ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ,ಗ್ರಾಮೀಣ ಪ್ರದೇಶದ ತಂಡಗಳಿಗೆ ಪ್ರಾಯೋಜಕತ್ವ,ಕಿಟ್ ಒದಗಿಸುವುದು,ಮೂಲಭೂತ ಸೌಕರ್ಯ ಕಲ್ಪಿಸುವುದು,ಜಿಲ್ಲೆಯ ತಂಡಗಳನ್ನು ಒಂದೇ ವೇದಿಕೆಯಡಿ ತಂದು ಟೂರ್ನಿಗಳನ್ನು ನಡೆಸಲು ನೆರವಾಗುವುದು,ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ಪಳಗಿದ ಯುವ ಪ್ರತಿಭೆಗಳಿಗೆ ಲೆದರ್ ಬಾಲ್ ಕ್ರಿಕೆಟ್ನಲ್ಲೂ ಅವಕಾಶ ಸಿಗುವ ಬಗ್ಗೆ ವಿವಿಧ ಕ್ಲಬ್ ಗಳ ಜೊತೆ ಸಂಪರ್ಕ ಕಲ್ಪಿಸುವುದು ಹೀಗೆ ಹತ್ತು ಹಲವಾರು ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೆ ಪುನರ್ಜೀವ ಕಲ್ಪಿಸಲಾಗಿದೆ.
ಇಂದು ಉಡುಪಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರನ್ನು ಉಡುಪಿ ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ಆಯೋಜಿಸಿ ಕ್ರೀಡೆಗೆ ತನ್ನದೇ ಆದ ಪ್ರೋತ್ಸಾಹ ನೀಡುತ್ತಿರುವ ಗೌತಮ್ ಶೆಟ್ಟಿಯವರು ಜಿಲ್ಲೆಯ ಪ್ರತಿಷ್ಠಿತ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಆಟಗಾರರಾಗಿ,ನಾಯಕರಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದವರು.ಈಗಲೂ ಕ್ರಿಕೆಟ್ ಮಾತ್ರವಲ್ಲದೇ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಚೆಸ್ ಸೇರಿದಂತೆ ಹಲವಾರು ಟೂರ್ನಿಗಳನ್ನು ಆಯೋಜಿಸಿರುತ್ತಾರೆ.ಜಿಲ್ಲೆಯಲ್ಲಿ ನಡೆಯುವ ಇತರ ಕ್ರೀಡಾಕೂಟಗಳಿಗೂ ತನ್ನಿಂದಾದ ನೆರವನ್ನು ನೀಡುತ್ತಿದ್ದಾರೆ.
ಅಸೋಸಿಯೇಷನ್ ನ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ.
ಗೌರವಾಧ್ಯಕ್ಷರು– ಶರತ್ ಶೆಟ್ಟಿ ಪಡುಬಿದ್ರಿ,ಶ್ರೀಪಾದ್ ಉಪಾಧ್ಯಾಯ, ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ದಯಾನಂದ ಬಂಗೇರ,ಉದಯ್ ಕಟಪಾಡಿ,ಗಿರೀಶ್ ಬೈಂದೂರು.
*ಅಧ್ಯಕ್ಷರು*-ಗೌತಮ್ ಶೆಟ್ಟಿ ಕುಂದಾಪುರ
*ಉಪಾಧ್ಯಕ್ಷರು*-ಉದಯ್ ಕಿನ್ನಿಮೂಲ್ಕಿ,ಅಮರ್ ನಾಥ್ ಭಟ್ ಉಡುಪಿ,ಜಗದೀಶ್ ಕಾಮತ್ ಕಟಪಾಡಿ,ಸಫ್ತಾರ್ ಶಿರ್ವ,ನಾರಾಯಣ ಶೆಟ್ಟಿ ಕುಂದಾಪುರ, ಪ್ರವೀಣ್ ಕುಮಾರ್ ಬೇಲೂರು
*ಕಾರ್ಯದರ್ಶಿ*-ಡಾ.ವಿನೋದ್ ನಾಯಕ್.
*ಜತೆ ಕಾರ್ಯದರ್ಶಿ*-ಚೇತನ್ ದೇವಾಡಿಗ ಉಡುಪಿ
*ಸಲಹಾ ಸಮಿತಿ*-ನಿತ್ಯಾನಂದ ಮುನ್ನ,ರಮೇಶ್ ಕುಂದರ್ ಕೋಟ,ರಮೇಶ್ ಭಟ್ ಪಾರಂಪಳ್ಳಿ,ಹರಿಪ್ರಸನ್ನ ಕುಂದಾಪುರ, ಅರುಣ್ ಮಧ್ಯಸ್ಥ ಪಾರಂಪಳ್ಳಿ,ಅರುಣ್ ಸವಿನಯ ಸಾಸ್ತಾನ,ಮುನ್ನ ರಾವ್ ಬ್ರಹ್ಮಾವರ,ಸಂಜಯ್ ಶಿವಪುರ,ಕೇಶವರಾಜ್ ಬ್ರಹ್ಮಾವರ,ಯೋಗೀಶ್ ಮಲ್ಪೆ,ದಿನೇಶ್ ಪೈ ಗಂಗೊಳ್ಳಿ,ಪುರುಷೋತ್ತಮ ಕೋಟೇಶ್ವರ
*ಖಜಾಂಚಿ*-ಪ್ರವೀಣ್ ಕುಮಾರ್ ಪಿತ್ರೋಡಿ
*ಟೂರ್ನಮೆಂಟ್ ಸಮಿತಿ*-ಯಾದವ್ ನಾಯಕ್,ರಮೇಶ್ ಶೇರಿಗಾರ್,ಶ್ರೀಧರ್ ಶೆಟ್ಟಿ, ನಾಗರಾಜ್ ಶೆಟ್ಟಿ, ಜಾನ್ ಪ್ರೇಮ್ ಕುಮಾರ್,ಮೋಹನ್ ಅಮ್ಮಣ್ಣ,ಸದಾನಂದ ಶಿರ್ವ,ಇಬ್ರಾಹಿ ಆತ್ರಾಡಿ.
*ನಿರ್ದೇಶಕರ ಮಂಡಳಿ*-ಸಚ್ಚೀಂದ್ರ ಶೆಟ್ಟಿ, ಮನೋಜ್ ನಾಯರ್,ಪ್ರದೀಪ್ ವಾಜ್,ಪ್ರೇಮೇಂದ್ರ ಶೆಟ್ಟಿ, ಸಂದೇಶ್ ಪರ್ಕಳ,ಸುಭಾಷ್ ಕಾಮತ್,ಅಜಿತ್ ಕೋಟ,ದಿನೇಶ್ ಬೈಂದೂರು,ಕೆ.ಪಿ.ಸತೀಶ್,ಸತೀಶ್ ಕೋಟ್ಯಾನ್,ನಿತಿನ್ ಮುಲ್ಕಿ,ಕಿರಣ್ ಶೆಟ್ಟಿ, ಬಾಲಕೃಷ್ಣ ಪರ್ಕಳ,ರಂಜಿತ್ ಶೆಟ್ಟಿ,ವಿಷ್ಣುಮೂರ್ತಿ, ಭಾಸ್ಕರ್ ಆಚಾರ್ಯ, ಉಮೇಶ್ ಬ್ರಹ್ಮಗಿರಿ,ಪ್ರವೀಣ್ ಕೊರೆಯಾ,ರಾಜೇಶ್ ಆಚಾರ್ಯ ಬೈಂದೂರು,ಕಿಶೋರ್ ಸನ್ನಿ ಉಡುಪಿ,ನಾರಾಯಣ ಬೈಂದೂರು,ಪ್ರಸನ್ನ ಆಚಾರ್.