ಶಿವಮೊಗ್ಗ ಜಿಲ್ಲೆಯ ಗೋಪಾಳದ ಕೆ.ಹೆಚ್.ಬಿ ಕಾಲೋನಿಯ 80 ರ ದಶಕದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಅಕ್ಟೋಬರ್ 8,9 ಮತ್ತು 10 ರಂದು ಮೂರು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ “ಸಹನಾ ಟ್ರೋಫಿ-2021” ಆಯೋಜಿಸಿದ್ದಾರೆ.ಮೇ ಮೊದಲ ವಾರದಲ್ಲಿ ಹಮ್ಮಿಕೊಂಡಿದ್ದ ಈ ಪಂದ್ಯಾವಳಿ ಕೋವಿಡ್ ಕಾರಣದಿಂದಾಗಿ ಮುಂದೂಲ್ಪಟ್ಟಿತ್ತು.
ಶಿವಮೊಗ್ಗ ಜಿಲ್ಲೆಯ 8 ತಂಡಗಳು ಹಾಗೂ ರಾಜ್ಯದ ಬಲಿಷ್ಠ 8 ತಂಡಗಳ ಸಹಿತ ಒಟ್ಟು 16 ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು,ಶಿವಮೊಗ್ಗದ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಗೋಪಾಳದ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ನಡೆಯಲಿದೆ.
ಪ್ರಥಮ ಬಹುಮಾನ ರೂಪದಲ್ಲಿ 1.5 ಲಕ್ಷ ನಗದು ದ್ವಿತೀಯ ಬಹುಮಾನ ರೂಪದಲ್ಲಿ 75 ಸಾವಿರ ನಗದು ಸಹಿತ ವೈಯಕ್ತಿಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಈ ಪಂದ್ಯಾಟದ ನೇರ ಪ್ರಸಾರವನ್ನು ಯೂ ಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಆಯೋಜಕರು ಅವಕಾಶ ಕಲ್ಪಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಗಿರೀಶ್-8310685126,ರೋಹನ್- 9448639629 ಹಾಗೂ ವೆಂಕಟೇಶ್-9844158684 ಇವರನ್ನು ಸಂಪರ್ಕಿಸಬಹುದು.