22.5 C
London
Sunday, May 19, 2024
Homeಇತರೆಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ರೀಡಾಪಟು ಹಾಗೂ ಸಮಾಜಸೇವಕ ವಿಜಯ್‌.ಎಸ್.ಪೂಜಾರಿ

ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ರೀಡಾಪಟು ಹಾಗೂ ಸಮಾಜಸೇವಕ ವಿಜಯ್‌.ಎಸ್.ಪೂಜಾರಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಉನ್ನತ ಹುದ್ದೆಗಳು..ಅರ್ಹರನ್ನು ಹುಡುಕಿಕೊಂಡು ಬರುತ್ತದೆ ಎಂಬುವುದಕ್ಕೆ ಕುಂದಾಪುರ ದ ಶ್ರೀ ವಿಜಯ್ ಎಸ್ ಪೂಜಾರಿ ಯವರೇ ಸಾಕ್ಷಿಯಾಗಿದೆ..
ಶ್ರೀಯುತರು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಉನ್ನತ ಶೇಣಿಯಲ್ಲಿ ಮುಗಿಸಿ ವೃತ್ತಿ ಜೀವನದಲ್ಲಿ ಶ್ರೀವತ್ಸ ಹೆಬ್ಬಾರ್ ಇವರ ಮಾರ್ಗದರ್ಶನ ದಲ್ಲಿ HDFC life, Birla Sunlife ಮುಂತಾದ ಮ್ಯೂಚುವಲ್ ಫಂಡ್ ಏಜೆಂಟರಾಗಿ ಕಾರ್ಯನಿರ್ವಹಿಸಿ ತದನಂತರ ಶ್ರೀಭಗವತಿಚಂದ್ರ ಹೆಬ್ಬಾರ್ ಇವರ ಮಾರ್ಗದರ್ಶನದಲ್ಲಿ ಮೆಡಿಕಲ್ ರೆಫ್ ಆಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಕ್ರೀಡಾರಂಗದಲ್ಲಿ
ಮೂಲತಃ ಕುಂದಾಪುರ ಸಿ‌.ಆರ್.ಎಫ್ ಕ್ರಿಕೆಟ್ ಕ್ಲಬ್ ಸ್ಥಾಪಕ ನಾಯಕರಾಗಿ ತದನಂತರ ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್ ನ ಸಕ್ರಿಯ ಸದಸ್ಯರಾಗಿ ತದನಂತರ ಚಕ್ರವರ್ತಿ ಕುಂದಾಪುರ ತಂಡದ ಸಕ್ರಿಯ ಸದಸ್ಯರಾಗಿಯೂ ಕ್ರಿಕೆಟ್ ಜೀವನದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ..
ಸತತ 2 ಬಾರಿ ಕುಂದಾಪುರ ಪುರಸಭಾ ಸದಸ್ಯರಾಗಿ ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನಪ್ರಿಯರಾಗಿರುತ್ತಾರೆ.
ಅಲ್ಲದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವ ಇವರು ಯಾರಿಗಾದರೂ ರಕ್ತದ ಅವಶ್ಯಕತೆ ಇದ್ದಲ್ಲಿ ತಕ್ಷಣವೇ ಸ್ಪಂದಿಸಿ ತಾವೇ ಸ್ವತಾ ಅಥವಾ ಪರದಾನಿಗಳ ಮನವೊಲಿಸಿ  ಸಹಸ್ರಾರು ಜನರ ಪಾಲಿಗೆ ಮರೆಯಲಾಗದ ಕಣ್ಮಣಿ ಯಾಗಿದ್ದಾರೆ..ಇವರ ಸೇವೆಯನ್ನು ಗುರುತಿಸಿ ಅದೆಷ್ಟೋ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿದೆ..
ಇದೀಗ ಕುಂದಾಪುರದ ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷರಾಗಿ ಆಯ್ಕೆ ಆದುದು ಇವರ ಕರ್ತವ್ಯಕ್ಕೆ ಸಂದ ಹಿರಿಮೆಯಾಗಿದೆ.
ತಮ್ಮ ಹೃದಯ ,ಮನಸ್ಸು ಗಳೆರದರಲ್ಲೂ ಕುಂದಾಪುರ ದ ಎರಡು ಪ್ರತಿಷ್ಠಿತ ತಂಡಗಳಾದ ಟೊರ್ಪೆಡೋಸ್ ಹಾಗೂ ಚಕ್ರವರ್ತಿ ತಂಡಗಳ ಬಗ್ಗೆ ಉತ್ತಮ ಅಭಿಪ್ರಾಯ ಗಳನ್ನು ಹೊಂದಿರುವ ಇವರು ನಿಜವಾಗಿಯೂ ಒಬ್ಬ ಕ್ರಿಕೆಟ್ ಪ್ರೇಮಿ ಎಂದರೆ ತಪ್ಪಾಗಲಾರದು…..
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 + 2 =