ಕ್ರಿಕೆಟ್ಸಾಗರ್ ಭಂಡಾರಿ ಸಾಹಸ- ಕನ್ನಡ ರಾಜ್ಯೋತ್ಸವ ಕಪ್ ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ

ಸಾಗರ್ ಭಂಡಾರಿ ಸಾಹಸ- ಕನ್ನಡ ರಾಜ್ಯೋತ್ಸವ ಕಪ್ ಫ್ರೆಂಡ್ಸ್ ಬೆಂಗಳೂರು ತಂಡಕ್ಕೆ

-

- Advertisment -spot_img

ಡಾ|ವಿಷ್ಣು ಕ್ರಿಕೆಟರ್ಸ್ ಬೆಂಗಳೂರಿನ ತಂಡ ಜಯನಗರ 1 ನೇ ಬ್ಲಾಕ್ ನ ಮಾಧವನ್ ಪಾರ್ಕ್ (ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ ನಲ್ಲಿ ಏರ್ಪಡಿಸಿದ್ದ 2 ದಿನಗಳ ಹಗಲಿನ ಪಂದ್ಯಾಕೂಟ ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದುಕೊಂಡಿದೆ.

ಲೀಗ್ ಹಂತದ ಪಂದ್ಯಗಳ ಬಳಿಕ ಸೆಮಿಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡ ನ್ಯಾಶ್ ಬೆಂಗಳೂರನ್ನು ಹಾಗೂ ಬೆಸ್ಟ್ ಇಲೆವೆನ್ ತಂಡ ವಿಷ್ಣು ಸೇನಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.

ಫೈನಲ್ ನಲ್ಲಿ ಫ್ರೆಂಡ್ಸ್ ತಂಡ ಬೆಸ್ಟ್ ಇಲೆವೆನ್ ತಂಡವನ್ನು ಮಣಿಸಿ ಪ್ರಥಮ ಪ್ರಶಸ್ತಿಯ ರೂಪದಲ್ಲಿ 50,000 ನಗದು ಹಾಗೂ ರನ್ನರ್ಸ್ ಬೆಸ್ಟ್ ಇಲೆವೆನ್ 25,000 ನಗದು ಜೊತೆಗೆ ಆಕರ್ಷಕ ಟ್ರೋಫಿಗಳನ್ನು ಪಡೆದರು.

ಪಂದ್ಯಾಕೂಟದುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಆಲ್ ರೌಂಡರ್ ಸಾಗರ್ ಭಂಡಾರಿ ಎದುರಾಳಿಗಳ ಗೆಲುವಿನ ಕನಸನ್ನು ನುಚ್ಚುನೂರುಗೈದರು. ದಾಂಡಿಗತನದಲ್ಲಿ ಭರ್ಜರಿ ಬೌಂಡರಿ, ಸಿಕ್ಸರ್ ಗಳ ಮೂಲಕ ರನ್ ಹೊಳೆ ಹರಿಸಿ,ಗರಿಷ್ಟ ವಿಕೆಟ್ ಪಡೆದು ಅರ್ಹವಾಗಿ‌‌ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಈ ಪಂದ್ಯಾಕೂಟದ ನೇರ ಪ್ರಸಾರ್ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ಬಿತ್ತರಿಸಿತ್ತು.

ಆರ್.ಕೆ‌ ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

four × 4 =

Latest news

ಶಾಂಭವಿ ಟ್ರೋಫಿ 2026:ಚಾಂತಾರು  ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್

ಶಾಂಭವಿ ಟ್ರೋಫಿ 2026:ಚಾಂತಾರು ಗ್ಲೋಬಲ್ ಕ್ರೀಡಾಂಗಣದಲ್ಲಿ ಬ್ರಹ್ಮಾವರ ವಲಯ ಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಚಾಂತಾರು: ಚಾಂತಾರು ಗ್ರಾಮದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ **ಶಾಂಭವಿ...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you