ಕ್ರಿಕೆಟ್ಕೋವಿಡ್ ನಡುವೆ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಎಸ್.ಎಸ್.ಕಪ್-2020

ಕೋವಿಡ್ ನಡುವೆ ದಾವಣಗೆರೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಎಸ್.ಎಸ್.ಕಪ್-2020

-

- Advertisment -spot_img
ದಾವಣಗೆರೆ  ಇಲೆವೆನ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ವತಿಯಿಂದ   ಡಾ. ಶಾಮನೂರು ಶಿವಶಂಕರಪ್ಪ ನವರ ಹುಟ್ಟು ಹಬ್ಬದ ಅಂಗವಾಗಿ ಆಚರಿಸುತ್ತಿರುವ  ಎಸ್.ಎಸ್. ಕಪ್ -2020 ಟೆನ್ನಿಸ್ ಬಾಲ್ ಟೂರ್ನಮೆಂಟ್ ಗೆ  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರವರು ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು,
ನಂತರ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕೆ ಕ್ರೀಡೆ ಅತಿ ಮುಖ್ಯವಾಗಿದ್ದು, ಈಗಿನ ಯುವಕರು ಮೊಬೈಲ್ ಗೆ ಹೆಚ್ಚು ಗಮನ ನೀಡದೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು ಹಾಗೂ ಟೂರ್ನಮೆಂಟ್ ನಲ್ಲಿ ಭಾಗವಹಿಸುತ್ತಿರುವ ಎಲ್ಲಾ ಆಟಗಾರರಿಗೂ ಶುಭ ಕೋರಿದರು, ಈ ಸಂದರ್ಭದಲ್ಲಿ ಬಡಾವಣೆ ಠಾಣೆ ಪಿ.ಎಸ್.ಐ ಅಶ್ವಿನ್ ಕುಮಾರ್, ದಾವಣಗೆರೆ ದಕ್ಷಿಣ ಸಂಚಾರಿ ಪಿ.ಎಸ್.ಐ ಕಿರಣ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ್ ಶಿವಗಂಗಾ, ಮಹದೇವ್, ರಾಜು ರೆಡ್ಡಿ, ರಮೇಶ್,ಸುರೇಶ್, ಶೌಕತ್, ರವಿ, ಸುರಭಿ ವಿನಯ್, ಸಾಮಾಜಿಕ ಜಾಲತಾಣದ ಕೆ. ಎಲ್. ಹರೀಶ್ ಬಸಾಪುರ, ಸಂಘಟಕರಾದ  ಕುರುಡಿ ಗಿರೀಶ್, ಜಯಪ್ರಕಾಶ್ ಗೌಡ ( ಕುಬೇರ) ಉಪಸ್ಥಿತರಿದ್ದರು.
ಜೂನ್ 16 ರ ವರೆಗೆ ನಡೆಯಲಿರುವ ಈ ಪಂದ್ಯಾಕೂಟದಲ್ಲಿ ದಾವಣಗೆರೆ ಸುತ್ತ ಮುತ್ತಲಿನ 20 ಕಿ.ಮೀ ವ್ಯಾಪ್ತಿಯ 20 ತಂಡಗಳು ಭಾಗವಹಿಸಿದ್ದು,ಒಟ್ಟು 47 ಪಂದ್ಯಗಳು ಸತತ 6 ದಿನಗಳ ಕಾಲ ಸಾಗಲಿದೆ.ಅಲ್ಲದೇ ಪೋಲಿಸ್,ಪತ್ರಕರ್ತರು,ವಕೀಲರು,ವೈದ್ಯರು, ಉದ್ಯಮಿಗಳು ಸೇರಿ 6 ತಂಡಗಳ ವಿಶೇಷ ಪಂದ್ಯಗಳು ನಡೆಯಲಿದ್ದು,ವಿಜೇತ ತಂಡಗಳು ಕ್ರಮವಾಗಿ 33 ಹಾಗೂ 22 ಸಾವಿರ ನಗದು ಸಹಿತ ಎಸ್.ಎಸ್.ಕಪ್-2020 ಪಡೆಯಲಿದ್ದಾರೆ.
ದಾವಣಗೆರೆ ಜಯಪ್ರಕಾಶ್ ಗೌಡ(ಜೆ.ಪಿ)ಸಾರಥ್ಯದಲ್ಲಿ ಈವರೆಗೆ 12 ರಾಷ್ಟ್ರೀಯ ಮಟ್ಟದ  ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು,ರಾಜ್ಯದಲ್ಲಿಯೇ ಅತ್ಯಂತ ವೈಭವೋಪೇತ ಪಂದ್ಯಾಕೂಟ ಎನಿಸಿಕೊಂಡಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

18 − 11 =

Latest news

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ 

ಮಂಗಳಾಪುರ ಟ್ರೋಫಿ: ಮೇ 9–10ರಂದು ರೋಚಕ ಪಂದ್ಯಗಳ ಕಾದಾಟ  ಮಂಗಳೂರು: ಮಂಗಳೂರು ನಗರದಲ್ಲಿ ಜಿಎಸ್‌ಬಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಕ್ರೀಡಾ ಹಬ್ಬವಾಗಿ **ಮಂಗಳಾಪುರ ಟ್ರೋಫಿ 2026**ಕ್ಕೆ ಕೌಂಟ್‌ಡೌನ್...

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್

ಅಂಬಾಗಿಲು ಜಿಎಸ್‌ಬಿ ಕ್ರಿಕೆಟ್ ಟೂರ್ನಿ:  ವಿಹಾನ್ ಫೈಟರ್ಸ್ ಚಾಂಪಿಯನ್ ಅಂಬಾಗಿಲು: ಅಂಬಾಗಿಲು ಎಆರ್ ಫ್ರೆಂಡ್ಸ್ (AR Friends) ವತಿಯಿಂದ ಜಿಎಸ್‌ಬಿ ಟ್ರೋಫಿ ಅಂಬಾಗಿಲು 2026 ಕ್ರಿಕೆಟ್ ಟೂರ್ನಿಯನ್ನು ಇಂದು...

ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ

  ಅಕ್ಷಯ ಟಿ 20 ಕಪ್-2026 ಪಂದ್ಯಾಟಕ್ಕೆ ಅದ್ಧೂರಿ ಚಾಲನೆ ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ...

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026

ಉಡುಪಿ ಜಿಲ್ಲಾಮಟ್ಟದ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಟೂರ್ನಿ – 2026 ಉಡುಪಿ: ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಮತ್ತು ಸನ್‌ರೈಸ್ ಕ್ರಿಕೆಟ್ ಅಕಾಡೆಮಿ, ರಂಗನಪಾಲ್ಕೆ ಇವರ...
- Advertisement -spot_imgspot_img

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

Must read

- Advertisement -spot_imgspot_img

You might also likeRELATED
Recommended to you