ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯಿರುವ ಚದುರಂಗ ಮೆದುಳಿನ ಬೆಳವಣಿಗೆ ಹೆಚ್ಚಿಸುವುದರೊಂದಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯದ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಅಭಿವೃದ್ಧಿ ಹೊಂದಲು *ಚೆಸ್* ಆಟ ಅತ್ಯಂತ ಪೂರಕ .
ತನ್ನಂತೆ ಕುಂದಾಪುರದಲ್ಲಿ ಹೆಚ್ಚು ಚೆಸ್ ಆಟಗಾರರನ್ನು ಅನಾವರಣಗೊಳಿಸಬೇಕು ಎಂಬ ತುಡಿತದೊಂದಿಗೆ *ಕಶ್ವಿ ಚೆಸ್ ಸ್ಕೂಲ್* ಎಂಬ ತರಬೇತಿ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕೀರ್ತಿ *ನರೇಶ್ ಬಿ ಕೋಟೇಶ್ವರ* ಇವರದ್ದು.
*ಹೊಸ ಅಧ್ಯಾಯ:*
ಸೋಲೇ ಗೆಲುವಿನ ಮೆಟ್ಟಿಲೆಂದು ಅರಿತ ನರೇಶ್ 2012ರಲ್ಲಿ ಪದವಿ ಮುಗಿಸಿ ತನ್ನ ಕನಸನ್ನು ಮತ್ತು ಕಾಲೇಜನ್ನು ಮರೆಯದೆ ತನ್ನಿಂದಾಗದ ಕನಸು ಇತರರಿಂದಾದರೂ ನನಸಾಗಬೇಕು ಎಂಬ ಆಲೋಚನೆಯೊಂದಿಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಚೆಸ್ ತರಬೇತಿ ನೀಡುತ್ತಾ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರದ್ದು . 2016ರಲ್ಲಿ 7 ಆಟಗಾರರಿಂದ ಆರಂಭಗೊಂಡ ಕಶ್ವಿ ಚೆಸ್ ಸ್ಕೂಲ್ ತನ್ನ ನಿರಂತರ ಬೋಧನೆಯಿಂದ ನಾಲ್ಕು ವರ್ಷದಲ್ಲಿ 1200ಕ್ಕೂ ಹೆಚ್ಚು ಆಟಗಾರರನ್ನು ಹೊಂದಿರುವ ಹೆಮ್ಮೆ ನುರಿತ ತರಬೇತಿದಾರರು ಹಾಗೂ ಸಂಚಾಲಕ ನರೇಶ್ ಇವರದ್ದು.
*ದಾಖಲೆಗಳ ಪಂದ್ಯಾವಳಿ:*
ಉಡುಪಿ ಜಿಲ್ಲೆಯಲ್ಲೇ ಮೊತ್ತ ಮೊದಲ ಬಾರಿಗೆ ಜೇಸಿಐ ಕುಂದಾಪುರ ಸಹಕಾರದೊಂದಿಗೆ ಅಂತರ್ ಜಿಲ್ಲಾಮಟ್ಟದ ಹೊನಲು ಬೆಳಕಿನ ಚೆಸ್ ಪಂದ್ಯಾವಳಿ ಕೋಡಿ ಕಿನಾರೆಯಲ್ಲಿ ಸಂಘಟಿಸುವ ಮೂಲಕ ಯಶಸ್ಸು ಸಾಧಿಸಿರುತ್ತಾರೆ.
ನಂತರ ಪ್ರಥಮ ವಾರ್ಷಿಕೋತ್ಸವದ
ಅಂಗವಾಗಿ ಅಂತರಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ನಡೆಸಿ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಅರ್ಜುನ ಪ್ರಶಸ್ತಿ ವಿಜೇತ ಭಾರತದ ಮೂರನೇ ಅಂತರಾಷ್ಟ್ರೀಯ ಮಟ್ಟದ ಚೆಸ್ ಗ್ರ್ಯಾಂಡ್ ಮಾಸ್ಟರ್ ಮಹಾರಾಷ್ಟ್ರದ ಪ್ರವೀಣ್ ತಿಪ್ಸೆ ಅವರನ್ನು ಕರೆಸಿರುತ್ತಾರೆ.
ಮೂರನೇ ಪ್ರಯತ್ನದಲ್ಲಿ ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿ ಇದರ ಸಹಕಾರದೊಂದಿಗೆ
ಕರ್ನಾಟಕದಲ್ಲೇ ಮೊತ್ತಮೊದಲ ಬಾರಿಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಚೆಸ್ ಪಂದ್ಯಾವಳಿಗೆ ಕರ್ನಾಟಕದ ಮೊಟ್ಟ ಮೊದಲ ಅಂತರಾಷ್ಟ್ರೀಯ ಚೆಸ್ ಗ್ರಾಂಡ್ ಮಾಸ್ಟರ್ ತೇಜ್ ಕುಮಾರ್ ಎಂ.ಎಸ್ ರವರು ಮುಖ್ಯ ಅತಿಥಿಯಾಗಿ ಆಗಮಿಸಿರುತ್ತಾರೆ.
ನಾಲ್ಕನೇ ಬಾರಿಗೆ ಕೋಟೇಶ್ವರದಲ್ಲಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ
“ಕಶ್ವಿ ಚದುರಂಗೋತ್ಸವ” ರಾಜ್ಯ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ ರಮೇಶ್ ಭಟ್ ಅವರನ್ನು ಕರೆಸಿದ ಕೀರ್ತಿ ಇವರದ್ದು.
5 ನೇ ಪ್ರಯತ್ನವಾಗಿ ದಕ್ಷಿಣ ಭಾರತದಲ್ಲೇ ಮೊತ್ತಮೊದಲ ಬಾರಿಗೆ
ದಾಖಲೆಯ ಪಂದ್ಯಾವಳಿಯಾಗಿ 8 ದಿನಗಳ ಕಾಲ ಕುಂದಾಪುರದಂತಹ
ಗ್ರಾಮೀಣ ಭಾಗದಲ್ಲಿ ಮೊದಲ ಬಾರಿ ಅಂತರಾಷ್ಟ್ರೀಯ ಮಟ್ಟದ ಫಿಡೆ ರೇಟಿಂಗ್ ಚೆಸ್ ಪಂದ್ಯಾವಳಿ ನಡೆಸಿದ ಹೆಮ್ಮೆ ಇವರದ್ದು.ಈ ಪಂದ್ಯಾವಳಿಯ ಪ್ರಮೋಷನಲ್ ವೀಡಿಯೋ ಉದ್ಘಾಟನಾ ಕಾರ್ಯಕ್ರಮಕ್ಕೆ ಕರ್ನಾಟಕದ 2 ನೇ
ಅಂತರಾಷ್ಟ್ರೀಯ ಮಟ್ಟದ ಚೆಸ್ ಗ್ರ್ಯಾಂಡ್ ಮಾಸ್ಟರ್ ಸ್ಟ್ಯಾನಿ.ಜಿ.ಎ ಇವರು ಆಗಮಿಸಿರುತ್ತಾರೆ.
ಮುಂದೆ ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಭಾರತದ ಮೊದಲ ಅಂತರಾಷ್ಟ್ರೀಯ ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರನ್ನು ಕರೆಸಬೇಕೆಂಬುವುದು ಇವರ ಮುಂದಿನ ಗುರಿಯಲ್ಲೊಂದು.
ನರೇಶ್ ರವರ ಚೆಸ್ ಮೇಲಿರುವ ಆಸಕ್ತಿ, ಕಾರ್ಯ ಕ್ಷಮತೆ, ಅಭಿವೃದ್ಧಿ, ಅನುಭವದ ಆಧಾರದ ಮೇಲೆ ಹಲವು ಚೆಸ್ ಪಂದ್ಯಾವಳಿಗಳಲ್ಲಿ ತೀರ್ಪುಗಾರರಾಗಿ ಹಾಗೂ ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹಳೆ ವಿದ್ಯಾರ್ಥಿಗಳ ಕ್ರೀಡಾ ಸಂಘದ ಸಂಯೋಜಕರಾಗಿ, ಜೆ.ಸಿ.ಐ ಕುಂದಾಪುರದ ಉಪಕಾರ್ಯದರ್ಶಿಯಾಗಿ, ಶ್ರೀ ಶಾರದಾ ಕಾಲೇಜು ಬಸ್ರೂರಿನ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, 2018ರಲ್ಲಿ 19ರ ವಯೋಮಾನದ ಕರ್ನಾಟಕ ಚೆಸ್ ತಂಡದ ಮುಖ್ಯಸ್ಥರಾಗಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಚೆಸ್ ತಂಡದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
*ಚೆಸ್ ಎರಾ ಆ್ಯಪ್ ಮೂಲಕ ವಿನೂತನ ಶೈಲಿಯಲ್ಲಿ ಆನ್ಲೈನ್ ತರಬೇತಿ*
ಇದೀಗ ಮತ್ತೆ ಕಶ್ವಿ ಚೆಸ್ ಸ್ಕೂಲ್ ನ
ಆನ್‌ಲೈನ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ.
ಏಳು ವರ್ಷ ಮೇಲ್ಪಟ್ಟ ವಯೋಮಾನದವರಿಗಾಗಿ ಆನ್‌ಲೈನ್ ಚೆಸ್ ತರಬೇತಿ ಕಾರ್ಯಕ್ರಮ ಇದೇ ಸೆಪ್ಟೆಂಬರ್ ಒಂದರಿಂದ ಮೊದಲ್ಗೊಂಡು 2020 ಡಿಸೆಂಬರ್ ತಿಂಗಳ 31 ನೇ ತಾರೀಕಿನವರೆಗೆ ನಡೆಯಲಿದೆ.
ಒಂದು ಘಂಟೆ ಅವಧಿಯ ಈ ತರಬೇತಿಯು ಒಟ್ಟು 100 ಕ್ಲಾಸ್ ಹೊಂದಿದ್ದು,
ತರಬೇತಿಯ ವೇಳಾಪಟ್ಟಿ ಹೀಗಿದೆ
ಬೆಳಿಗ್ಗೆ 8 – 9
ಸಾಯಂಕಾಲ 4 – 5, 6 – 7, 7 – 8.
ಸ್ಟಾರ್ಸ್ ವಿಭಾಗ
ಸಿಲ್ವರ್ ಮತ್ತು ಗೋಲ್ಡನ್ ವಿಭಾಗ ಹಾಗೂ ಡೈಮಂಡ್ ಮತ್ತು ಪ್ಲಾಟಿನಮ್ ವಿಭಾಗ, ಹೀಗೆ 5 ಪ್ರಾಕಾರಗಳಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸ ಬಹುದಾದ ದೂರವಾಣಿ ಸಂಖ್ಯೆ :+91 7899969063
ವಿಳಾಸ :
ಕಶ್ವಿ ಚೆಸ್ ಸ್ಕೂಲ್ ಕುಂದಾಪುರ
ಹೆಡ್ ಪೋಸ್ಟ್ ಆಫೀಸ್ ಎದುರಿನ ರಸ್ತೆ ಕುಂದಾಪುರ : 576201