ನಿರ್ಣಾಯಕ ಪಂದ್ಯದಲ್ಲಿ ನ್ಯೂಜಿಲಂಡ್ vs ಪಾಕಿಸ್ತಾನ ಮುಖಾಮುಖಿಯಾಯಿತು. ಚಿನ್ನಸ್ವಾಮಿಯಲ್ಲಿ ಪಾಕ್ ಬೌಲರ್‌ಗಳನ್ನು ಚೆಂಡಾಡಿದ ಕಿವೀಸ್ ಬಾಬರ್ ಪಡೆಗೆ ಗೆಲ್ಲಲು ಬೃಹತ್ ಗುರಿ ನೀಡಿತ್ತು.
ಚೇಸಿಂಗ್ ನಲ್ಲಿ ಫಖರ್ ಜಮಾನ್ ಸ್ಪೋಟಕ ಶತಕ ಸಿಡಿಸಿದರು. ಡಿಎಲ್ ನಿಯಮದಲ್ಲಿ ನ್ಯೂಜಿಲೆಂಡ್‌ಗೆ ಆಘಾತಕಾರಿ ಸೋಲುಣಿಸಿದ ಪಾಕ್ ಮಳೆಯ ಸಹಾಯದಿಂದ ಅದೃಷ್ಟದ ಗೆಲುವು ಪಡೆಯಿತು. ಬಾರಿಶ್ ಬಿ ಚಾಹ್ತಿ ಹೈ ಕೆ ಪಾಕಿಸ್ತಾನ್ ಜೀತ್ ಜಾಯೆ.ಇದು ನ್ಯೂಜಿಲೆಂಡ್‌ನ 401 ರನ್‌ಗಳ ಮುಖಾಮುಖಿಯಲ್ಲಿ ಸೊರಗದ ಪಾಕಿಸ್ತಾನಕ್ಕೆ ದೊಡ್ಡ ಕ್ರೆಡಿಟ್.
*ಕಿವೀಸ್‌ಗೆ ಸೋಲುಣಿಸಿದ ಪಾಕ್*
ಫಖರ್ ಜಮಾನ್ ಇವರ ಅದ್ಭುತ ಇನಿಂಗ್ಸ್ ನಿಂದಾಗಿ ಪಾಕಿಸ್ತಾನಕ್ಕೆ ಭರ್ಜರಿ ಜಯ ಸಿಕ್ಕಿದೆ. ಪಾಕಿಸ್ತಾನ ತಂಡವು ಮಹತ್ವದ ಪಂದ್ಯವನ್ನು ಗೆದ್ದು ವಿಶ್ವಕಪ್‌ನಲ್ಲಿ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಜಿಟಿಜಿಟಿ ಮಳೆ ಜೊತೆ ಜೊತೆಗೆ ಸಿಕ್ಸರ್‌ಗಳ ಮಳೆಯೊಂದಿಗೆ ಫಖರ್ ಜಮಾನ್
ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಇಂದು ಪಾಕಿಸ್ತಾನ ಗೆಲ್ಲಲು ಏಕೈಕ ಕಾರಣವಾಗಿತ್ತು. ಶಹಬ್ಬಾಶ್!! ಫಖರ್ ಜಮಾನ್ ಏಕಾಂಗಿಯಾಗಿ ಭಾರತ ವಿರುದ್ಧ ಪಾಕಿಸ್ತಾನದ ಸೆಮಿಫೈನಲ್ ಅನ್ನು ಜೀವಂತವಾಗಿರಿಸಿದ್ದಾರೆ.
ಪಾಕಿಸ್ತಾನವು DLS ವಿಧಾನದಲ್ಲಿ 21 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿದೆ.ಫಖರ್ ಜಮಾನ್ ಪಾಕಿಸ್ತಾನವನ್ನು ಗೆಲ್ಲಲೇಬೇಕಾದ ಪಂದ್ಯದಲ್ಲಿ ಪುನರುಜ್ಜೀವನಗೊಳಿಸಿದ್ದಾರೆ.
ಅಂತಿಮವಾಗಿ, ಬಾಬರ್ ಆಜಮ್ ಮುಖದಲ್ಲಿ ನಗು ಮರಳಿ ಬರುತ್ತಿದೆ.
ಈ ಅಭೂತಪೂರ್ವ ಗೆಲುವು ಪಾಕಿಸ್ತಾನಕ್ಕೆ ಇತಿಹಾಸದಲ್ಲಿ ಎರಡನೇ ವಿಶ್ವಕಪ್ ಪ್ರಶಸ್ತಿಯನ್ನು ಗುರಿಯಾಗಿಸಲು ಮತ್ತೊಂದು ಅವಕಾಶವನ್ನು ನೀಡುವ ಸಾಧ್ಯತೆಗಳಿವೆ.
ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಬರಹಗಾರರು
ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್