Uncategorizedಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ವಲ್ಲರೀ ಪೆಜತ್ತಾಯ ರಾವ್ ಫಿಸಿಯೊ ಆಗಿ...

ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ವಲ್ಲರೀ ಪೆಜತ್ತಾಯ ರಾವ್ ಫಿಸಿಯೊ ಆಗಿ ಆಯ್ಕೆ.

-

- Advertisment -spot_img

ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ವಲ್ಲರೀ ಪೆಜತ್ತಾಯ ರಾವ್ ಫಿಸಿಯೊ ಆಗಿ ಆಯ್ಕೆ.

ಇಪ್ಪತ್ತರ ಒಳಗಿನ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡವು ಏಷ್ಯಾ ಕಪ್ ಪೂರ್ವ ಸಿದ್ಧತೆಗಾಗಿ ಬೆಂಗಳೂರಿನ ತರಬೇತಿ ಶಿಬಿರದಿಂದ ಉಜ್ಬೇಕಿಸ್ತಾನಕ್ಜೆ ಪಯಣಿಸಿದ್ದು ಉಡುಪಿ ಮೂಲದ ಶ್ರೀಮತಿ ವಲ್ಲರೀ ಪೆಜತ್ತಾಯ ರಾವ್ ಫಿಸಿಯೊ ಆಗಿ ಈ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮುಂದಿನ ವರ್ಷ 2026ರಲ್ಲಿ ಥೈಲ್ಯಾಂಡಿನಲ್ಲಿ ಜರುಗಲಿರುವ ಏಷಿಯಾ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅರ್ಹತೆ ಗಳಿಸಲು ಭಾರತೀಯ ಸ್ತ್ರೀಯರ ತಂಡವು ಆಗಸ್ಟ್ ತಿಂಗಳಲ್ಲಿ ಮ್ಯಾನ್ಮಾರನಲ್ಲಿ ನಡೆಯಲಿರುವ ಅರ್ಹತಾ ಪಂದ್ಯದಲ್ಲಿ ಉತ್ಕೃಷ್ಟ ಪ್ರದರ್ಶನವನ್ನು ನೀಡಬೇಕಾದ ಅನಿವಾರ್ಯತೆ ಇದೆ.ಈ ಪ್ರಯುಕ್ತ ತಂಡವು ಹೆಚ್ಚಿನ ಗುಣಮಟ್ಟದ ತರಬೇತಿ, ದೈಹಿಕಕ್ಷಮತೆ,ಕೌಶಲ್ಯಹಾಗೂ ತಂತ್ರಗಾರಿಕೆ ಒಳಗೊಂಡಂತೆ ಸರ್ವಸಿದ್ಧತೆಗಾಗಿ ಉಜ್ಬೇಕಿಸ್ತಾನದ ತಾಷ್ಕೆಂಟನಲ್ಲಿ ಈಗಾಗಲೇ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

ತರಬೇತಿಯ ಜೊತೆಗೆ ಉಜ್ಬೇಕಿಸ್ತಾನದ ವಿರುದ್ಧ ಆಯೋಜನೆಗೊಂಡ ಎರಡು ಸೌಹಾರ್ದ ಪಂದ್ಯಾಟದಲ್ಲಿ ಭಾರತದ ಸ್ತ್ರೀಯರ ಫುಟ್ಬಾಲ್ ತಂಡವು ಮೊದಲ ಪಂದ್ಯದಲ್ಲಿ 1-1 ಅಂತರದಲ್ಲಿ ಸಮಬಲ ಸಾಧಿಸಿತು.ಎರಡನೇ ಪಂದ್ಯದಲ್ಲಿ ಬಲಿಷ್ಠ ಉಜ್ಬೇಕಿಸ್ತಾನದ ವಿರುದ್ಧ 4-1ಅಂತರದಲ್ಲಿ ರೋಚಕ ವಿಜಯವನ್ನು ದಾಖಲಿಸಿತು.

ಆಗಸ್ಟ್ ತಿಂಗಳಲ್ಲಿ 20ರ ಕೆಳಹರೆಯದ ಭಾರತೀಯ ಸ್ತ್ರೀಯರ ತಂಡವು ಇಂಡೋನೇಷಿಯಾ,ತುರ್ಕಮೆನಿಸ್ತಾನ್ ಹಾಗೂ ಮ್ಯಾನ್ಮಾರ್ ಜೊತೆ ಅಧಿಕೃತ ಪಂದ್ಯಗಳನ್ನು ಆಡಲಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ತನ್ನ ವರದಿಯಲ್ಲಿ.ಪ್ರಕಟಿಸಿದೆ.

ಒಟ್ಟು 24 ಸದಸ್ಯರನ್ನು ಹೊಂದಿರುವ 20ರ ಒಳಗಿನ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡವು ಅತ್ಯಂತ ಪ್ರತಿಭಾವಂತ ಆಟಗಾರನ್ನು ಹೊಂದಿದ್ದು ತಂಡಕ್ಕೆ ವಿಶೇಷ ಶಕ್ತಿಯಾಗಿ ಜಾಗತಿಕಮಟ್ಟದಲ್ಲಿ ಫುಟ್ಬಾಲ್ ಆಟದಲ್ಲಿ ಭಾರಿ ಪ್ರಸಿದ್ಧಿಯನ್ನು ಹೊಂದಿರುವ ಸ್ವೀಡನಿನ ಜೋಕೀಂ ಅಲೆಕ್ಸಾಂಡರ್ಸನ್ ರವರು ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದ್ದಾರೆ. ಅಂತೆಯೇ ಉಡುಪಿ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀವಾದಿರಾಜ ಹಾಗೂ ಸಹನಾ ಪೆಜತ್ತಾಯರ ಸುಪುತ್ರಿ ಮತ್ತು ಡಾ!!ವಿಶಾಕ್ ರಾವ್ ಪತ್ನಿ ಶ್ರೀಮತಿ ವಲ್ಲರಿ ಪೆಜತ್ತಾಯ ರಾವ್ ಈ ಫುಟ್ಬಾಲ್ ತಂಡದ ದೈಹಿಕಕ್ಷಮತಾ ತಜ್ಞರಾಗಿ (ಫಿಸಿಯೊ)ತಂಡದ ಜೊತೆಗಿದ್ದಾರೆ ಎನ್ನುವುದು ಕರಾವಳಿಯ ಕನ್ನಡಿಗರಿಗೆ ಅತ್ಯಂತ ಪ್ರತಿಷ್ಠೆ ಹಾಗೂ ಹೆಮ್ಮೆಯ ವಿಚಾರ.

20ರ ಕೆಳ ಹರೆಯದ ಭಾರತೀಯ ಸ್ತ್ರೀಯರ ಫುಟ್ಬಾಲ್ ತಂಡಕ್ಕೆ ಹೃತ್ಪೂರ್ವಕವಾಗಿ ಯಶಸ್ಸನ್ನು ಹಾರೈಸೋಣ.

LEAVE A REPLY

Please enter your comment!
Please enter your name here

5 × 4 =

Latest news

BildBet Casino: Fast‑Track Slots für schnelle Gewinne

Wenn Sie unterwegs sind—zwischen Meetings, beim Zugfahren oder einfach während einer Mittagspause—bietet BildBet eine Möglichkeit, das Casino-Feeling zu erleben,...

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ

ಕರೂಣ್ ನಾಯರ್ ಗೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಸೀಸನ್-5ಕ್ಕೆ ಸಜ್ಜಾದ ಫ್ರಾಂಚೈಸಿ; ತಂಡದ ಜೆರ್ಸಿ, ಗೀತೆ ಹಾಗೂ ನಾಯಕತ್ವ...

ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ – ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ

  ಮಹಿಳಾ ಟಿ20 ವಿಶ್ವಕಪ್: ಪಾಕಿಸ್ತಾನವನ್ನು 64 ರನ್‌ಗಳಿಂದ ಸೋಲಿಸಿದ ಭಾರತ - ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಈ ಪಂದ್ಯದಲ್ಲಿ, ಭಾರತ...

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...
- Advertisement -spot_imgspot_img

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

Must read

- Advertisement -spot_imgspot_img

You might also likeRELATED
Recommended to you