ಆಜಾದ್ ಇಲೆವೆನ್ ಫ್ರೆಂಡ್ಸ್ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳು ಮತ್ತು ಅನಾರೋಗ್ಯ ಪೀಡಿತರ ಸಹಾಯಾರ್ಥ ಎ.ಪಿ.ಎಲ್ ಟ್ರೋಫಿ-2025
ಉಡುಪಿ-ಇಲ್ಲಿನ ಪಡುತೋನ್ಸೆಯ ಆಜಾದ್ ಇಲೆವೆನ್ ಫ್ರೆಂಡ್ಸ್ ಕ್ರಿಕೆಟರ್ಸ್ ಗುಜ್ಜರಬೆಟ್ಟು ಇವರ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳ ಹಾಗೂ ಅನಾರೋಗ್ಯ ಪೀಡಿತರ ಸಹಾಯಾರ್ಥವಾಗಿ 40 ಗಜಗಳ ಹೊನಲು ಬೆಳಕಿನ ಎ.ಪಿ.ಎಲ್ ಟ್ರೋಫಿ-2025 ಸೀಸನ್- 2 ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಇದಲ್ಲದೇ ಹಿರಿಯ ಆಟಗಾರರನ್ನು ಮತ್ತೆ ಒಗ್ಗೂಡಿಸುವ ಸಲುವಾಗಿ ಸ್ಥಳೀಯ ಪರಿಸರದ 6 ಆಹ್ವಾನಿತ ಹಿರಿಯ ತಂಡಗಳಿಗಾಗಿ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಫೆಬ್ರವರಿ 8 ಮತ್ತು 9 ರಂದು ಪಡುತೋನ್ಸೆ ಸಮೀಪದ ಗುಜ್ಜರಬೆಟ್ಟು ಮೈದಾನದಲ್ಲಿ ನಡೆಯಲಿರುವ ಈ ಕ್ರಿಕೆಟ್ ಪಂದ್ಯಾಟದ ಪ್ರಥಮ ಬಹುಮಾನ 33,333 ರೂ ನಗದು ಸಹಿತ ಆಕರ್ಷಕ ಟ್ರೋಫಿ,ದ್ವಿತೀಯ ಬಹುಮಾನ 22,222ರೂ ನಗದು ಸಹಿತ ಆಕರ್ಷಕ ಟ್ರೋಫಿ ಒಳಗೊಂಡಿದ್ದು,ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರಿಗೆ ವಿಶೇಷ ಬಹುಮಾನ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಸೈಕಲ್ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.
ಪಂದ್ಯಾಟದ ನೇರ ಪ್ರಸಾರ ಕರ್ನಾಟಕ ಜನಪ್ರಿಯ ಕ್ರೀಡಾವಾಹಿನಿ ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಹೆಚ್ಚಿನ ಮಾಹಿತಿಗಾಗಿ 6364117581,7204844304 ಮತ್ತು9916885483 ಈ ನಂಬರ್ ಗಳನ್ನು ಸಂಪರ್ಕಿಸಬಹುದು.