ಕೋಸ್ಟಲ್ ಐಸಿಸಿ ಟ್ರೋಫಿ ಹಾಗೂ ರನ್ನರ್ ಅಪ್ ತಂಡಕ್ಕೆ 50,000 ರೂ. ನಗದು ಬಹುಮಾನ ಜೊತೆಗೆ ರನ್ನರ್ ಅಪ್ ಟ್ರೋಫಿ ನೀಡಲಾಗುವುದು ಎಂದು ನೋವಿಗೋ ಸೊಲ್ಯೂಷನ್ಸ್ ಸಂಸ್ಥೆಯ HR ರಿಕ್ರೂಟ ರ್ Mr. ಗೋಪಾಲ್ ಪೈ ಸ್ಪೊರ್ಟ್ಸ್ ಕನ್ನಡಕ್ಕೆ ತಿಳಿಸಿರುತ್ತಾರೆ.
ಹಿರಿಯ ವೀಕ್ಷಕ ವಿವರಣೆಗಾರರಾಗಿರುವ ಸುರೇಶ್ ಭಟ್ ಮುಲ್ಕಿ, ಅಜಯ್ ರಾಜ್ ಮಂಗಳೂರು, ಅರವಿಂದ ಮಣಿಪಾಲ ಹಾಗೂ ರೂಬನ್ ಡಿಸೋಜ ಬಜಪೆ ಪಂದ್ಯಾವಳಿಯ ವೀಕ್ಷಕ ವಿವರಣೆಯಲ್ಲಿ ಸಹಕರಿಸಲಿದ್ದು, V4 ಚಾನೆಲ್ ಈ ಪಂದ್ಯಾವಳಿಯ ನೇರಪ್ರಸಾರವನ್ನು ಬಿತ್ತರಿಸಲಿಧೆ.