ಫ್ರೆಂಡ್ಸ್ ಮಂಗಳೂರು ತಂಡದ ಆಶ್ರಯದಲ್ಲಿ,ಕ್ರೀಡಾ ಪ್ರೋತ್ಸಾಹಕರಾದ ಅನ್ವರ್ ಕೈಕಂಬ,ಜಲೀಲ್ ಪಿಲಿಕೂರ್,ಆಸಿಫ್ ಜೋಕಟ್ಟೆ,ಸಿದ್ಧಿಕ್ ಕೆ.ಸಿ ರೋಡ್ ಇವರೆಲ್ಲರ ಸಾರಥ್ಯದಲ್ಲಿ,ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ ಸಲಾಮಾಬಾದ್ ನ ಗಲ್ಫ್ ಏರ್ ಗ್ರೌಂಡ್ ನಲ್ಲಿ ಡಿಸೆಂಬರ್ 31 ರಂದು ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಲೆಗ್ ಸ್ಪಿನ್ ಬೌಲಿಂಗ್ ಗೆ ಮಾತ್ರ ಅವಕಾಶವಿದ್ದು,ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಶಸ್ತಿ ವಿಜೇತ ತಂಡ 222 ಯು.ಎಸ್.ಡಾಲರ್,ದ್ವಿತೀಯ ಸ್ಥಾನಿ 111 ಯು.ಎಸ್.ಡಾಲರ್ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
ಪಂದ್ಯಾವಳಿಯ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಕಾರ್ಯ ನಿರ್ವಹಿಸಲಿದೆ.