ಹೊನ್ನಾಳ ಉರ್ದು ಸ್ಕೂಲ್ ಹಳೆವಿದ್ಯಾರ್ಥಿಗಳ ಅಸೋಸಿಯೇಷನ್ ಯು.ಎ.ಇ ಇವರ ಆಶ್ರಯದಲ್ಲಿ ಜನವರಿ 1 ರಂದು ಅಬುಹೈಲ್ ಮೆಟ್ರೋ ಸ್ಟೇಷನ್ ಸಮೀಪದ ಗೋಲ್ಟರಿ ಕ್ರಿಕೆಟ್ ಅಕಾಡೆಮಿಯಲ್ಲಿ ಹೊನ್ನಾಳ ಪ್ರೀಮಿಯರ್ ಲೀಗ್-2021 ಸೀಸನ್ 4 ಪಂದ್ಯಾವಳಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 888 ದಿರ್ಹಮ್,ದ್ವಿತೀಯ ಸ್ಥಾನಿ 666 ದಿರ್ಹಮ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾಟದ ನಿಯಮಗಳು ಈ ಕೆಳಗಿನಂತಿದೆ.1)ಕೇವಲ 5 ಸ್ಪಾನ್ಸರ್ಸ್ ಗಳ 5 ತಂಡಗಳಿಗೆ ಅವಕಾಶವಿರುತ್ತದೆ.2)ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ.3)5 ಓವರ್ ಗಳ ಪಂದ್ಯವಾಗಿದ್ದು,ಹವಾಮಾನ ಅನುಕೂಲದ ಪ್ರಕಾರ ಸಮಯ ಹಾಗೂ ಓವರ್ ನಿರ್ಧರಿತವಾಗಿರುತ್ತದೆ.4)ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿದ್ದು,ಥರ್ಡ್ ಅಂಪಾಯರ್ ಸೌಲಭ್ಯ ಇರುವುದಿಲ್ಲ.5)ಒಬ್ಬ ಹಿರಿಯ ಆಟಗಾರರನ್ನು ಆರಂಭಿಕ ಆಟಗಾರರಾಗಿ ಕಣಕ್ಕಿಳಿಸತಕ್ಕದ್ದು.6)8 ಜನ ಆಟಗಾರ ಫೀಲ್ಡಿಂಗ್ ಹಾಗೂ 9 ಜನ ಆಟಗಾರರು ಬ್ಯಾಟಿಂಗ್ ಮಾಡಬಹುದಾಗಿದೆ.7)ಎಲ್ಲಾ ತಂಡದ 9 ಆಟಗಾರರು ಪಂದ್ಯಗಳಲ್ಲೂ ಆಡತಕ್ಕದ್ದು.ಬದಲಿ ಆಟಗಾರರು ರೊಟೇಶನ್ ಆಧಾರದಲ್ಲಿ ಆಡಬಹುದಾಗಿದೆ.8)ಎಲ್ಲಾ ತಂಡದ ಆಟಗಾರರು ಯಾವ ಸಮಯದಲ್ಲೂ ತಯಾರಿರತಕ್ಕದ್ದು.9)ಪಂದ್ಯ ಟೈ ಆದಲ್ಲಿ ಸೂಪರ್ ಓವರ್ ನಡೆಸಲಾಗುವುದು ಹಾಗೂ 3 ಬ್ಯಾಟ್ಸ್‌ಮನ್ ಅವಕಾಶವಿರುತ್ತದೆ.10)ಪ್ರತಿ ಸ್ಪಾನ್ಸರ್ಸ್ ಶುಲ್ಕ- 300 ದಿರ್ಹಮ್11)ಭಾಗವಹಿಸುವ ಪ್ರತಿಯೊಬ್ಬ ಆಟಗಾರರ ಶುಲ್ಕ 25 ದಿರ್ಹಮ್12)ಹೆಚ್ಚಿನ ಮಾಹಿತಿಗಾಗಿ ರೆಹಮತ್,ಫಿರೋಜ್ ಹಾಗೂ ಜಾಕಿರ್ ರವರನ್ನು ಸಂಪರ್ಕಿಸಬಹುದು.13)ಪ್ರವೇಶ ಶುಲ್ಕವನ್ನು ರೆಹಮತ್ ಹಾಗೂ ಫಿರೋಜ್ ರವರ ಬಳಿ ನೀಡಿ ಸಹಕರಿಸಬೇಕಾಗಿ ವಿನಂತಿ.