ಮನಸ್ಸು,ಶರೀರ ಮತ್ತು ಆತ್ಮದ ಒಂದು ಕನ್ನಡಿಯಾಗಿ ವರ್ತಿಸುವ ಒಂದು ಮಾಧ್ಯಮ ಯೋಗ.
ಭಾರತವು ವಿಶ್ವಕ್ಕೆ ನೀಡಿದ ಮಹಾನ್ ಕೊಡುಗೆಗಳಲ್ಲಿ ಯೋಗವೂ ಒಂದು.
ಯೋಗದ ಮೂಲಕ ತನು ಮತ್ತು ಮನದ ಆರೋಗ್ಯವನ್ನು ಕಾಪಾಡುವ ಯೋಗ ಭಾಗ್ಯವನ್ನು ನಮ್ಮ ಹಿರಿಯರು ನಮಗೆ ನೀಡಿದ್ದಾರೆ.ಇಂತಹ ವರಪ್ರದವಾದ ಶಕ್ತಿ ಸಂಚಯನದ ದಿವ್ಯ ಪ್ರಭೆಯ ಯೋಗಾಭ್ಯಾಸವನ್ನು ಕಲಿಯುತ್ತಿರುವ ಪ್ರತಿಭೆ “ಯೋಗ ರತ್ನ” ತನುಶ್ರೀ ಪಿತ್ರೋಡಿ.
ಈಗಾಗಲೇ ಯೋಗಾಸನದ ಮೂಲಕ ನಾಲ್ಕು ವಿಶ್ವದಾಖಲೆಗಳನ್ನು ಹೊಂದಿರುವ ತನುಶ್ರೀ ತನ್ನ 5 ನೇ ವಿಶ್ವದಾಖಲೆಯಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ “ಚಕ್ರಾಸನ ರೇಸ್” ವಿಭಾಗದಲ್ಲಿ ದಿನಾಂಕ 22.2.2020 ರಂದು ಸಂಜೆ 4.30 ಕ್ಕೆ ಉದ್ಯಾವರದ ಗ್ರಾಮ ಪಂಚಾಯತ್ ಮೈದಾನದಲ್ಲಿ ಪ್ರಯತ್ನಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂದರ್ಭ ತನುಶ್ರೀ ಪಿತ್ರೋಡಿ,ತಂದೆ ಉದಯ್ ಕುಮಾರ್ ಹಾಗೂ ವಿಜಯ್ ಕೋಟ್ಯಾನ್ ಹಾಗೂ ರತನ್ ಉದ್ಯಾವರ ಉಪಸ್ಥಿತರಿದ್ದರು.