Categories
ಸ್ಪೋರ್ಟ್ಸ್

ಥೈಲ್ಯಾಂಡ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಅನೀಶ್ ಶೆಟ್ಟಿಗೆ ಹುಟ್ಟೂರ ಸನ್ಮಾನ.

ಇತ್ತೀಚೆಗಷ್ಟೇ ಥೈಲ್ಯಾಂಡ್ ನಲ್ಲಿ ನಡೆದಿದ್ದ ವಿಶ್ವ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಕುಂದಾಪುರದ ಹೆಮ್ಮೆಯ ಪುತ್ರ ಅನೀಶ್ ಶೆಟ್ಟಿ ಕಟ್ಕೆರೆಯವರ ಸಾರ್ವಜನಿಕ ಅಭಿನಂದನಾ ಪುರ ಮೆರವಣಿಗೆ‌ ಶನಿವಾರ ಸಂಜೆ ಕೋಟೇಶ್ವರ ಬೈಪಾಸ್ ಹಾಲಾಡಿ ರಸ್ತೆಯಿಂದ ಕುಂದಾಪುರ ಹಳೆ ಬಸ್ ನಿಲ್ದಾಣದ ತನಕ ನಡೆದು ಬಳಿಕ ಕುಂದಾಪುರ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಜನಸೇವಾ ಟ್ರಸ್ಟ್ ಮೂಡುಗಿಳಿಯಾರು,ಯುವ ಬಂಟರ ಸಂಘ ಕುಂದಾಪುರ,ಯುವ ಶಕ್ತಿ ಯುವಕ ಮಂಡಲ ಕಟ್ಕೆರೆ ಕೋಟೇಶ್ವರ ಹಾಗೂ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚರ್ಚ್ ರಸ್ತೆ ಕುಂದಾಪುರ ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಮೋವಾಯ್ ಥಾನ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಅನೀಶ್ ಶೆಟ್ಟಿ ಕಟ್ಕೆರೆ ಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು