Wega west end Arabia,Casa Arabia ಇವರ ಪ್ರಾಯೋಜಕತ್ವದಲ್ಲಿ,ಬಹ್ರೇನ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ನಡೆದ ಬಹ್ರೇನ್ ಚಾಂಪಿಯನ್ಸ್ ಲೀಗ್ B.B.L-2020 ಫೈನಲ್ ನಲ್ಲಿ ರಿಯಾಜ್ ಬಿ.ಕೆ.ಮಾಲೀಕತ್ವದಬಹ್ರೇನ್ ಬೌನ್ಸರ್ಸ್,ಮಂಗಳೂರು ಬಾಯ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಬಹ್ರೇನ್ ನ ಈ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ 6 ತಂಡಗಳು ಭಾಗವಹಿಸಿದ್ದು,ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಬಾಯ್ಸ್ 5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 21 ರನ್ ಗಳಿಸಿತ್ತು.ಸುಲಭ ಸವಾಲನ್ನು ಅನಾಯಾಸವಾಗಿ ಬೆಂಬತ್ತಿದ ಬಹ್ರೇನ್ ಬೌನ್ಸರ್ಸ್ 3.3 ಓವರ್ ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯ ಗರಿಷ್ಠ ಸ್ಕೋರರ್(ಆರೆಂಜ್ ಕ್ಯಾಪ್) ಹಾಗೂ ಅತ್ಯಧಿಕ ಸಿಕ್ಸರ್ ಪ್ರಶಸ್ತಿ ಬಹ್ರೇನ್ ಬೌನ್ಸರ್ಸ್ ನ ಅರುಣ್ ಶೆಟ್ಟಿ,ಮಂಗಳೂರು ಬಾಯ್ಸ್ ನ ರೌಫ್ ಅತ್ಯಧಿಕ ವಿಕೆಟ್ ಗಳಿಸಿದರೆ,ಅತ್ಯಧಿಕ ಸ್ಟ್ರೈಕ್ ರೇಟ್ ಬಹ್ರೇನ್ ಬೌನ್ಸರ್ಸ್ ನ ರಿಯಾಜ್ ಬಿ.ಕೆ ಹಾಗೂ ಟೂರ್ನಮೆಂಟ್ ನಲ್ಲಿ 6 ಸಿಕ್ಸರ್ ಸಹಿತ 82 ರನ್ ಹಾಗೂ ಅತ್ಯಧಿಕ 10 ವಿಕೆಟ್ ನೊಂದಿಗೆ ಪರ್ಪಲ್ ಕ್ಯಾಪ್ ಗೌರವ ಪಡೆದ ಉಡುಪಿಯ ವಸಂತ್ ಸಾಲ್ಯಾನ್ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು…
ಗಣ್ಯ ಅತಿಥಿಗಳು ಕ್ರೀಡಾ ಪ್ರೋತ್ಸಾಹಕರು ಭಾಗವಹಿಸಿದ್ದ
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಉದ್ಯಮಿ ಅಬ್ದುಲ್ ರಜಾಕ್ ಹಾಜಿ ಸಹೋದರರು ವಿಜೇತರಿಗೆ ಪ್ರಶಸ್ತಿ ಹಸ್ತಾಂತರಿಸಿದರು.
ಬಿ.ಬಿ.ಎಲ್ ಚಾಂಪಿಯನ್ಸ್ ಲೀಗ್-2020 ಪಂದ್ಯಾವಳಿಯಲ್ಲಿ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಿದ್ದು,
ಕ್ರಿಕ್ ಹೀರೋಸ್ ಸ್ಕೋರಿಂಗ್ ಪಾರ್ಟ್ನರ್,ವೆನ್ಯೂ ಪಾರ್ಟ್ನರ್ ಗೋಲ್ಡನ್ ಈಗಲ್ ಹೆಲ್ತ್ ಕ್ಲಬ್ ಹಾಗೂ B-Human ಸಂಸ್ಥೆ ಸಹಕಾರದೊಂದಿಗೆ ಪಂದ್ಯಾವಳಿ ಯಶಸ್ವಿಯಾಗಿ ನಡೆದಿತ್ತು…