ಕ್ರಿಕೆಟ್"ತದ್ಮೂರ್ ಕ್ರಿಕೆಟರ್ಸ್ ತಂಡಕ್ಕೆ HPL-2019 ಕಿರೀಟ"

“ತದ್ಮೂರ್ ಕ್ರಿಕೆಟರ್ಸ್ ತಂಡಕ್ಕೆ HPL-2019 ಕಿರೀಟ”

-

- Advertisment -spot_img

ಕಟ್ಟೆ ಫ್ರೆಂಡ್ಸ್ ಡಿವೈನ್ ಪಾರ್ಕ್,ಸಾಲಿಗ್ರಾಮ ಇವರ ಆಶ್ರಯದಲ್ಲಿ ಡಿಸೆಂಬರ್ 7 ಹಾಗೂ 8 ರಂದು ಸಾಲಿಗ್ರಾಮದ ಹಳೆಕೋಟೆಯಲ್ಲಿ ನಡೆದ HPL-2019 ಪಂದ್ಯಾಕೂಟವನ್ನು
ತದ್ಮೂರ್ ಕ್ರಿಕೆಟರ್ಸ್ ಜಯಿಸಿದೆ.

ಶನಿವಾರದಂದು ನಡೆದ ಸ್ವಜಾತಿ ಬಾಂಧವರ ಸೆಮಿಫೈನಲ್ ನಲ್ಲಿ ತದ್ಮೂರ್,ವೃಷ್ಟಿ ಸಾಲಿಗ್ರಾಮ ತಂಡವನ್ನು ಸೋಲಿಸಿ,
ಸ್ಥಳೀಯ ಫ್ರಾಂಚೈಸಿಗಳ ಸೆಮಿಫೈನಲ್ ನಲ್ಲಿ ರಿಯಲ್ ಟೈಗರ್ಸ್,ಭಗವತಿ ಕ್ರಿಕೆಟರ್ಸ್ ನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.


ಫೈನಲ್ ನಲ್ಲಿ ತದ್ಮೂರ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 59 ರನ್ ಗಳಿಸಿತ್ತು.ಚೇಸಿಂಗ್ ವೇಳೆ ಕೊನೆಯ ಹಂತದಲ್ಲಿ ಎಡವಿದ ರಿಯಲ್ ಟೈಗರ್ಸ್ ತಂಡ 51 ರನ್ ಗಳಿಸಿ 8 ರನ್ ಗಳ ಅಂತರದ ಸೋಲನ್ನನುಭವಿಸಿತು.

ತದ್ಮೂರ್ ತಂಡ ಪ್ರಥಮ ಬಹುಮಾನವಾಗಿ 25,001 ನಗದು ಹಾಗೂ ರನ್ನರ್ಸ್ ರಿಯಲ್ ಟೈಗರ್ಸ್ ತಂಡ 20,001 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ತದ್ಮೂರ್ ನ‌ ಶಮೀರ್,ಬೆಸ್ಟ್ ಬ್ಯಾಟ್ಸ್‌ಮನ್ ನಾಗ,ಬೆಸ್ಟ್ ಬೌಲರ್ ಸಾಧಿಕ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಿಝ್ವಾನ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿ ಹಾಳುಕೋಟೆ ಮೈದಾನ ಉಳಿವಿನ ಹೋರಾಟದಲ್ಲಿ ಈ ಅಂಗಣದಲ್ಲಿ ಆಡಿ ಬೆಳೆದ ಎಲ್ಲಾ ಹಿರಿಯ,ಕಿರಿಯ ಆಟಗಾರರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ತಿಳಿಸಿದರು.

 

ಈ ವೇಳೆ ಪ್ರೈಮ್ ಕ್ರಿಕೆಟರ್ಸ್ ಗುಂಡ್ಮಿ ಅಧ್ಯಕ್ಷರು ಕಿರಣ್ ಕುಮಾರ್,ನಜೀರ್ ಸಾಹೇಬ್,ಸ್ಪೋರ್ಟ್ಸ್‌ ಕನ್ನಡ ವೆಬ್ಸೈಟ್ ನ ಸಂಪಾದಕರು ಕೋಟ ರಾಮಕೃಷ್ಣ ಆಚಾರ್ಯ ಹಾಗೂ ಹಾಳುಕೋಟೆ ಮೈದಾನ ಹೋರಾಟ ಸಮಿತಿಯ ಅಧ್ಯಕ್ಷರು ಮನೋಜ್.ಜಿ,ಗುರು ಕ್ರೀಡಾರಂಗದ ಹಿರಿಯ ಆಟಗಾರ ವಿಶ್ವನಾಥ ಆಚಾರ್ ಹಾಗೂ ಪ್ರೈಮ್ ಗುಂಡ್ಮಿಯ ಸದಾನಂದ ಪೈ
ಉಪಸ್ಥಿತರಿದ್ದರು.

ಈ ಸಂದರ್ಭ ಚಕ್ರವರ್ತಿ ತಂಡದ ಹಿರಿಯ ಆಟಗಾರರಾದ ಮನೋಜ್ ನಾಯರ್,ಶಾಹಿದ್ ಚಕ್ರವರ್ತಿ ಸಹಿತ ಪ್ರೈಮ್ ಗುಂಡ್ಮಿಯ ಮಾಜಿ,ಹಾಲಿ ಆಟಗಾರರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಆರ್.ಕೆ.ಆಚಾರ್ಯ ಕೋಟ…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

four × 5 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you