ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ವೃತ್ತಿಪರ ಶಿಕ್ಷಕರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ

ಹಳೆಯಂಗಡಿ : ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ವೃತ್ತಿಪರ ಶಿಕ್ಷಕರ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ  ರವಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ನಿರ್ದೇಶಕ ಡಾ.ಕಿಶೋರ್ ಕುಮಾರ್,ವಿದ್ಯಾರಶ್ಮಿ ಸ್ಕೂಲ್ ಸವಣೂರಿನ ಮೆನೇಜಿಂಗ್ ಡೈರೆಕ್ಟರ್ ಅಶ್ವಿನ್ ಶೆಟ್ಟಿ,ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ, ಸ್ಪೋರ್ಟ್ಸ್ ಡೆನ್ ಈವೆಂಟ್ ನ ರೂವಾರಿ ಗಣೇಶ್ ಕಾಮತ್, ಬ್ಯಾಡ್ಮಿಂಟನ್ ಕೋಚ್ ಸಂತೋಷ್ ಖಾರ್ವಿ,ಮೆನೇಜರ್ ಕೆ.ಪಿ.ಸತೀಶ್, ರಾಘವೇಂದ್ರ, ಕಾರ್ತಿಕ್ ಹಾಗೂ ಸಂಪತ್ ಉಪಸ್ಥಿತರಿದ್ದರು.

ಶಿಕ್ಷಕರಿಗಾಗಿ ಆಯೋಜಿಸಲ್ಪಟ್ಟ ಈ ಪಂದ್ಯಾಕೂಟದಲ್ಲಿ ಬೇರೆ ಬೇರೆ ಶಾಲಾ,ಕಾಲೇಜುಗಳಿಂದ 48 ಸ್ಪರ್ಧಿಗಳು ಭಾಗವಹಿಸಿದ್ದು, ಪಂದ್ಯಾಕೂಟ ಯಶಸ್ವಿಯಾಗಿ ಸಾಗಿತು.

 

ಆರ್.ಕೆ.ಆಚಾರ್ಯ ಕೋಟ‌

  •  
  •  
  •  
  •  
  •  

Leave a Reply

Your email address will not be published. Required fields are marked *