ಮುಂಬಯಿ,ಬೆಂಗಳೂರಿನ ಅತ್ಯಂತ ಪ್ರತಿಷ್ಟಿತ ಹೋಟೆಲ್ ಉದ್ಯಮವಾಗಿ ಗುರುತಿಸಿಕೊಂಡು,ಸುಮಾರು 5,000 ಕ್ಕೂ ಮಿಕ್ಕಿ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿದಪ್ರಸಿದ್ಧ ಸಂಸ್ಥೆ,ಸಮಾಜ ಸೇವಕರು,ವರಲಕ್ಷ್ಮೀ ಟ್ರಸ್ಟ್ ನ ಸಂಸ್ಥಾಪಕರು ಶ್ರೀ ಗೋವಿಂದ ಬಾಬು ಪೂಜಾರಿ ಯವರ ಒಡೆತನದ ಶೆಫ್ ಟಾಕ್ ಕಂಪೆನಿಯ ನೌಕರರಿಗಾಗಿ ವಿಶೇಷ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದರು.
ಬೆಂಗಳೂರಿನ ಸರ್ಜಾಪುರ ದೊಮ್ಮಸಂದ್ರ ಬಳಿಯ ನುವಾನ್ಸ್ ಸ್ಪೋರ್ಟ್ಸ್ ಗ್ರೌಂಡ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಫೈಟರ್ಸ್ ಶೆಫ್ ಟಾಕ್ ತಂಡ ಪ್ರಶಸ್ತಿ ಜಯಿಸಿದೆ.
ಹೋಟೆಲ್ ಉದ್ಯಮದಲ್ಲೇ ದಾಖಲೆ ಸ್ಥಾಪಿಸಿದ ಈ ಪಂದ್ಯಾವಳಿಯಲ್ಲಿ
ಶೆಫ್ ಟಾಕ್ ಕಂಪೆನಿ ನೌಕರರಿಂದ ಕೂಡಿದ
ಬ್ರಹ್ಮಶ್ರೀ ಶೆಫ್ ಟಾಕ್,ವಾರಿಯರ್ಸ್ ಶೆಫ್ ಟಾಕ್,ಫೈಟರ್ಸ್ ಶೆಫ್ ಟಾಕ್,ರಾಕರ್ಸ್ ಶೆಫ್ ಟಾಕ್ ಹಾಗೂ ಬುಲ್ ರೈಡರ್ಸ್ ಶೆಫ್ ಟಾಕ್ ಹೆಸರಿನ 5 ತಂಡಗಳು ಸ್ಪರ್ಧಾಕಣದಲ್ಲಿದ್ದರು.
ಲೀಗ್ ಹಂತದ ರೋಚಕ ಹೋರಾಟದ ಬಳಿಕ ಫೈನಲ್ ನಲ್ಲಿ ಫೈಟರ್ಸ್ ಶೆಫ್ ಟಾಕ್ ಎದುರಾಳಿ ಬ್ರಹ್ಮಶ್ರೀ ಶೆಫ್ ಟಾಕ್ ತಂಡವನ್ನು ಸೋಲಿಸಿ ಪ್ರಶಸ್ತಿ ಜಯಿಸಿದೆ.
ಈ ವಿಶೇಷ ಪಂದ್ಯಾಕೂಟದಲ್ಲಿ ಪ್ರತಿ ಪಂದ್ಯಕ್ಕೂ ವೈಯಕ್ತಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದ್ದು,ಕ್ರಮವಾಗಿ
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ
ಶ್ರೀಕಾಂತ್ ಪೂಜಾರಿ,ಸುಮಂತ್ ಬಿಲ್ಲವ ಹಾಗೂ ದಿಲೀಪ್ ಕುಮಾರ್
ಹಾಗೂ ಬೆಸ್ಟ್ ಬೌಲರ್ ರಾಜೇಶ್ ಪೂಜಾರಿ,ಚೇತನ್ ಪೂಜಾರಿ ಹಾಗೂ ರವಿ,ಬೆಸ್ಟ್ ಕ್ಯಾಚ್ ಪ್ರಶಸ್ತಿ ಅರ್ಜುನ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ದಿಲೀಪ್ ಕುಮಾರ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶೆಫ್ ಟಾಕ್ ನ ಆಡಳಿತ ನಿರ್ದೇಶಕರು ಶ್ರೀ ಗೋವಿಂದ ಬಾಬು ಪೂಜಾರಿ, ಕರಾವಳಿ ದೊನ್ನೆ ಬಿರಿಯಾನಿ ಸಂಸ್ಥಾಪಕರು ದೀಪಕ್ ಪೂಜಾರಿ,ಗುರುರಾಜ್ ಪೂಜಾರಿ,ಸೋಮಯ್ಯ,ರಮೇಶ್.ಕೆ ಹಾಗೂ ಸಂಸ್ಥೆಯ ಸದಸ್ಯರೆಲ್ಲರು ಉಪಸ್ಥಿತರಿದ್ದರು….