75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೋಟೇಶ್ವರದಲ್ಲಿ 9 ನೇ ಬಾರಿಗೆ ನಡೆದ ಕೋಟೇಶ್ವರ ಪ್ರೀಮಿಯರ್ ಲೀಗ್-2021 ಪ್ರಶಸ್ತಿಯನ್ನು ನಾಗಬನ ಚಾಲೆಂಜರ್ಸ್ ತಂಡ ಜಯಿಸಿದೆ.ಫೈನಲ್ ನಲ್ಲಿ ಕೊಂಕಣ್ ಎಕ್ಸ್‌ಪ್ರೆಸ್ ತಂಡವನ್ನು ಸೋಲಿಸಿದ ನಾಗಬನ ಚಾಲೆಂಜರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಮಧುಕರ್,ಬೆಸ್ಟ್ ಬ್ಯಾಟ್ಸ್‌ಮನ್ ಶರತ್ ಉತ್ತಪ್ಪ,ಬೆಸ್ಟ್ ಬೌಲರ್
ಮಧುಕರ್,ಬೆಸ್ಟ್ ಫೀಲ್ಡರ್ ಪ್ರಸಾದ್ ಆಚಾರ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ವಿಘ್ನೇಶ್ ಭಟ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಯೂಸುಫ್,ಶ್ರೀಧರ್ ನಾಯಕ್,ಇಸ್ಮೈಲ್,ರಂಜನ್ ಉಡುಪ ಹಾಗೂ ಶ್ರೀಧರ ಮೊಗವೀರ ಭಾಗವಹಿಸಿದ್ದರು.