*ಹುಟ್ಟು ಹಬ್ಬದ ದಿನದಂದು ಅಭಿಮಾನಿಗಳಿಗೆ ಶತಕ ಉಡುಗೊರೆ ಕೊಟ್ಟ ಸಾಮ್ರಾಟ*
35ನೇ ಹುಟ್ಟುಹಬ್ಬ ಹಾಗೂ 49ನೇ ಏಕದಿನ ಶತಕ ಸಿಡಿಸಿರುವ ಕೊಹ್ಲಿ, ಸಚಿನ್ ದಾಖಲೆ ಸರಿಗಟ್ಟುವ ಮೂಲಕ ಇತಿಹಾಸ ಸೃಷ್ಟಿಸಿದರು.
*MILESTONE ALERT! ಸಚಿನ್ ದಾಖಲೆ ಸಮಗಟ್ಟಿದ ಕೊಹ್ಲಿ!*
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟ್ ತುಂಬಾ ಜೋರಾಗಿ ಮಾತನಾಡುತ್ತಿದೆ. ಈ ವಿಶ್ವಕಪ್‌ನಲ್ಲಿ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಬೌಲರ್‌ಗಳನ್ನು ಸದೆಬಡಿದಿದ್ದರು. ತಮ್ಮ ಹುಟ್ಟುಹಬ್ಬದ ದಿನದಂದೇ ದಕ್ಷಿಣ ಆಫ್ರಿಕಾದ ಬೌಲರ್‌ಗಳನ್ನು ಸಿಡಿಸಿ ಶತಕ ಸಿಡಿಸುವ ಮೂಲಕ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದರು. ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಶತಕ ಗಳಿಸಲು ಒಟ್ಟು 277 ಇನ್ನಿಂಗ್ಸ್ ತೆಗೆದುಕೊಂಡರು. ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 452 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ವಿಶೇಷವೆಂದರೆ ಕೊಹ್ಲಿಯ ರೋಲ್ ಮಾಡೆಲ್ ಸಚಿನ್. ಕೊಹ್ಲಿಯ ಮೊದಲ ಶತಕ ಕೂಡ ಈಡನ್ ಗಾರ್ಡನ್ಸ್‌ನಲ್ಲಿ. ಇನ್ ಫ್ಯಾಕ್ಟ್ ಇದು ಮೋಸ್ಟ್ ಮೆಮೊರೇಬಲ್ ಡೇ ಬರ್ತ್ ಡೇ ಬಾಯ್ ನಿಂದ.
ವಿರಾಟ್ ಕೊಹ್ಲಿಗೆ ಈ ಶತಕ ಕೂಡ ವಿಶೇಷವಾಗಿದೆ. ಏಕೆಂದರೆ ಇದು ಅವರ ಹುಟ್ಟುಹಬ್ಬದಂದು ಮತ್ತು ಅವರು ವಿಶೇಷ ಪಟ್ಟಿಗೆ ಸೇರಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಅವರಂತಹ ಆಟಗಾರರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಶತಕಗಳನ್ನು ಗಳಿಸಿದ್ದರು.
ಇದಕ್ಕೂ ಮುನ್ನ ಧರ್ಮಶಾಲಾದಲ್ಲಿ ನಡೆದ ಕಠಿಣ ಪಂದ್ಯದ ವೇಳೆ ಕೊಹ್ಲಿ 95 ರನ್ ಗಳಿಸಿ ಇನ್ನಿಂಗ್ಸ್ ಮಾಡಿದ್ದರು. ಅವರು ತಮ್ಮ ಶತಕವನ್ನು ಪೂರ್ಣಗೊಳಿಸುವುದನ್ನು ತಪ್ಪಿಸಿಕೊಂಡರು ಆದರೆ ಅವರ ಇನ್ನಿಂಗ್ಸ್ ಪ್ರಭಾವ ಬೀರಿತು. ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿತ್ತು. ಕೊಹ್ಲಿ ತಂಡಕ್ಕೆ ಟ್ರಬಲ್ ಶೂಟರ್ ಆದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕೊಹ್ಲಿಗೆ ಶತಕ ಬಾರಿಸುವ ಮತ್ತೊಂದು ಅವಕಾಶ ಸಿಕ್ಕಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಸಚಿನ್ ಅವರ ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟುವ ಅವಕಾಶ ಕೊಹ್ಲಿಗೆ ಸಿಕ್ಕಿತ್ತು. ಆದರೆ, ಇದು ನಡೆಯದೆ 88 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಔಟಾದರು. ಆ ವೇಳೆ ಸಚಿನ್ ಕೂಡ ವಾಂಖೆಡೆಯಲ್ಲಿದ್ದರು.
ODI ಕ್ರಿಕೆಟ್‌ನಲ್ಲಿ ಗರಿಷ್ಠ ಶತಕಗಳ ವಿಷಯದಲ್ಲಿ ಭಾರತೀಯರು ಪ್ರಾಬಲ್ಯ ಹೊಂದಿದ್ದಾರೆ. ಸಚಿನ್ ಮತ್ತು ಕೊಹ್ಲಿ ತಲಾ 49 ಶತಕಗಳನ್ನು ಹೊಂದಿದ್ದು, ಅವರ ನಂತರ ರೋಹಿತ್ ಶರ್ಮಾ ಹೆಸರು ಬಂದಿದೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 31 ಶತಕಗಳನ್ನು ಬಾರಿಸಿದ್ದಾರೆ. ವೈಟ್ ಬಾಲ್ ಕ್ರಿಕೆಟ್ ನಲ್ಲಿ ಭಾರತ ತಂಡ ಪ್ರಾಬಲ್ಯ ಮೆರೆದಿದೆ.
ಕ್ರಿಕೆಟ್ ಜಗತ್ತಿನ ಸಾಮ್ರಾಟ, ಚಕ್ರವರ್ತಿ,ಕ್ರಿಕೆಟ್ ಸಾಮ್ರಾಜ್ಯದ ಮಹಾರಾಜನ ಐಕಾನಿಕ್ ಇನ್ನಿಂಗ್ಸ್ ನಿಂದಾಗಿ ದ.ಆಫ್ರಿಕಾಗೆ ಚಾಲೆಂಜಿಂಗ್ ಟಾರ್ಗೆಟ್ ಭಾರತ ನೀಡಿತು.
ಸುರೇಶ್ ಭಟ್, ಮೂಲ್ಕಿ
ಕಂಟೆಂಟ್ ಪ್ರೊಡ್ಯೂಸರ್
ಸ್ಪೋರ್ಟ್ಸ್ ಕನ್ನಡ. ಕಾಮ್