ಕ್ರಿಕೆಟ್ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

-

- Advertisment -spot_img

ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿ ಮಂಗಳೂರಿನಲ್ಲಿ ಆರಂಭ

**ಮಂಗಳೂರು, ಜುಲೈ 2:** ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಆಶ್ರಯದಲ್ಲಿ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಪಂದ್ಯಾವಳಿಯು ಬುಧವಾರ ನಗರದ ಕೊಟ್ಟಾರ ಪಡುಕೋಡಿಯಲ್ಲಿರುವ ಮಂಗಳೂರು ಟೇಬಲ್ ಟೆನಿಸ್ ಅಕಾಡೆಮಿಯಲ್ಲಿ ಶುಭಾರಂಭಗೊಂಡಿತು.

ಪಂದ್ಯಾವಳಿಯ ಮೊದಲ ದಿನ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳೊಂದಿಗೆ ಸ್ಪರ್ಧೆಗಳು ಆರಂಭಗೊಂಡು, ಬಳಿಕ 19 ವರ್ಷದೊಳಗಿನ ಬಾಲಕರ ಹಾಗೂ ಬಾಲಕಿಯರ ವಿಭಾಗ, ಪುರುಷರ ಸಿಂಗಲ್ಸ್ ಮತ್ತು ಎನ್‌ಎಂಎಸ್ ವಿಭಾಗಗಳ ಪಂದ್ಯಗಳು ನಡೆಯಿತು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ವಹಿಸಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಟಗಾರರಿಗೆ ಶುಭ ಹಾರೈಸಿದರು. ಎಲ್ಲಾ ಸ್ಪರ್ಧಿಗಳು ಉತ್ತಮ ಪ್ರದರ್ಶನ ನೀಡುವ ಮೂಲಕ ಯಶಸ್ಸು ಸಾಧಿಸಲಿ ಹಾಗೂ ಮಂಗಳೂರಿನಲ್ಲಿ ಆಹ್ಲಾದಕರ ಅನುಭವ ಹೊಂದಲಿ ಎಂದು ಆಶಿಸಿದರು.

ಸೇಂಟ್ ಥೆರೇಸಾ ಶಾಲೆಯ ಕರಸ್ಪಾಂಡೆಂಟ್ ಸಿಸ್ಟರ್ ಶೈಲಾ ಮಾತನಾಡಿ, ಗೆಲುವು-ಸೋಲು ಕ್ರೀಡೆಯ ಒಂದು ಭಾಗವಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ನಿರಂತರ ಪ್ರಯತ್ನ ಮಾಡುವ ಪ್ರತಿಯೊಬ್ಬ ಆಟಗಾರರೂ ಚಾಂಪಿಯನ್‌ಗಳೇ ಎಂದು ಹೇಳಿದರು. ಕ್ರೀಡಾಪಟುಗಳು ಪಂದ್ಯಗಳಲ್ಲಿ ಮಾತ್ರವಲ್ಲದೆ ತಮ್ಮ ವ್ಯಕ್ತಿತ್ವ ಹಾಗೂ ಜೀವನದಲ್ಲಿಯೂ ವಿಜಯಿಗಳಾಗಬೇಕು ಎಂದು ಅವರು ಕರೆ ನೀಡಿದರು.

ಸೇಂಟ್ ಥೆರೇಸಾ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಲೂರ್ಡ್ಸ್, ಎಲ್ಲ ಸ್ಪರ್ಧಿಗಳಿಗೆ ಶುಭಾಶಯ ಕೋರಿದ್ದು, ಪ್ರತಿಯೊಬ್ಬರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪ್ರೇರೇಪಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿ, ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here

2 + 7 =

Latest news

Pin Up – Azərbaycanın ən yaxşı kazinosu | Rəsmi sayt

Pin Up - Azərbaycanın ən yaxşı kazinosu | Rəsmi sayt ...

ಹಿರಿಯ ಕ್ರೀಡಾ ವರದಿಗಾರ ಸೋಮಶೇಖರ್ ಪಡುಕರೆ ಅವರಿಗೆ ‘ಪತ್ರಿಕಾ ದಿನದ ಪ್ರಶಸ್ತಿ

ಹಿರಿಯ ಕ್ರೀಡಾ ವರದಿಗಾರ ಸೋಮಶೇಖರ್ ಪಡುಕರೆ ಅವರಿಗೆ ‘ಪತ್ರಿಕಾ ದಿನದ ಪ್ರಶಸ್ತಿ' **ಮಂಗಳೂರು, ಜುಲೈ 2:** ಕನ್ನಡ ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಹಿರಿಯ...

KingHills Casino: Quick Play, Big Wins – A Fast‑Lane Gaming Experience

A Snapshot of KingHills – The Numbers That Drive the ActionKingHills has carved out a niche for players who...

BetPlay Casino: Juegos de Acción Rápida para el Pulso Moderno

1. Welcome to the Quick‑Hit ZoneEn una era donde una pausa para café puede convertirse en una sesión de...
- Advertisement -spot_imgspot_img

Slot Bunny Casino: Your Fast‑Track Slot Experience

1. Why Short, High‑Intensity Sessions MatterSlot Bunny casino isn’t about marathon gaming marathons; it’s built for players who crave...

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..!

ಹರಿದ ಸ್ಲಿಪ್ಪರ್.. ಹರಕಲು ಸೈಕಲ್.. ಪೀಣ್ಯ to ಟೀಮ್ ಇಂಡಿಯಾ via ಚಿನ್ನಸ್ವಾಮಿ..! ಇದು ಕರ್ನಾಟಕದ ಶ್ರೇಷ್ಠ ಕ್ರಿಕೆಟ್ ಯೋಧನ ‘ದೊಡ್ಡ’ ಕಥೆ..!   ಇವತ್ತು ಕರ್ನಾಟಕದ The most...

Must read

- Advertisement -spot_imgspot_img

You might also likeRELATED
Recommended to you