Home ಕ್ರಿಕೆಟ್ ಟಿ.ಎಂ.ಎ ಪೈ ಟ್ರೋಫಿ-2020

ಟಿ.ಎಂ.ಎ ಪೈ ಟ್ರೋಫಿ-2020

ಟಿ.ಎಂ.ಎ ಪೈ ಟ್ರೋಫಿ-2020

 

ಶ್ರೀದೇವಿ ಕ್ರಿಕೆಟ್ ಕ್ಲಬ್ ಗುಡ್ಡೆಯಂಗಡಿ, ಹಿರಿಯಡಕ*
ಇವರ ಆಶ್ರಯದಲ್ಲಿ ಮಣಿಪಾಲ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಅನಾರೋಗ್ಯದಲ್ಲಿರುವ ಕಿರಣ್ ಆಚಾರ್ಯ ಸಹಾಯಾರ್ಥವಾಗಿ ನಡೆಸಿದ ಅಂತರ್ಕಾಲೇಜು ಹಾಗೂ 21ರ ವಯೋಮಿತಿಯ ಕ್ರಿಕೆಟ್ ಪಂದ್ಯಾಕೂಟ 🏆 ಟಿ.ಎಂ.ಎ. ಪೈ ಟ್ರೋಫಿ – 2020 🏆 ಮಣಿಪಾಲದ ಕ್ರೀಡಾಂಗಣದಲ್ಲಿ ದಿನಾಂಕ 26-01-2020 ರಂದು ಯಶಸ್ವಿಯಾಗಿ ನಡೆಯಿತು..

ಫೈನಲ್ ಪಂದ್ಯದಲ್ಲಿ ಬಾಯ್ಸ್ ಚಿಟ್ಪಾಡಿ ಯ ತಂಡ ಎಂ.ಐ.ಟಿ. ಕುಂದಾಪುರ ವನ್ನು ಸೋಲಿಸುವುದರ ಮೂಲಕವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು..


ಅತ್ಯಂತ ಆಕರ್ಷಕವಾದ, ಅತೀ ಎತ್ತರದ ಟ್ರೋಫಿಗಳನ್ನು ಪಂದ್ಯಾಕೂಟದಲ್ಲಿ ನೀಡಿ ಗೌರವಿಸಲಾಯಿತು..
ಬಾಯ್ಸ್ ಚಿಟ್ಪಾಡಿ ತಂಡದ ಸುನಿಲ್ ಬಾಬು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ಅದೇ ತಂಡದ ವಿನೋದ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಎಂ.ಐ.ಟಿ. ಕುಂದಾಪುರದ ಶಶಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.

ಸಾಯಿ ಕ್ರಿಕೆಟರ್ಸ್ ಕಾರ್ಕಳ ಶಿಸ್ತಿನ ತಂಡ ಪ್ರಶಸ್ತಿ ಪಡೆಯಿತು

 

ಸಮಾರೋಪ ಸಮಾರಂಭದಲ್ಲಿ ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಅದೇ ಕಾಲೇಜಿನ ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ರವೀಂದ್ರ ಶೆಣೈ, ಕಾಲೇಜಿನ ಗೌರವ ಉಪನ್ಯಾಸಕರಾದ ಕುಮಾರಸ್ವಾಮಿ , ಪಂದ್ಯಾವಳಿಯ ಪ್ರಮುಖ ದಾನಿಗಳಾದ ಸೌರಭ್ ಬಲ್ಲಾಳ್ , ಸಿರಾಜ್ ಶೇಖ್, ಪರೀಕ್ಷಿತ್ ಅಲೆವೂರು, ಸಿದ್ಧಾಂತ್ ಕದ್ರಿ, ಸುಶ್ಮಿತ್ ಪೂಂಜ ಭಾಗವಹಿಸಿದ್ದರು.

ಪಂದ್ಯದ ತೀರ್ಪುಗಾರರಾಗಿ ವಿಶ್ವನಾಥ್ ನಾಯಕ್ ಪೆಲತ್ತೂರು, ಸಂಪತ್ ಕಣಂಜಾರು, ಸ್ವಸ್ತಿಕ್ ಹಿರಿಯಡಕ, ಪ್ರಜೇಶ್ ಪೆರ್ಡೂರು ಸಹಕರಿಸಿದರು.

ವೀಕ್ಷಕ ವಿವರಣೆಗಾರರಾಗಿ ಪ್ರಕಾಶ್ ಗುಡ್ಡೆಯಂಗಡಿ, ಪ್ರತುಲ್ ಹಿರಿಯಡಕ ಸಹಕರಿಸಿದರು..

LEAVE A REPLY

Please enter your comment!
Please enter your name here

nine − seven =

ಟಿ.ಎಂ.ಎ ಪೈ ಟ್ರೋಫಿ-2020

  ಶ್ರೀದೇವಿ ಕ್ರಿಕೆಟ್ ಕ್ಲಬ್ ಗುಡ್ಡೆಯಂಗಡಿ, ಹಿರಿಯಡಕ* ಇವರ ಆಶ್ರಯದಲ್ಲಿ ಮಣಿಪಾಲ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಅನಾರೋಗ್ಯದಲ್ಲಿರುವ ಕಿರಣ್ ಆಚಾರ್ಯ ಸಹಾಯಾರ್ಥವಾಗಿ ನಡೆಸಿದ ಅಂತರ್ಕಾಲೇಜು ಹಾಗೂ 21ರ ವಯೋಮಿತಿಯ ಕ್ರಿಕೆಟ್ ಪಂದ್ಯಾಕೂಟ 🏆 ಟಿ.ಎಂ.ಎ. ಪೈ ಟ್ರೋಫಿ - 2020 🏆 ಮಣಿಪಾಲದ ಕ್ರೀಡಾಂಗಣದಲ್ಲಿ ದಿನಾಂಕ 26-01-2020 ರಂದು ಯಶಸ್ವಿಯಾಗಿ ನಡೆಯಿತು.. ಫೈನಲ್ ಪಂದ್ಯದಲ್ಲಿ ಬಾಯ್ಸ್ ಚಿಟ್ಪಾಡಿ ಯ ತಂಡ ಎಂ.ಐ.ಟಿ. ಕುಂದಾಪುರ ವನ್ನು ಸೋಲಿಸುವುದರ ಮೂಲಕವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು.. ಅತ್ಯಂತ ಆಕರ್ಷಕವಾದ, ಅತೀ ಎತ್ತರದ ಟ್ರೋಫಿಗಳನ್ನು ಪಂದ್ಯಾಕೂಟದಲ್ಲಿ ನೀಡಿ ಗೌರವಿಸಲಾಯಿತು.. ಬಾಯ್ಸ್ ಚಿಟ್ಪಾಡಿ ತಂಡದ ಸುನಿಲ್ ಬಾಬು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು. ಅದೇ ತಂಡದ ವಿನೋದ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಎಂ.ಐ.ಟಿ. ಕುಂದಾಪುರದ ಶಶಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು. ಸಾಯಿ ಕ್ರಿಕೆಟರ್ಸ್ ಕಾರ್ಕಳ ಶಿಸ್ತಿನ ತಂಡ ಪ್ರಶಸ್ತಿ ಪಡೆಯಿತು   ಸಮಾರೋಪ ಸಮಾರಂಭದಲ್ಲಿ ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ ಪ್ರಶಸ್ತಿ

Send this to a friend