ಕ್ರಿಕೆಟ್ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ...!!

ಕಷ್ಟ ಹಂಚಿಕೊಂಡು ಪೂಮಾದಿಂದ ಉಚಿತ ಶೂ ಪಡೆದಿದ್ದ ಕ್ರಿಕೆಟಿಗನಿಗೆ ಸಂಕಷ್ಟ…!!

-

- Advertisment -spot_img
ಇತ್ತೀಚೆಗಷ್ಟೇ ಜಿಂಬಾಬ್ವೆ ತಂಡದ ಆಟಗಾರ ರ‍್ಯಾನ್ ಬರ್ಲ್‌ ನಮ್ಮ ತಂಡಕ್ಕೆ ಕ್ರಿಕೆಟ್ ಆಡಲು ಸರಿಯಾದ ಶೂ ಇಲ್ಲ ಎಂದು. ಪ್ರತಿ ಪಂದ್ಯದ ನಂತರ ನಾವುಗಳು ಕಿತ್ತುಹೋದ ಶೂಗಳನ್ನು ಧರಿಸಿ ಕ್ರಿಕೆಟ್ ಆಡುತ್ತಿದ್ದೇವೆ, ಪ್ರತಿ ಸರಣಿ ಮುಗಿದ ನಂತರ ಕಿತ್ತುಹೋದ ಶೂಗಳನ್ನು ನಾವೇ ಸರಿಮಾಡುಕೊಳ್ಳಬೇಕಿದೆ. ಹಾಗೂ ಹೊಲಿದುಕೊಳ್ಳುತ್ತಿದ್ದೇವೆ ಎಂದು ಟ್ವೀಟ್ ಮಾಡುವುದರ ಮೂಲಕ ಪ್ರಾಯೋಜಕತ್ವಕ್ಕಾಗಿ ಮನವಿ ಮಾಡಿದ್ದರು.
ರ‍್ಯಾನ್ ಬರ್ಲ್‌ ಮಾಡಿದ ಮನವಿಗೆ 24 ಗಂಟೆಯೊಳಗೆ ಸ್ಪಂದಿಸಿದ ಪ್ರತಿಷ್ಠಿತ  ಪೂಮಾ ಸಂಸ್ಥೆ ಜಿಂಬಾಬ್ವೆ ಆಟಗಾರರಿಗೆ ಉಚಿತ ಶೂಗಳನ್ನು ನೀಡುವುದರ ಮೂಲಕ ಮಾನವೀಯತೆ ಮೆರೆಯಿತು. ಈ ಮೂಲಕ ಶೂಗಳಿಲ್ಲದೆ ಕಷ್ಟಪಡುತ್ತಿದ್ದ ಜಿಂಬಾಬ್ವೆ ತಂಡಕ್ಕೆ ಹೊಚ್ಚಹೊಸ ಶೂಗಳು ಕೈ ಸೇರಿತ್ತು.
ಪೂಮಾ ಸಂಸ್ಥೆ ಮುಂದೆ ಬಂದು ಸ್ಪಂದಿಸಿದಕ್ಕೆ  ಜಿಂಬಾಬ್ವೆ ತಂಡದ ಆಟಗಾರರು ಸಂತೋಷವನ್ನು ವ್ಯಕ್ತಪಡಿಸಿದ್ದರು, ಹಾಗೂ ಟ್ವೀಟ್ ಮೂಲಕ ಮನವಿ ಮಾಡಿದ್ದ ರ‍್ಯಾನ್ ಬರ್ಲ್‌ ಮನವಿಯಂತೆ ಬೇಡಿಕೆ ಈಡೇರಿತ್ತು.
ಆದರೆ ಇದೀಗ ಈ ಎಲ್ಲಾ ಬೆಳವಣಿಗೆಯ ನಂತರ  ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದ ರ‍್ಯಾನ್ ಬರ್ಲ್‌ನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾಗಿದೆಯಂತೆ. ರ‍್ಯಾನ್ ಬರ್ಲ್‌ ಶೂ ಪ್ರಾಯೋಜಕತ್ವ ಕೇಳಿ ಮಾಡಿದ್ದ ಟ್ವೀಟ್ ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಮಾಡಿರುವ ಅವಮಾನ ಎಂದು ಬೋರ್ಡ್ ನ ಸದಸ್ಯರು ಅಂದುಕೊಂಡಿದ್ದಾರೆಂದು ಹೇಳಲಾಗುತ್ತಿದ್ದು ಆತನ ವಿರುದ್ಧ ಕಠಿಣ ಕ್ರಮಕ್ಕೆ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಹೀಗಾಗಿ ಮುಂಬರುವ ಸರಣಿಗಳಲ್ಲಿ ರ‍್ಯಾನ್ ಬರ್ಲ್‌ ತಂಡದಲ್ಲಿ ಇರುತ್ತಾರೊ ಇಲ್ಲವೊ ಎನ್ನುವ ಅನುಮಾನವಿದೆ. ತಂಡದಲ್ಲಿ  ಅವಕಾಶ ಸಿಗುವುದು ಅನುಮಾನ ಎಂದು ಹೇಳಲಾಗುತ್ತಿದ್ದು ಟ್ವೀಟ್ ಮೂಲಕ ಕಷ್ಟವನ್ನು ಹಂಚಿಕೊಂಡು  ಸಹಾಯ ಪಡೆದಿದ್ದ ರ‍್ಯಾನ್ ಬರ್ಲ್‌ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನುವುದು ಮಾತ್ರ ದುರಂತವೆ ಹೌದು….!!!
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

17 − thirteen =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you