Categories
Action Replay ಅಥ್ಲೆಟಿಕ್ಸ್

15 ದಿನಗಳಲ್ಲಿ 4 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಭಾರತದ ಹಿಮಾದಾಸ್

ಕೇವಲ 15 ದಿನಗಳ‌ ಅಂತರದಲ್ಲಿ ಭಾರತದ ಮಿಂಚಿನ ಓಟಗಾರ್ತಿ ಹಿಮಾದಾಸ್ ನಾಲ್ಕನೇ ಅಂತರಾಷ್ಟ್ರೀಯ ಪದಕಕ್ಕೆ ಕೊರಳೊಡ್ಡಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಜೆಕ್ ಗಣರಾಜ್ಯದಲ್ಲಿ ನಡೆದ ಟಬೋರ್ ಅಥ್ಲೆಟಿಕ್ಸ್ ನಲ್ಲಿ ಭಾರತದ ಹೆಮ್ಮೆಯ ಓಟಗಾರ್ತಿ ಹಿಮಾದಾಸ್ ಕೇವಲ 23.25 ಸೆಕೆಂಡ್ ನಲ್ಲಿ 200 ಮೀ ಓಟವನ್ನು ಕ್ರಮಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.

ಜುಲೈ 2 ರಂದು ಪೋಲೆಂಡ್ ನಲ್ಲಿ ನಡೆದ ಪೋಜ್ಞಾನ್ ಅಥ್ಲೆಟಿಕ್ ಗ್ರಾಂಡ್ ಪಿಕ್ಸ್ ರೇಸ್ ನಲ್ಲಿ 23.65 ಸೆಕೆಂಡ್ ನಲ್ಲಿ 200 ಓಟವನ್ನು ಕ್ರಮಿಸಿದರೆ, ಜುಲೈ 7 ರಂದು ಪೋಲೆಂಡ್ ನಲ್ಲಿ ನಡೆದ ಕುಟ್ನೋ ಅಥ್ಲೆಟಿಕ್ಸ್ ನಲ್ಲಿ 23.97 ಸೆಕೆಂಡ್ ನಲ್ಲಿ 200 ಓಟವನ್ನು ಪೂರ್ಣಗೊಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.

ಆರ್.ಕೆ.ಆಚಾರ್ಯ ಕೋಟ.