ಕ್ರಿಕೆಟ್ವೆಂಕಟರಮಣ ಟ್ರೋಫಿ-2020 ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ

ವೆಂಕಟರಮಣ ಟ್ರೋಫಿ-2020 ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ

-

- Advertisment -spot_img

“ವೆಂಕಟರಮಣ ಟ್ರೋಫಿ-2020
ಸ್ವರ್ಣ ಖಚಿತ ಟ್ರೋಫಿ-ಶಿಸ್ತುಬದ್ಧ ಪಂದ್ಯಾವಳಿ” ಜನವರಿ 3,4 ಹಾಗೂ 5 ರಂದು…

ಮೂರು ದಶಕಗಳಿಂದ ಸತತ ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಹಾಗೂ ಸಾಂಸ್ಕೃತಿಕ
ಕಾರ್ಯಗಳಲ್ಲಿ ಮಾತ್ರವಲ್ಲದೇ,ಆದರ್ಶ ನಾಯಕ ಪ್ರವೀಣ್‌ ಪಿತ್ರೋಡಿ ನಾಯಕತ್ವದಲ್ಲಿ ಕ್ರೀಡಾ ಲೋಕದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ತೊಡಗಿಸಿಕೊಂಡು
15 ಬಾರಿ ರಾಜ್ಯದ ಶಿಸ್ತಿನ ತಂಡ ಪ್ರಶಸ್ತಿ ಪಡೆದು ಇತಿಹಾಸ ಬರೆದ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್” ಪಿತ್ರೋಡಿ.

ಟೆನ್ನಿಸ್ ಕ್ರಿಕೆಟ್ ವಿನೂತನ ಪ್ರಯೋಗಗಳನ್ನು ನಡೆಸಿ,ಯಶಸ್ಸು ಕಂಡ ವೆಂಕಟರಮಣ ಸಂಸ್ಥೆ
ಈ ಬಾರಿ ರಾಜ್ಯ ಮಟ್ಟವಲ್ಲದೇ,ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಸಮಾನ‌ ಅವಕಾಶ ಕಲ್ಪಿಸಿದ್ದು, ಜನವರಿ 3,4 ಹಾಗೂ 5 ಜನವರಿಯಂದು ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ
ಸತತ ಮೂರು ದಿನಗಳ ಕಾಲ ಹಗಲಿನಲ್ಲಿ ರಾಜ್ಯ ಮಟ್ಟದ “ವೆಂಕಟರಮಣ ಟ್ರೋಫಿ-2020” ಪಂದ್ಯಾವಳಿಯನ್ನು ಆಯೋಜಿಸಿದೆ.

ಈಗಾಗಲೇ 24 ತಂಡಗಳು ಪ್ರವೇಶಾತಿ ನೋಂದಾಯಿಸಿಕೊಂಡಿದ್ದು,
3 ಶುಕ್ರವಾರದಂದು ಗ್ರಾಮೀಣ ತಂಡಗಳು ಸ್ಪರ್ಧಿಸಿದರೆ,4 ರಂದು ಜಿಲ್ಲಾ ಮಟ್ಟದ ತಂಡಗಳು ಹಾಗೂ 5 ರವಿವಾರದಂದು ರಾಜ್ಯದ ಪ್ರತಿಷ್ಟಿತ ತಂಡಗಳು ಸೆಣಸಾಡಲಿದೆ.

ಸ್ವರ್ಣ ಖಚಿತ ಮಿನುಗುವ ಟ್ರೋಫಿಯೊಂದಿಗೆ ನಗದು ಬಹುಮಾನಗಳು.

ಪ್ರಥಮ‌ ಸ್ಥಾನಿ ತಂಡಕ್ಕೆ 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ‌ ತಂಡಕ್ಕೆ 50 ಸಾವಿರ ನಗದು ಸಹಿತ,2017 ರ ಪಂದ್ಯಾವಳಿಯಲ್ಲಿ ಬೆಳ್ಳಿಯ ಟ್ರೋಫಿ ನೋಡಿ ದಾಖಲೆ ಬರೆದಿದ್ದ ಸಂಸ್ಥೆ,ಈ ಬಾರಿ
ಟೆನ್ನಿಸ್ ಬಾಲ್ ಇತಿಹಾಸದಲ್ಲಿಯೇ
ಇದೇ ಮೊದಲ ಬಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ
ಸ್ವರ್ಣ ಖಚಿತ ಮಿನುಗುವ ಟ್ರೋಫಿಯನ್ನು ನೀಡಿ ವಿನೂತನ ಮೈಲಿಗಲ್ಲನ್ನು ಸ್ಥಾಪಿಸಲಿದೆ.
ಪಂದ್ಯಾವಳಿಯ ನೇರ ಪ್ರಸಾರವನ್ನು
ವೆಂಕಟರಮಣ ಸಂಸ್ಥೆಯ ಸದಸ್ಯರೇ ಖುದ್ದಾಗಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಯೂ ಟ್ಯೂಬ್
ಚಾನೆಲ್ ನಲ್ಲಿ ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಿದ್ದಾರೆ.

ಶಿಸ್ತಿಗಾಗಿ ಕ್ರಿಕೆಟ್,ಸಮಾಜಕ್ಕಾಗಿ ತಂಡ

ಶಿಸ್ತಿಗಾಗಿ ಕ್ರಿಕೆಟ್, ಸಮಾಜಕ್ಕಾಗಿ ತಂಡ ಧ್ಯೇಯೋದ್ಧೇಶದಡಿ ಪಂದ್ಯಾವಳಿ ನಡೆಯಲಿದ್ದು,ವೆಂಕಟರಮಣ ಸಂಸ್ಥೆ
ಮಧ್ಯಮುಕ್ತ ಕ್ರಿಕೆಟ್ ಹಾಗೂ ಸಮಯಕ್ಕೆ ಹೆಚ್ಚಿನ‌ ಆದ್ಯತೆ ನೀಡುತ್ತಾ ಬಂದಿದ್ದು,
ಪ್ರತಿ ಪಂದ್ಯಕ್ಕೂ
ಡೋಪಿಂಗ್ ಟೆಸ್ಟ್ ನಡೆಸಲಿದ್ದು, ಯಾವುದೇ ಆಟಗಾರ ಮಧ್ಯ,ಮಾದಕ ದ್ರವ್ಯ ಸೇವಿಸಿದ್ದು ಕಂಡು ಬಂದಲ್ಲಿ ಟೂರ್ನಿಯಿಂದ ಹೊರಗಿರಿಸಲಾಗುತ್ತದೆ.ಭಾಗವಹಿಸುವ ತಂಡಗಳು ಪಂದ್ಯ ಪ್ರಾರಭವಾಗುವ 15 ನಿಮಿಷ ಮುಂಚಿತವಾಗಿ ಉಪಸ್ಥಿತಿ ತೋರ್ಪಡಿಸಬೇಕಾಗಿದೆ.
ಸಮಾರೋಪ ಸಮಾರಂಭದಲ್ಲಿ ಮಾದಕ ದ್ರವ್ಯ ನಿಷೇಧ ದ ಬಗ್ಗೆ ವಿಶೇಷ ಕಾರ್ಯಕ್ರಮ,ವಿವಿಧ ಕ್ಷೇತ್ರಗಳ‌ ಸಾಧಕರಿಗೆ ಸನ್ಮಾನ,ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ಸಂಸ್ಥೆಯ ರಕ್ತದಾನಿ ಸದಸ್ಯರುಗಳಿಗೆ ಹಾಗೂ ಉದ್ಯಾವರ ಕ್ರಿಕೆಟ್ ಪ್ರತಿಷ್ಟೆಯನ್ನು ಉಳಿಸಿದ ಹೆಮ್ಮೆಯ ತಂಡಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.ಉಡುಪಿ ಟೈಮ್ಸ್ ಹಾಗೂ ಸ್ಪೋರ್ಟ್ಸ್‌ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆಯೆಂದು
ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್.ಕೆ.ಆಚಾರ್ಯ ಕೋಟ…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

four × 1 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you