“ಪ್ರತಿಯೊಬ್ಬರೂ ದೈಹಿಕ ಕ್ಷಮತೆ ಕಾಯ್ದುಕೊಳ್ಳಬೇಕು”.
ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಗೆ ಡಾ. ವಿಜಯ್ ಬಲ್ಲಾಳ್ ರಿಂದ ಚಾಲನೆ.
ಉಡುಪಿ ಸ್ವಿಮ್ಮಿಂಗ್ ಕ್ಲಬ್ (ರಿ) ಉಡುಪಿ ಇವರ ವತಿಯಿಂದ ಅಜ್ಜರಕಾಡು ಜಿಲ್ಲಾ ಈಜುಕೊಳದಲ್ಲಿ ಹಮ್ಮಿಕೊಂಡಿದ್ದ ಪುರುಷ ಮತ್ತು ಮಹಿಳೆಯರ ಜಿಲ್ಲಾ ಮಟ್ಟದ ಸ್ಪರ್ಧೆಗೆ 12-01-2020 ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ಅಂಬಲಪಾಡಿಯ ಧರ್ಮದರ್ಶಿಗಳಾದ ಡಾ. ವಿಜಯ ಬಲ್ಲಾಳ್ ದೀಪಬೆಳಗಿಸಿ ಮಾತನಾಡಿ ಸೈಕ್ಲಿಂಗ್ ಮಾಡುವುದು ಮಾನವನ ಆರೋಗ್ಯಕ್ಕೆ ಪೂರಕವಾಗುವ ಜೊತೆಗೆ ಸ್ನಾಯುಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತದೆ ದೈಹಿಕ ಆರೋಗ್ಯ ವೃದ್ಧಿ ಗೊಂಡರೆ ಮಾನಸಿಕ ಆರೋಗ್ಯವು ಉತ್ತಮವಾಗಿರುತ್ತದೆ ಎಂದರು. ಸ್ವಿಮ್ಮಿಂಗ್ ಕ್ಲಬ್ ನ ಅಧ್ಯಕ್ಷ ರಾಮಕೃಷ್ಣ ರಾವ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಉಡುಪಿ ಸ್ವಿಮ್ಮಿಂಗ್ ಕ್ಲಬ್ ನ ಕಾರ್ಯದರ್ಶಿ ಕೃಪಾ ಪ್ರಸಿದ್ಧ, ಉಡುಪಿ ಸ್ವಿಮ್ಮಿಂಗ್ ಕ್ಲಬ್ ನ ಉಪಾಧ್ಯಕ್ಷೆ ಮಂಜುಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಿನ್ನಿಸ್ ದಾಖಲೆಯ ಈಜುಪಟು ಗೋಪಾಲ್ ಖಾರ್ವಿ ಅವರನ್ನು ಸನ್ಮಾಸಿಸಲಾಯಿತು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಒಟ್ಟು 92 ವಿಭಾಗಳಲ್ಲಿ ಸ್ಪರ್ಧೆಗಳು ನಡೆದಿದ್ದು ಇದರಲ್ಲಿ ಸುಮಾರು 200ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಉಡುಪಿ ಸ್ವಿಮ್ಮಿಂಗ್ ಕ್ಲಬ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದು ಆರ್ಯಪ್ರಸಿದ್ಧ ಸ್ವಾಗತಿಸಿ, ರಾಜಶೇಖರ್ ಉಡುಪಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ :- ✍ರಾಜಶೇಖರ್ ಉಡುಪಿ.