Categories
Action Replay ಕ್ರಿಕೆಟ್

ಟೆನ್ನಿಸ್ ಲೋಕದ ಮಹಾನ್ ದಂತಕಥೆ-ರಾಡ್ ಲೇವರ್

ಟೆನ್ನಿಸ್‌ನಲ್ಲಿ ವರ್ಷಕ್ಕೆ ನಾಲ್ಕು ಗ್ರಾಂಡ್‌ಸ್ಲಾಮ್‌ಗಳಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಗ್ರಾಂಡ್‌ ಸ್ಲಾಮ್‌ವೊಂದನ್ನು ಗೆಲ್ಲುವುದೆಂದರೆ ಅದು ಹರಸಾಹಸದ ಕೆಲಸವೇ ಸರಿ. ಒಂದೇ ಒಂದು ಗ್ರಾಂಡ್‌ಸ್ಲಾಮ್ ಗೆದ್ದವರನ್ನು ಸಹ ಸಾಧಕರ ಪಟ್ಟಿಯಲ್ಲಿ ಗುರುತಿಸುತ್ತದೆ ಟೆನ್ನಿಸ್ ಲೋಕ.ಹೀಗಿದ್ದಾಗಿಯೂ ನಾಲ್ಕೂ ಗ್ರಾಂಡ್ಸ್‌ಸ್ಲಾಮ್‌ಗಳನ್ನು ಗೆದ್ದು ಸಾಧಕರೂ ಇಲ್ಲದಿಲ್ಲ. ತುಂಬ ಕಷ್ಟದ ಸಾಧನೆಯೆನ್ನಿಸಿರುವ ಈ ಬಗೆಯ ಸಾಧನೆಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಮಾಡಿರುವ ಮಾಡಿರುವ ಪುರುಷ ಆಟಗಾರರು ಮುಕ್ತ ಯುಗದಲ್ಲಿ ಕೇವಲ ಐದು ಜನ .ಮಹಿಳೆಯರು ಆರು ಜನ.

ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿಯಿದೆ. ಹೀಗೆ ತಮ್ಮ ಕರಿಯರ್ ಸ್ಲಾಮ್ ಪೂರ್ತಿಗೊಳಿಸಿದವರ ಪೈಕಿ ಬಹುತೇಕರು ವರ್ಷಕ್ಕೆ ಒಂದೊ ಎರಡೋ ಪಂದ್ಯಾವಳಿಯನ್ನು ಗೆದ್ದು ಸ್ಲಾಮ್ ಪೂರ್ತಿಗೊಳಿಸಿಕೊಂಡವರು. ಉದಾಹರಣಗೆ ಹೇಳುವುದಾದರೆ ಈ ವರ್ಷ ವಿಂಬಲ್ಡನ್ ಯು‌ಎಸ್ ಓಪನ್ ಗೆದ್ದು ಕೊಂಡರೆ ಇನ್ನೊಂದೆರಡು ವರ್ಷಗಳಲ್ಲಿ ಉಳಿದೆರಡು ಪಂದ್ಯಾವಳಿಗಳನ್ನು ಗೆದ್ದು ಸರಣಿ ಪೂರ್ತಿ ಗೊಳಿಸಿದವರ ಸಂಖ್ಯೆಯೇ ಇಲ್ಲಿ ಹೆಚ್ಚು. ಬಿಡಿ,ಅದೂ ಸಹ ದೊಡ್ಡ ಸಾಧನೆಯೇ. ವಿಭಿನ್ನ ಪ್ರಕಾರದ ಟೆನ್ನಿಸ್ ಅಂಗಳದಲ್ಲಿ ತಮ್ಮ ಅಪ್ರತಿಮ ಪ್ರತಿಭೆ ತೋರಿಸಿ ಗೆಲ್ಲುವುದೇನೂ ಸಣ್ಣ ವಿಷಯವಲ್ಲ.

ಆದರೆ ಇನ್ನೂ ಕೆಲವರಿರುತ್ತಾರೆ ದೈತ್ಯರು.ತಮ್ಮ ಆಟದ ಪ್ರವಾಹಕ್ಕೆ ಎದುರಾದವರನ್ನೆಲ್ಲ ಕೊಚ್ಚಿಕೊಂಡು ಹೋಗುವವರು.ಒಂದೇ ವರ್ಷದಲ್ಲಿ ನಾಲ್ಕೂ ಪಂದ್ಯಾವಳಿಗಳನ್ನು ಗೆದ್ದು ಬಿಡುವವರು.1988ರಲ್ಲಿ ಸ್ಟೆಫಿ ಗ್ರಾಫ್ ಈ ಸಾಧನೆ ಮಾಡಿದ್ದರು. ‘ಕ್ಯಾಲೆಂಡರ್ ಇಯರ್ ಗ್ರಾಂಡ್ ಸ್ಲಾಮ್’ ಎಂದು ಕರೆಯಲ್ಪಡುವ ಈ ಸಾಧನೆ ಬಹುತೇಕ ಅಸಾಧ್ಯವೆನ್ನುವುದು ಪಂಡಿತರ ಅಂಬೋಣ. ನೂರಾರು ವರ್ಷಗಳ ಇತಿಹಾಸವಿರುವ ಈ ಕ್ರೀಡೆಯಲ್ಲಿ ಇಂಥದ್ದೊಂದು ಸಾಧನೆ ಮಾಡಿದವರು ಕೇವಲ ಮೂರು ಜನ ಎಂದರೆ ಸಾಧನೆಯ ಮಹತ್ವದ ಅರಿವು ನಿಮಗಾದೀತು.

ಹೀಗಿದ್ದು ಇಂಥಹ ಸಾಧನೆಯನ್ನು ಎರಡು ಸಲ ಮಾಡಿದ್ದವರಿದ್ದರೆ ಅವರಿಗೆ ಏನೆನ್ನುವುದು..? ಅಧಿಕೃತವಾಗಿ ‘ರಾಡ್ ಲೇವರ್’ ಎನ್ನುತ್ತಾರೆ ಟೆನ್ನಿಸ್ ಜಗತ್ತಿನಲ್ಲಿ. 1962 ಮತ್ತು 1969ರಲ್ಲಿ ಈ ಸಾಧನೆಯನ್ನು ಮಾಡಿದ್ದರು ಆಸ್ಟ್ರೇಲಿಯಾದ ಲೇವರ್.ಆ ಸಾಧನೆ ಮಾಡಿ್ದದ ವಿಶ್ವದ ಏಕೈಕ ಆಟಗಾರನೀತ. ಟೆನ್ನಿಸ್ ಲೋಕದ ಮಹಾನ್ ದಂತ ಕತೆ. ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್ ಇದ್ದಂತೆ ಟೆನ್ನಿಸ್‌ಗೆ ರಾಡ್ ಲೇವರ್‌. ಇವರ ಸಾಧನೆಯ ಗೌರವಕ್ಕೆ ಆಸ್ಟ್ರೇಲಿಯಾ ತನ್ನ ವಿಶ್ವಪ್ರಸಿದ್ಧ ಟೆನ್ನಿಸ್ ಅಂಕಣಕ್ಕೆ ‘ರಾಡ್ ಲೇವರ್ ಅರೀನಾ’ ಎಂಬ ಹೆಸರು ಕೊಟ್ಟಿದೆ. ಪ್ರತಿವರ್ಷ ನಡೆಯುವ ಪ್ರಸಿದ್ಧ’ಲೇವರ್ ಕಪ್ ‘ಸಹ ಇವರ ಗೌರವಾರ್ಥವೇ. ನಿನ್ನೆಯಿಂದ ಅವರ ಆತ್ಮಚರಿತ್ರೆ ಓದುತ್ತಿದ್ದೇನೆ. ಆಸಕ್ತಿಕರ ವಿಷಯ ಸಿಕ್ಕರೆ ಖಂಡಿತ ಇಲ್ಲಿಯೂ ಹಂಚಿಕೊಳ್ಳುತ್ತೇನೆ.

-ಗುರುರಾಜ್ ಕೊಡ್ಕಣಿ ಯಲ್ಲಾಪುರ

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

one + eight =