ಭರವಸೆಯ ಬೆಳಕುಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು - ಐಕಳ ಹರೀಶ್ ಶೆಟ್ಟಿ

ಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು – ಐಕಳ ಹರೀಶ್ ಶೆಟ್ಟಿ

-

- Advertisment -spot_img

ಇಂದಇಂದು ವಿದ್ಯಾರ್ಥಿವೇತನ ಪಡೆಯುವವರು ಮುಂದೆ ಕೊಡುವಂತಾಗಬೇಕು - ಐಕಳ ಹರೀಶ್ ಶೆಟ್ಟಿ.

——————————————–

ಇಂದು ವಿವಿಧ ಚಾರಿಟಿ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಮುಂದೆ ಅದೇ ರೀತಿಯ ವಿದ್ಯಾರ್ಥಿವೇತನಗಳನ್ನು ಕೊಡುವವರಾಗಬೇಕು. ಕೃತಜ್ಞತೆಯು ಅತೀ ದೊಡ್ಡ ಮೌಲ್ಯವಾಗಿದೆ. ನಮ್ಮ ಶಿಕ್ಷಣಕ್ಕೆ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಂದ ದೊರೆತ ವಿದ್ಯಾರ್ಥಿವೇತನವನ್ನು ಸದುಪಯೋಗ ಪಡಿಸುವುದು ಮಾತ್ರವಲ್ಲ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಮತ್ತು ಮುಂದೆ ನಾವು ಸಂಪಾದನೆ ಆರಂಭಿಸಿದಾಗ ಅದರ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.

 

ಅವರು ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿವೇತನ ಮತ್ತು ಸಹಾಯ ಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತಾಡುತ್ತಿದ್ದರು. ಅಮ್ಮನ ನೆರವು ಫೌಂಡೇಶನ್ ಮೂಲಕ ಸರಕಾರಿ ಶಾಲೆಗಳ ಪ್ರತಿಭಾವಂತ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಅಂದಾಜು ಮೂರು ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನಗಳನ್ನು ಹಸ್ತಾಂತರ ಮಾಡಿ ಅವರು ಶುಭಕೋರಿದರು.

 

ಸಹಕಾರಿ ಧುರೀಣರು ಹಾಗೂ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರರೂ ಆದ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಕಳದ ವಿಜೇತಾ ವಿಶೇಷ ಶಾಲೆಗೆ, ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಬೆಳ್ಳಿಹಬ್ಬದ ಕೊಡುಗೆಯಾಗಿ ನಿರ್ಮಾಣ ಮಾಡುತ್ತಿರುವ ಮನೆಗೆ ಮತ್ತು ಕಾರ್ಕಳದ ಸುರಕ್ಷಾ ಸೇವಾಶ್ರಮಗಳಿಗೆ ಅಮ್ಮನ ನೆರವು ಫೌಂಡೇಶನ್ ಕೊಡಮಾಡಿದ ತಲಾ 10,000 ರೂ.ಗಳ ಸಹಾಯಧನವನ್ನು ಹಸ್ತಾಂತರ ಮಾಡಿ ಶುಭಕೋರಿದರು. ಮಾಜಿ ಜಿ ಪಂ. ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ನಿಟ್ಟೆ ಮೆಸ್ಕಾಂನ ಸಹಾಯಕ ಅಭಿಯಂತರರಾದ ವಿನಾಯಕ್ ಕಾಮತ್, ಬೆಳ್ಮಣ್ ಜೆಸಿಐ ಅಧ್ಯಕ್ಷ ಇನ್ನಾ ಪ್ರದೀಪ್ ಶೆಟ್ಟಿ, ಹೋಟೆಲ್ ಉದ್ಯಮಿ ಜಗದೀಶ್ ಶೆಟ್ಟಿ, ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಅವರು ಕಾರ್ಯಕ್ರಮದ ಅತಿಥಿಗಳಾಗಿದ್ದರು. ಬೆಳ್ಮಣ್ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯರಾದ ವಿನ್ಸೆಂಟ್ ಡಿಸೋಜಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

 

ಅಮ್ಮನ ನೆರವು ಫೌಂಡೇಶನ್ ಅಧ್ಯಕ್ಷರಾದ ಅವಿನಾಶ್ ಜಿ ಶೆಟ್ಟಿ ಅವರು ಈ ವರ್ಷದಲ್ಲಿ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳ ಮಕ್ಕಳಿಗೆ 16 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು ಅದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಟ್ರಸ್ಟಿನ ಸಲಹೆಗಾರರಾದ ವಸಂತ್ ಎಂ ಅವರು ವಿದ್ಯಾರ್ಥಿವೇತನದ ವಿವರ ನೀಡಿದರು. ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕ ಗೋಪಾಲ್ ಅವರು ಧನ್ಯವಾದ ಸಲ್ಲಿಸಿದರು.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

eight + 7 =

Latest news

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..! ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್...
- Advertisement -spot_imgspot_img

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು...

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ ವತಿಯಿಂದ **ಕಂದಾಯೋತ್ಸವ – 2025** ನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ....

Must read

- Advertisement -spot_imgspot_img

You might also likeRELATED
Recommended to you