ಡಾ|ವಿಷ್ಣು ಕ್ರಿಕೆಟರ್ಸ್ ಬೆಂಗಳೂರಿನ ತಂಡ ಜಯನಗರ 1 ನೇ ಬ್ಲಾಕ್ ನ ಮಾಧವನ್ ಪಾರ್ಕ್ (ಕಿತ್ತೂರು ರಾಣಿ ಚೆನ್ನಮ್ಮ ಸ್ಟೇಡಿಯಂ ನಲ್ಲಿ ಏರ್ಪಡಿಸಿದ್ದ 2 ದಿನಗಳ ಹಗಲಿನ ಪಂದ್ಯಾಕೂಟ ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಗೆದ್ದುಕೊಂಡಿದೆ.
ಲೀಗ್ ಹಂತದ ಪಂದ್ಯಗಳ ಬಳಿಕ ಸೆಮಿಫೈನಲ್ ನಲ್ಲಿ ಫ್ರೆಂಡ್ಸ್ ಬೆಂಗಳೂರು ತಂಡ ನ್ಯಾಶ್ ಬೆಂಗಳೂರನ್ನು ಹಾಗೂ ಬೆಸ್ಟ್ ಇಲೆವೆನ್ ತಂಡ ವಿಷ್ಣು ಸೇನಾ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.
ಫೈನಲ್ ನಲ್ಲಿ ಫ್ರೆಂಡ್ಸ್ ತಂಡ ಬೆಸ್ಟ್ ಇಲೆವೆನ್ ತಂಡವನ್ನು ಮಣಿಸಿ ಪ್ರಥಮ ಪ್ರಶಸ್ತಿಯ ರೂಪದಲ್ಲಿ 50,000 ನಗದು ಹಾಗೂ ರನ್ನರ್ಸ್ ಬೆಸ್ಟ್ ಇಲೆವೆನ್ 25,000 ನಗದು ಜೊತೆಗೆ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಪಂದ್ಯಾಕೂಟದುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಆಲ್ ರೌಂಡರ್ ಸಾಗರ್ ಭಂಡಾರಿ ಎದುರಾಳಿಗಳ ಗೆಲುವಿನ ಕನಸನ್ನು ನುಚ್ಚುನೂರುಗೈದರು. ದಾಂಡಿಗತನದಲ್ಲಿ ಭರ್ಜರಿ ಬೌಂಡರಿ, ಸಿಕ್ಸರ್ ಗಳ ಮೂಲಕ ರನ್ ಹೊಳೆ ಹರಿಸಿ,ಗರಿಷ್ಟ ವಿಕೆಟ್ ಪಡೆದು ಅರ್ಹವಾಗಿ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
ಈ ಪಂದ್ಯಾಕೂಟದ ನೇರ ಪ್ರಸಾರ್ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ಬಿತ್ತರಿಸಿತ್ತು.
ಆರ್.ಕೆ ಆಚಾರ್ಯ ಕೋಟ