7.9 C
London
Monday, October 14, 2024
Homeಕ್ರಿಕೆಟ್ವಿನಯ್ ಕುಮಾರ್’ಗೆ ಕೋಚ್ ಪಟ್ಟ ಕಟ್ಟಿ.. ಕರ್ನಾಟಕ ಯಾಕೆ ರಣಜಿ ಟ್ರೋಫಿ ಗೆಲ್ಲುವುದಿಲ್ಲ ನೋಡೇ ಬಿಡೋಣ..!

ವಿನಯ್ ಕುಮಾರ್’ಗೆ ಕೋಚ್ ಪಟ್ಟ ಕಟ್ಟಿ.. ಕರ್ನಾಟಕ ಯಾಕೆ ರಣಜಿ ಟ್ರೋಫಿ ಗೆಲ್ಲುವುದಿಲ್ಲ ನೋಡೇ ಬಿಡೋಣ..!

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕರ್ನಾಟಕ ತಂಡಕ್ಕೆ ಬೇಕಿರುವುದು service ಮನೋಭಾವದ ಕೋಚ್ ಹೊರತು, survival ಮನಸ್ಥಿತಿಯ ಕೋಚ್ ಅಲ್ಲ.
ಅಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣಕ್ಕೆ 50 ವರ್ಷ ತುಂಬಿದ ಹೊತ್ತಲ್ಲೇ ಮುಂಬೈ ತಂಡ ವಿದರ್ಭ ವಿರುದ್ಧ ವಾಂಖೆಡೆಯಲ್ಲಿ ರಣಜಿ ಫೈನಲ್ ಆಡುತ್ತಿದೆ. ವಿದರ್ಭ ಬದಲಾಗಿ ಆ ಜಾಗದಲ್ಲಿ ಕರ್ನಾಟಕ ತಂಡ ಇರಬೇಕಿತ್ತು. ಫೈನಲ್’ನಲ್ಲಿ ಮುಂಬೈಯನ್ನು ಬಗ್ಗು ಬಡಿಯಲು ಕರ್ನಾಟಕವೇ ಬೇಕಿತ್ತು.
ಆದರೆ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಮ್ಮ ಕರ್ನಾಟಕ ತಂಡದ ಮೆದುಳಿಲ್ಲದ think tank ಮಾಡಿದ ಎಡವಟ್ಟು, ಈ ಬಾರಿ ರಣಜಿ ಟ್ರೋಫಿ ಗೆಲ್ಲುವ ಕನಸಿಗೆ ಕೊಳ್ಳಿ ಇಟ್ಟು ಬಿಟ್ಟಿತ್ತು.
ನಾಗ್ಪುರದ ಆ ಬ್ಯಾಟಿಂಗ್ ಟ್ರ್ಯಾಕ್’ನಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ. ಆಗಿದ್ದು ಆಗಿ ಹೋಗಿದೆ. ಈಗ ಆಗಬೇಕಿರುವುದು big change.
ಕರ್ನಾಟಕ ತಂಡಕ್ಕೆ ಹೊಸ ಕೋಚ್ ನೇಮಕ ಮಾಡಲು ಇದು ಸಕಾಲ. ಹಾಲಿ ಕೋಚ್ ಪಿ.ವಿ ಶಶಿಕಾಂತ್’ಗೆ thank you, good bye ಹೇಳಿ ತಂಡಕ್ಕೊಬ್ಬ ಹೊಸ ಆಲೋಚನೆಗಳ ಉತ್ಸಾಹಿ ತರಬೇತುದಾರನನ್ನು ಕರೆ ತರಬೇಕಿದೆ. ಹಾಗಾದರೆ ಕರ್ನಾಟಕ ತಂಡದ ಕೋಚ್ ಆಗಬಲ್ಲ ಸಮರ್ಥ ಯಾರು..? ಉತ್ತರಕ್ಕಾಗಿ ತುಂಬಾ ದೂರ ಹೋಗಬೇಕಿಲ್ಲ. ಯಾಕಂದ್ರೆ, ಆ ಸಮರ್ಥ ನಮ್ಮಲ್ಲೇ ಇದ್ದಾನೆ, ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್.
ವಿನಯ್ ಕುಮಾರ್’ಗೆ ಕರ್ನಾಟಕ ತಂಡದ ಕೋಚ್ ಪಟ್ಟ ಕಟ್ಟಿ.., ಕರ್ನಾಟಕ ಯಾಕೆ ರಣಜಿ ಟ್ರೋಫಿ ಗೆಲ್ಲುವುದಿಲ್ಲ ನೋಡೇ ಬಿಡೋಣ..! 14 ವರ್ಷಗಳ ಕಾಲ ರಣಜಿ ಟ್ರೋಫಿ ಗೆಲ್ಲದೆ ಬರಡು ಮರುಭೂಮಿಯಾಗಿದ್ದ ಕರ್ನಾಟಕ ಕ್ರಿಕೆಟ್’ಗೆ ರಣಜಿ ಟ್ರೋಫಿ ಗೆಲ್ಲಿಸಿಕೊಟ್ಟದ್ದು ಇದೇ ವಿನಯ್ ಕುಮಾರ್. 2014ರಲ್ಲಿ ಹೈದರಾಬಾದ್’ನಲ್ಲಿ ನಡೆದ ರಣಜಿ ಫೈನಲ್ ಪಂದ್ಯ ಗೆದ್ದು 14 ವರ್ಷಗಳ ನಂತರ ರಣಜಿ ಟ್ರೋಫಿ ಗೆದ್ದಿದ್ದ ವಿನಯ್ ಕುಮಾರ್ ನೇತೃತ್ವದ ತಂಡ, ಎರಡೇ ವರ್ಷಗಳಲ್ಲಿ 6 ಟ್ರೋಫಿಗಳನ್ನು ಗೆದ್ದು ಚರಿತ್ರೆ ಸೃಷ್ಠಿಸಿತ್ತು. ಆಗ ಕರ್ನಾಟಕ ತಂಡದ ಹೆಡ್ ಕೋಚ್ ಆಗಿದ್ದವರು ಆಗಿನ ಕಾಲಕ್ಕೆ ಹೊಸ ತಲೆಮಾರಿನ ಜೆ.ಅರುಣ್ ಕುಮಾರ್. ಈಗ ಆ ಜವಾಬ್ದಾರಿಯನ್ನು ವಿನಯ್ ಕುಮಾರ್ ಹೆಗಲಿಗೆ ಹಾಕಿದರೆ, ಅದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.
ಕ್ರಿಕೆಟ್ ಬದಲಾಗಿದೆ. ಹಳೇ ಓಬಿರಾಯನ ಕಾಲದ tactics, ಆ ತಂತ್ರಗಾರಿಕೆಗಳು, ಕಾರ್ಯವೈಖರಿ ಈಗ ವರ್ಕ್ ಆಗುವುದಿಲ್ಲ. ಹೀಗಾಗಿ ಕೋಚ್ ಸ್ಥಾನಕ್ಕೆ ಬೇಕಿರುವುದು ಹೊಸತನಕ್ಕೆ ಒಗ್ಗಿಕೊಳ್ಳುವವರು.
ವಿನಯ್ ಕುಮಾರ್ ಅದ್ಭುತ ಆಟಗಾರ, ಅದ್ಭುತ ನಾಯಕ. ಒಳ್ಳೆಯ ಕೋಚ್ ಆಗಬಲ್ಲ ಎಲ್ಲಾ ಅರ್ಹತೆಗಳು ವಿನಯ್ ಬಳಿ ಇವೆ. ಮುಂಬೈ ಇಂಡಿಯನ್ಸ್ ತಂಡದ scout ಟೀಮ್’ನಲ್ಲಿರುವ ವಿನಯ್, MI ಎಮಿರೇಟ್ಸ್ ತಂಡದ ಬೌಲಿಂಗ್ ಕೋಚ್ ಕೂಡ ಹೌದು. ಹೀಗಾಗಿ ಕೋಚಿಂಗ್’ನಲ್ಲಿ ಅನನುಭವಿ ಎನ್ನಲಾಗದು. ಇನ್ನು ದೊಡ್ಡ ದೊಡ್ಡ ಟ್ರೋಫಿಗಳನ್ನು ಗೆದ್ದ ಅನುಭವದಲ್ಲಿ ವಿನಯ್ ಕುಮಾರ್ ಅವರನ್ನು ಮೀರಿಸುವ ಮತ್ತೊಬ್ಬ ಕ್ರಿಕೆಟಿಗ ಕರ್ನಾಟಕದಲ್ಲಿಲ್ಲ.
ವಿನಯ್ ಕುಮಾರ್, ಆಟಗಾರರಿಂದ ಉತ್ತಮ ಆಟ ತೆಗೆಸುವ ಚಾಣಾಕ್ಷ. ಕೆ.ಎಲ್ ರಾಹುಲ್, ಕರುಣ್ ನಾಯರ್, ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಶ್ರೇಯಸ್ ಗೋಪಾಲ್’ರಂಥಾ ಪ್ರತಿಭಾವಂತರು ರಣಜಿ ಕ್ರಿಕೆಟ್’ಗೆ ಕಾಲಿಟ್ಟದ್ದು ವಿನಯ್ ನಾಯಕತ್ವದಲ್ಲೇ. ಆಟಗಾರನಾಗಿ, ನಾಯಕನಾಗಿ ಚಾರಿತ್ರಿಕ ಸಾಧನೆ ಮಾಡಿರುವ ವಿನಯ್ ಕುಮಾರ್, ಕೋಚ್ ಆಗಿಯೂ ಯಶಸ್ಸು ಕಾಣಬಲ್ಲ.
#RanjiTrophy #RanjiKarnataka #rvinaykumar #KarnatakaCricket

Latest stories

LEAVE A REPLY

Please enter your comment!
Please enter your name here

four × 2 =