ಕಟ್ಟೆ ಫ್ರೆಂಡ್ಸ್ ಡಿವೈನ್ ಪಾರ್ಕ್,ಸಾಲಿಗ್ರಾಮ ಇವರ ಆಶ್ರಯದಲ್ಲಿ ಡಿಸೆಂಬರ್ 7 ಹಾಗೂ 8 ರಂದು ಸಾಲಿಗ್ರಾಮದ ಹಳೆಕೋಟೆಯಲ್ಲಿ ನಡೆದ HPL-2019 ಪಂದ್ಯಾಕೂಟವನ್ನು
ತದ್ಮೂರ್ ಕ್ರಿಕೆಟರ್ಸ್ ಜಯಿಸಿದೆ.
ಶನಿವಾರದಂದು ನಡೆದ ಸ್ವಜಾತಿ ಬಾಂಧವರ ಸೆಮಿಫೈನಲ್ ನಲ್ಲಿ ತದ್ಮೂರ್,ವೃಷ್ಟಿ ಸಾಲಿಗ್ರಾಮ ತಂಡವನ್ನು ಸೋಲಿಸಿ,
ಸ್ಥಳೀಯ ಫ್ರಾಂಚೈಸಿಗಳ ಸೆಮಿಫೈನಲ್ ನಲ್ಲಿ ರಿಯಲ್ ಟೈಗರ್ಸ್,ಭಗವತಿ ಕ್ರಿಕೆಟರ್ಸ್ ನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಫೈನಲ್ ನಲ್ಲಿ ತದ್ಮೂರ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 59 ರನ್ ಗಳಿಸಿತ್ತು.ಚೇಸಿಂಗ್ ವೇಳೆ ಕೊನೆಯ ಹಂತದಲ್ಲಿ ಎಡವಿದ ರಿಯಲ್ ಟೈಗರ್ಸ್ ತಂಡ 51 ರನ್ ಗಳಿಸಿ 8 ರನ್ ಗಳ ಅಂತರದ ಸೋಲನ್ನನುಭವಿಸಿತು.
ತದ್ಮೂರ್ ತಂಡ ಪ್ರಥಮ ಬಹುಮಾನವಾಗಿ 25,001 ನಗದು ಹಾಗೂ ರನ್ನರ್ಸ್ ರಿಯಲ್ ಟೈಗರ್ಸ್ ತಂಡ 20,001 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಿತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ತದ್ಮೂರ್ ನ ಶಮೀರ್,ಬೆಸ್ಟ್ ಬ್ಯಾಟ್ಸ್‌ಮನ್ ನಾಗ,ಬೆಸ್ಟ್ ಬೌಲರ್ ಸಾಧಿಕ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಿಝ್ವಾನ್ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ರಾಮಚಂದ್ರ ಐತಾಳ್ ಗುಂಡ್ಮಿ ಮಾತನಾಡಿ ಹಾಳುಕೋಟೆ ಮೈದಾನ ಉಳಿವಿನ ಹೋರಾಟದಲ್ಲಿ ಈ ಅಂಗಣದಲ್ಲಿ ಆಡಿ ಬೆಳೆದ ಎಲ್ಲಾ ಹಿರಿಯ,ಕಿರಿಯ ಆಟಗಾರರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ತಿಳಿಸಿದರು.
ಈ ವೇಳೆ ಪ್ರೈಮ್ ಕ್ರಿಕೆಟರ್ಸ್ ಗುಂಡ್ಮಿ ಅಧ್ಯಕ್ಷರು ಕಿರಣ್ ಕುಮಾರ್,ನಜೀರ್ ಸಾಹೇಬ್,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಸಂಪಾದಕರು ಕೋಟ ರಾಮಕೃಷ್ಣ ಆಚಾರ್ಯ ಹಾಗೂ ಹಾಳುಕೋಟೆ ಮೈದಾನ ಹೋರಾಟ ಸಮಿತಿಯ ಅಧ್ಯಕ್ಷರು ಮನೋಜ್.ಜಿ,ಗುರು ಕ್ರೀಡಾರಂಗದ ಹಿರಿಯ ಆಟಗಾರ ವಿಶ್ವನಾಥ ಆಚಾರ್ ಹಾಗೂ ಪ್ರೈಮ್ ಗುಂಡ್ಮಿಯ ಸದಾನಂದ ಪೈ
ಉಪಸ್ಥಿತರಿದ್ದರು.
ಈ ಸಂದರ್ಭ ಚಕ್ರವರ್ತಿ ತಂಡದ ಹಿರಿಯ ಆಟಗಾರರಾದ ಮನೋಜ್ ನಾಯರ್,ಶಾಹಿದ್ ಚಕ್ರವರ್ತಿ ಸಹಿತ ಪ್ರೈಮ್ ಗುಂಡ್ಮಿಯ ಮಾಜಿ,ಹಾಲಿ ಆಟಗಾರರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಆರ್.ಕೆ.ಆಚಾರ್ಯ ಕೋಟ…