ಐತಿಹಾಸಿಕ ಕರ್ನಾಟಕ ಟೆನಿಸ್ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್-2022 ರ ಮೂರನೇ ಪಂದ್ಯದಲ್ಲಿ ಮಟ್ಕಲ್ ತುಮಕೂರು,ತ್ರಿಶೂಲ್ ಸೇನಾ ವಿರುದ್ಧ ಗೆಲುವು ಸಾಧಿಸಿದೆ.
ತ್ರಿಶೂಲ್ ಸೇನಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದು ಕೊಂಡಿತ್ತು.ಮಟ್ಕಲ್ ತಂಡದ ಪರವಾಗಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ರಾಜಾ ಸಾಲಿಗ್ರಾಮ ಬಿರುಸಿನ 34 ರನ್(29 ಎಸೆತ) ಸಿಡಿಸಿ,ಎದುರಾಳಿ ತಂಡಕ್ಕೆ 8 ಓವರ್ ಗಳಲ್ಲಿ 61 ರನ್ ಗಳ ಗುರಿ ನೀಡಿತ್ತು.
ಇದಕ್ಕುತ್ತರವಾಗಿ ತ್ರಿಶೂಲ್ ಸೇನಾ ಮಡಿಕೇರಿ ರೋಹಿತ್ ಗಿಲ್ಲಿ 16 ರನ್,ಆಲಿ 11 ರನ್ ಗಳಿಸಿ,ತೀವ್ರ ಪ್ರತಿರೋಧದ ಹೋರಾಟ ನೀಡಿದರೂ,ರಕ್ಷಿತ್ ನಂದಳಿಕೆ 2 ಓವರ್ ಗಳಲ್ಲಿ 13 ರನ್ ಗಳಿಗೆ ತ್ರಿಶೂಲ್ ಸೇನಾದ 3 ವಿಕೆಟ್ ಉರುಳಿಸಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.
ತನ್ನ ಬ್ಯಾಟ್ ನಿಂದ ಅತ್ಯಮೂಲ್ಯ 34 ರನ್ ಸಿಡಿಸಿದ ರಾಜಾ ಸಾಲಿಗ್ರಾಮ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.