ಕ್ರಿಕೆಟ್ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ...

ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ ಮಾತ್ರ ಬಾಕಿ

-

- Advertisment -spot_img

ದುಬೈಯಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಹಬ್ಬ ಬಂದೇಬಿಡ್ತು.. ಕೇವಲ ಎರಡು ದಿನ ಮಾತ್ರ ಬಾಕಿ

ಪ್ರತಿಯೊಂದು ಕ್ರಿಕೆಟ್ ತಂಡಗಳಿಗೆ ಕರುನಾಡಿನ ಪ್ರಮುಖ 16 ಸುಂದರ ಕ್ಷೇತ್ರಗಳ ಹೆಸರನ್ನಿತ್ತು ಆಯೋಜನೆಗೊಂಡಿರುವ 16 ತಂಡಗಳ ವಿನೂತನ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್-2(KCL) ಪಂದ್ಯಾವಳಿಯು ಇನ್ನು ಎರಡೇ ದಿನದಲ್ಲಿ ಆರಂಭವಾಗಲಿದೆ. ನವೆಂಬರ್ 22,23ರಂದು ಶಾರ್ಜಾ ಬಿಜೋಯ್ಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ಕನ್ನಡ ತಂಡಗಳ ಕ್ರಿಕೆಟ್ ಜಾತ್ರೆ ಸಂಪನ್ನಗೊಳ್ಳಲಿದೆ.

ಕಳೆದ ಭಾರಿ ಜರಗಿದ ಈ ಪಂದ್ಯಾವಳಿಯು ಭಾರೀ ಜನಮನ್ನಣೆ ಗಳಿಸಿದ್ದು ವಿದ್ವಾರ್ ಬಾಯ್ಸ್ ಮಂಗಳೂರು ಮ್ಯಾಜಿಶಿಯನ್ಸ್ ತಂಡವು ವಿಠಲ್ ರಿಶಾನ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಚಾಂಪಿಯನ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು.

ಈ ಭಾರಿಯ ಪ್ರಮುಖ ತಂಡಗಳು

1)ಗಲ್ಫ್ ಗೆಳೆಯರು ಮೈಸೂರ್ ಮಹಾರಾಜಾಸ್,
2)ವಿದ್ವಾರ ಬಾಯ್ಸ್ ಮಂಗ್ಳೂರು ಮಜಿಶಿಯನ್ಸ್,
3)ರಾಯಲ್ ಎಂಟ್ರಿ ಟೂರ್ಸ್ ಉಡುಪಿ ಲಯನ್ಸ್
4)ತುಳುನಾಡು ವಾರಿಯರ್ಸ್
5)ಶಿವಮೊಗ್ಗ ಸ್ಟ್ರೈಕರ್ಸ್
6)ಅಲ್ಟಸೆಕ್ಯೂರ್ ಬೆಂಗಳೂರು ಬ್ಲಾಸ್ಟರ್ಸ್,
7)ಕಟೀಲ್ ಫ್ರೆಂಡ್ಸ್ ಕಟೀಲ್ ಲೆಜೆಂಡ್ಸ್
8)ಎಂ ಎಂ ಲಾಂಡ್ರಿ ಕುಂದಾಪುರ ಕೈಟ್ಸ್
9)ಡಿಜೆಎಸ್ ನವೀನ್ xll ಕುಡ್ಲ ಕಿಂಗ್ಸ್
10)IXE ಯಂಗ್ ಸ್ಟಾರ್ಸ್ ಕಾಪು ಹೀರೋಸ್
11)D-O-D ಬಂಡೀಪುರ ಟೈಗರ್ಸ್
12)ಟೀಮ್ ಎಲಿಗೆಂಟ್ ಮೂಡುಬಿದ್ರೆ
13)ಡೆಲ್ಟಾಹೋಮ್ ಲೋನ್ಸ್ ಕೆ.ಜಿ.ಎಫ್ ಜಾಗ್ವಾರ್ಸ್
14)ಹಾಸನ ರಾಯಲ್ಸ್
15)ದುಬೈ ಒಕ್ಕಲಿಗ ಸಂಘ. ಮಲ್ನಾಡ್ ಚಾಲೆಂಜರ್ಸ್
16)ಮಣಿಪಾಲ ಮೇವರಿಕ್ಸ್

ಹೀಗೆ ಕನ್ನಡನಾಡಿನ 16 ಬೇರೆಬೇರೆ ಪ್ರದೇಶಗಳ ನಾಮಧೇಯದೊಂದಿಗೆ ತಂಡಗಳನ್ನು ಆಯ್ದು ಪಂದ್ಯಗಳನ್ನು ಜರುಗಿಸಲಾಗುತ್ತದೆ.

ವಿಜೇತರಿಗೆ ಆಕರ್ಷಕ ನಗದು ಬಹುಮಾನ,ಪಾರಿತೋಷಕ ಹಾಗೂ ಇನ್ನಿತರ ಅನೇಕ ಕೊಡುಗೆಗಳು ಲಭಿಸಲಿದೆ.

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಜರಗುವ ಈ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾವಳಿಯು ನವೆಂಬರ್ 22 ಶನಿವಾರ ಅಪರಾಹ್ನ ಶುಭಾರಂಭ ಗೊಳ್ಳಲಿದೆ.ತದನಂತರ ಪಂದ್ಯವು ಶನಿವಾರ ನಡುರಾತ್ರಿಯವರೆಗೆ ಸಾಗಲಿದೆ.ಮರುದಿನ ಮುಂಜಾನೆ ಒಂಬತ್ತರಿಂದ ರಾತ್ರಿ ಒಂಬತ್ತರವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಪಂದ್ಯಾವಳಿಯು ಮುಕ್ತಾಯವಾಗುತ್ತಿದ್ದಂತೆ ಪ್ರಶಸ್ತಿ ಪ್ರದಾನ ಸಮಾರಂಭ ಆ ಕೂಡಲೇ ನೆರವೇರುತ್ತದೆ.

ಈ ಪಂದ್ಯಾವಳಿಯು ಕನ್ನಡ ತಂಡಗಳ ನಡುವೆ ಜರಗುವ ಕೇವಲ ಕ್ರಿಕೆಟ್ ಆಟದ ಸ್ಪರ್ಧೆಯಾಗದೆ ಗಲ್ಫ್ ರಾಷ್ಟ್ರದೆಲ್ಲೆಡೆ ಹರಡಿಕೊಂಡಿರುವ ಕನ್ನಡನಾಡಿನ ವಿವಿಧ ಜಿಲ್ಲೆಗಳ ಕನ್ನಡಿಗರನ್ನು ಒಂದೆಡೆ ಸೇರಿಸಿ ನೆರವೇರುವ ಅಪರೂಪದ ಭಾವನಾತ್ಮಕ ಸಮಾರಂಭವೂ ಆಗಿದೆ.

ಒಂದು ರೀತಿಯಲ್ಲಿ ಕನ್ನಡಹಬ್ಬದ ವಾತಾವರಣವನ್ನು ಸೃಷ್ಟಿಸುವ ಈ ಪಂದ್ಯಾವಳಿಯು ದುಬೈನಲ್ಲಿ ಭಾರೀ ಸದ್ದು ಮಾಡುತ್ತಿದೆ.

ಕಳೆದ ಭಾರಿಯ ಚಾಂಪಿಯನ್ ವಿದ್ವಾರ್ಸ್ ಬಾಯ್ಸ್ ಮಂಗಳೂರು ಮಜಿಷಿಯನ್ ಸೇರಿದಂತೆ ಬಹುತೇಕ ಪ್ರಸಿದ್ಧ ಕನ್ನಡ ನಾಡಿನ ತಂಡಗಳು ಈಗಾಗಲೇ ಕ್ರಿಕೆಟ್ ಅಂಗಣಕ್ಕಿಳಿದು ಅಭ್ಯಾಸದಲ್ಲಿ ನಿರತವಾಗಿದೆ.

ದುಬೈನಲ್ಲಿ ನೆಲೆಸಿರುವ ಸ್ಪೋರ್ಟ್ಸ್ ಕನ್ನಡ ಕನ್ನಡವಾಹಿನಿಯ ಮಧ್ಯಪ್ರಾಚ್ಯದ ಸಂಯೋಜಕ ವಿಠಲ್ ರಿಶಾನ್ ನಾಯಕ್ ಈಗಾಗಲೇ ಸಂಯುಕ್ತ ಅರಬ್ ರಾಷ್ಟ್ರದೆಲ್ಲೆಡೆ ಈ ಪಂದ್ಯದ ಕುರಿತಾಗಿ ವಿಶೇಷ ವರದಿಯನ್ನು ಗಲ್ಫ್ ರಾಷ್ಟ್ರದ ಬಹುತೇಕ ಕನ್ನಡ ಕ್ರಿಕೆಟ್ ತಂಡಗಳಿಗೆ ಹರಿಸಿದ್ದಾರೆ.ಹೀಗಾಗಿ ಇನ್ನಷ್ಟು ಸ್ಪರ್ಧಾತ್ಮಕ ಪೈಪೋಟಿಯು ಈ ಭಾರಿಯ ಪಂದ್ಯಾವಳಿಯಲ್ಲಿ ಹೊರಹೊಮ್ಮಲಿದೆ ಎನ್ನುವುದು ದುಬೈ ಕ್ರಿಕೆಟ್ ಪ್ರಿಯರ ಅಭಿಮತ.ಏನೇ ಇರಲಿ ಕ್ರಿಕೆಟ್ ಆಟದಲ್ಲೂ ದುಬೈ ಕನ್ನಡಿಗರ ಕನ್ನಡನಾಡಿನ ವಿಶಿಷ್ಟ ಪ್ರೇಮ ನಿಜವಾಗ್ಲೂ ಅಭಿನಂದನೀಯ.

ಎಲ್ಲೇ ಇರಿ.ಹೇಗಾದರೂ ಇರಿ.ಅಪರೂಪದ ಈ ಕನ್ನಡ ಕ್ರಿಕೆಟ್ ಹಬ್ಬವನ್ನು ನೋಡಲು ಮರೆಯದೆ ಬನ್ನಿ.

ಕ್ರೀಡೆಗಳು ಮನುಕುಲದ ಪ್ರಗತಿಗೆ ಸದಾ ಬೆಳಕಾಗಿರಲಿ.

ಬರೆಹ:ಪಿ.ಲಾತವ್ಯ ಆಚಾರ್ಯ ಉಡುಪಿ

LEAVE A REPLY

Please enter your comment!
Please enter your name here

3 × five =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you