ಕ್ರಿಕೆಟ್ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ

ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ

-

- Advertisment -spot_img

**ಸಾಲಿಗ್ರಾಮದಲ್ಲಿ ವೃಷ್ಠಿ ಟ್ರೋಫಿ–2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ ಯಶಸ್ವಿ**

ಸಾಲಿಗ್ರಾಮದ ಹಾಳುಕೋಟೆ ಮೈದಾನದಲ್ಲಿ ವೃಷ್ಟಿ ಟ್ರೋಫಿ-2026 2026 ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿಯು ಭರ್ಜರಿಯಾಗಿ ನೆರವೇರಿತು.ವೃಷ್ಟಿ ಕ್ರಿಕೆಟರ್ಸ್ ಆಶ್ರಯದಲ್ಲಿ ಹಾಗೂ ವಿಜೇಂದ್ರ ಆಚಾರ್ಯ ಮತ್ತು ಕೆ.ಎಮ್.ಗಣೇಶ್ ಆಚಾರ್ಯ ಇವರ ಸಾರಥ್ಯದಲ್ಲಿ,ಮನೋಜ್ ಆಚಾರ್ಯ ಇವರ ಮುಂದಾಳತ್ವದಲ್ಲಿ ಹಾಗೂ ವೃಷ್ಟಿ ಸಾಲಿಗ್ರಾಮ ತಂಡದ ಹಿರಿಯ ಆಟಗಾರರಾದ ಸುಜಿತ್ ಆಚಾರ್ಯ,ಬಾಲು,ಭರತ್,ರಾಜೇಶ್,ಶ್ರೀಕಾಂತ್,ಸುಪ್ರೀತ್ ಆಚಾರ್ಯ ಇವರೆಲ್ಲರ ಸಹಕಾರದಿಂದ ಆಯೋಜಿಸಲಾದ ಈ ಕ್ರೀಡಾಕೂಟವು ವಿಶ್ವಕರ್ಮ ಸಮಾಜದ ಕ್ರೀಡಾಭಿಮಾನಿಗಳ ಜೊತೆ ಮುಕ್ತ ವಿಭಾಗದಲ್ಲಿ ಸಮಾಜದ ಎಲ್ಲಾ ತಂಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ವಿಶ್ವಕರ್ಮ ಸಮಾಜದ ಯುವಕರು ಈ ಟೂರ್ನಿಯಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿ ಕ್ರೀಡಾಸ್ಫೂರ್ತಿಯನ್ನು ಮೆರೆದರು. ರೋಚಕ ಪಂದ್ಯಗಳಿಂದ ಕಂಗೊಳಿಸಿದ ಈ ಟೂರ್ನಿಯು ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿತು.

ಶನಿವಾರ ಬೆಳಿಗ್ಗೆ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಈಜು ಪಟು ಗಿನ್ನಿಸ್ ಗೋಪಾಲ್ ಖಾರ್ವಿ ಬ್ಯಾಟಿಂಗ್ ಮಾಡುವುದರ ಪಂದ್ಯಾಟಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದರು.ಈ ಸಂದರ್ಭ ವಿಜೇಂದ್ರ ಆಚಾರ್ಯ,ಕೆ.ಎಂ.ಗಣೇಶ್ ಆಚಾರ್ಯ,ಮನೋಜ್ ಆಚಾರ್ಯ,ಅಶ್ವಿನ್ ಆಚಾರ್ ಕುಂಭಾಶಿ,ಸುಬ್ರಮಣ್ಯ ಆಚಾರ್ಯ ನೀರ್ಕೆರೆ,ಕೇಶವ ಕರ್ಕೇರಾ,ರಾಘು ಆಚಾರ್ ಪಾರಂಪಳ್ಳಿ, ಹರೀಶ್ ಆಚಾರ್ ಸಾಲಿಗ್ರಾಮ,ಪ್ರಶಾಂತ್ ಆಚಾರ್ ಸಾಲಿಗ್ರಾಮ ಮತ್ತು ಶಿವನಾರಾಯಣ ಐತಾಳ್ ಕೋಟ ಉಪಸ್ಥಿತರಿದ್ದರು.

 

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿಯವರು ಪಂದ್ಯಾಟಕ್ಕೆ ಆಗಮಿಸಿ ಶುಭಹಾರೈಸಿದರು.

ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಟಿ.ಸಿ.ಎ ಉಡುಪಿ ಅಧ್ಯಕ್ಷ ಗೌತಮ್ ಶೆಟ್ಟಿ ಉದ್ಘಾಟನೆ ನೆರವೇರಿಸಿದರು‌.ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಪ್ರಮೋದ್ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ,ಸುಧಾಕರ್ ಶೆಟ್ಟಿ ತೆಕ್ಕಟ್ಟೆ,ಆನಂದ.ಸಿ.ಕುಂದರ್,ರಾಘವೇಂದ್ರ ಕಾಂಚನ್ ಬಾರಿಕೆರೆ,ಪ್ರದೀಪ್ ಶೆಟ್ಟಿ,ಸ್ಪೋರ್ಟ್ಸ್ ಕನ್ನಡ ಕೋಟ ರಾಮಕೃಷ್ಣ ಆಚಾರ್ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಅಂತಿಮ ಪಂದ್ಯದಲ್ಲಿ ಜೈ ಬಲರಾಮ್ – ಅಯೋಧ್ಯಾ, ಮಲ್ಪೆ ತಂಡವು ಉತ್ತಮ ಆಟದ ಮೂಲಕ ಕದಳೀ ಪ್ರಿಯ, ಪೆರ್ಡೂರು ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ರೂ.1,33,333 ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪ್ರದಾನ ಮಾಡಲಾಯಿತು. ರನ್ನರ್-ಅಪ್ ತಂಡವಾದ ಕದಳೀ ಪ್ರಿಯ, ಪೆರ್ಡೂರು ತಂಡಕ್ಕೆ ರೂ.77,777 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಅಂತಿಮ ಪಂದ್ಯದಲ್ಲಿ ಮಲ್ಪೆಯ ಅಕ್ಷಯ್ ಮಲ್ಪೆ ಅವರು ಅದ್ಭುತ ಪ್ರದರ್ಶನ ನೀಡಿದ ಕಾರಣ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಅವರು ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು. ಪೆರ್ಡೂರಿನ ನಾಗೇಶ್ ಆಚಾರ್ಯ ಅವರು ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಗುರುತಿಸಿಕೊಂಡು ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಪಡೆದರು.

ಟೂರ್ನಿಯ ಅವಧಿಯಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ ಪೆರ್ಡೂರಿನ ಪ್ರಸನ್ನ ಆಚಾರ್ಯ ಅವರಿಗೆ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯಾಗಿ ಸೈಕಲ್ ನೀಡಿ ಗೌರವಿಸಲಾಯಿತು.

ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಉದ್ಯಮಿಗಳಾದ ಉದಯ್ ಆಚಾರ್ಯ ಹುಚ್ಕೆರೆ,ಸುಬ್ರಾಯ ಆಚಾರ್ ಮಣೂರು,ಜ್ಯೋತಿ ರಮೇಶ್ ಆಚಾರ್ಯ ಕಾರ್ಕಳ,ಮಹೇಂದ್ರ ಆಚಾರ್ಯ ಸಾಲಿಗ್ರಾಮ,ಕಿಶೋರ್ ಆಚಾರ್ ಉಡುಪಿ,ವೆಂಕಟೇಶ ಆಚಾರ್ಯ ಸಾಲಿಗ್ರಾಮ,ರಾಘವೇಂದ್ರ ಆಚಾರ್ಯ,ಕೆ.ಎಂ‌.ಗಣೇಶ್ ಆಚಾರ್ಯ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು.

ಈ ಸಂದರ್ಭ ಉದಯ್ ಆಚಾರ್ಯ ಹುಚ್ಕೆರೆ,ನಾಗರಾಜ್ ಆಚಾರ್ಯ ಮನೀಷ್ ಎಂಟರ್ಪ್ರೈಸಸ್, ಪ್ರಥ್ವೀರಾಜ್ ಆಚಾರ್ಯ ಮತ್ತು ಮನೋಜ್ ಆಚಾರ್ಯ ಇವರನ್ನು ಗೌರವಿಸಲಾಯಿತು.ಶಿವನಾರಾಯಣ ಐತಾಳ್ ಕೋಟ ನಿರೂಪಿಸಿದರು.

ಈ ಪಂದ್ಯಾವಳಿಯ ನೇರ ಪ್ರಸಾರವನ್ನು Sports Kannada Live ಮೂಲಕ ಮಾಡಲಾಗಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಕ್ರೀಡಾಭಿಮಾನಿಗಳು ಪಂದ್ಯಾವಳಿಯನ್ನು ನೇರವಾಗಿ ವೀಕ್ಷಿಸುವ ಅವಕಾಶ ದೊರಕಿತು.

ಸಂಘಟಕರು ಉತ್ತಮ ವ್ಯವಸ್ಥೆಗಳನ್ನು ಮಾಡಿದ್ದು, ಆಟಗಾರರು ಮತ್ತು ಪ್ರೇಕ್ಷಕರು ಕ್ರೀಡಾಸ್ಪರ್ಧೆಯನ್ನು ಉತ್ಸಾಹದಿಂದ ಅನುಭವಿಸಿದರು. ಕ್ರೀಡೆ ಮೂಲಕ ಸಮುದಾಯದ ಒಗ್ಗಟ್ಟು ಹಾಗೂ ಸ್ನೇಹಭಾವವನ್ನು ಬಲಪಡಿಸುವಲ್ಲಿ ಇಂತಹ ಟೂರ್ನಿಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ಉಪಸ್ಥಿತರು ಅಭಿಪ್ರಾಯಪಟ್ಟರು.

LEAVE A REPLY

Please enter your comment!
Please enter your name here

10 − two =

Latest news

Sevenplay Casino – Quick‑Hit Slots and Live Games for Short‑Burst Thrills

Introduction: The Pulse of Quick Wins at SevenplaySevenplay Casino has carved a niche for players who crave instant gratification....

Vodka онлайн казино – обзор

Vodka онлайн казино - обзор ...

Пин Ап казино – Официальный сайт Pin Up Casino вход на зеркало

Пин Ап казино - Официальный сайт Pin Up Casino вход на зеркало ...

OnLuck Casino: Quick Play for Instant Thrills and Fast Wins

When you’re in the mood for a burst of excitement without the long‑haul grind, OnLuck Casino offers a playground...
- Advertisement -spot_imgspot_img

MonsterWin: Bei Schnell‑Erfolgen und Blitz‑Slots zuschlagen

Wenn du nach einem Nervenkitzel suchst, der in Sekunden spürbar ist, liefert MonsterWin ein Arsenal an Spielen, die die...

Dynabet: Quick‑Hit Slots and Lightning‑Fast Roulette for Short‑Session Thrills

When your phone buzzes and you’re on a quick coffee break, you want a casino that responds as fast...

Must read

- Advertisement -spot_imgspot_img

You might also likeRELATED
Recommended to you