Home ಕ್ರಿಕೆಟ್ ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ‘ಸ್ಪಂದನ ಟ್ರೋಫಿ–2026’

ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ‘ಸ್ಪಂದನ ಟ್ರೋಫಿ–2026’

ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ‘ಸ್ಪಂದನ ಟ್ರೋಫಿ–2026’

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಇದರ ಏರ್ ಕಂಡೀಷನ್ ಡಿಪಾರ್ಟ್‌ಮೆಂಟ್ (ಸಾಮಾನ್ಯ ಸೇವೆಗಳ ವಿಭಾಗ) ವತಿಯಿಂದ ಆಯೋಜಿಸಲಾಗುತ್ತಿರುವ “ಸ್ಪಂದನ ಟ್ರೋಫಿ – 2026” ಕ್ರೀಡಾಕೂಟವು ಮಣಿಪಾಲದಲ್ಲಿ ವಿಶಿಷ್ಟ ಸಾಮಾಜಿಕ ಸಂದೇಶದೊಂದಿಗೆ ನಡೆಯಲಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ.

ಸ್ಪಂದನ ಟ್ರೋಫಿ, ಕೇವಲ ಕ್ರೀಡಾಕೂಟವಾಗಿರದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಸಮರ್ಪಿತವಾಗಿರುವುದು ವಿಶೇಷ. ಕ್ರೀಡೆಯ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ವದ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

ಫೆಬ್ರವರಿ 21 ಮತ್ತು 22, 2026 ರಂದು ಮಣಿಪಾಲ್‌ನ ಎಂಡ್‌ಪಾಯಿಂಟ್ ಕ್ರಿಕೆಟ್ ಗ್ರೌಂಡ್ – ಬಿ ನಲ್ಲಿ ನಡೆಯಲಿರುವ ಈ MAHE ಸಿಬ್ಬಂದಿ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ. ಕ್ರಿಕೆಟ್, ತ್ರೋಬಾಲ್ ಹಾಗೂ ಪುರುಷ–ಮಹಿಳೆಯರಿಗಾಗಿ ವಿಭಾಗವಾರು ಟಗ್ ಆಫ್ ವಾರ್ ಸ್ಪರ್ಧೆಗಳು ನಡೆಯಲಿವೆ.

ಸ್ಪಂದನ ಟ್ರೋಫಿ – 2026 ಕ್ರೀಡಾಕೂಟಕ್ಕೆ MAHE ಆಡಳಿತ, ವಿವಿಧ ವಿಭಾಗಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು, ‘Access Life – Supporting Cancer Bravehearts’ ಸಂಸ್ಥೆಯ ಸಹಕಾರವೂ ಈ ಕಾರ್ಯಕ್ರಮಕ್ಕೆ ದೊರೆತಿದೆ. ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಪ್ರಯತ್ನ ಶ್ಲಾಘನೀಯವಾಗಿದೆ.

ಕ್ರೀಡಾ ಪ್ರತಿಭೆ ಪ್ರದರ್ಶನದ ಜೊತೆಗೆ, ಸಮಾಜದ ಸಂಕಷ್ಟದಲ್ಲಿರುವ ಮಕ್ಕಳ ಬದುಕಿಗೆ ಆಶಾಕಿರಣ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡಾಕೂಟವು MAHE ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ: 0820-2922241, 9900023917, 8310908851
ಇಮೇಲ್: ac.kh@manipal.edu

ಸ್ಪೋರ್ಟ್ಸ್ ಕನ್ನಡ ಮೀಡಿಯಾ ಲೈವ್ ಈ ಟೂರ್ನಮೆಂಟ್ ನ ನೇರ ಪ್ರಸಾರ ಮಾಡಲಿದೆ.

LEAVE A REPLY

Please enter your comment!
Please enter your name here

1 × four =

ಕ್ಯಾನ್ಸರ್ ಪೀಡಿತ ಮಕ್ಕಳ ನೆರವಿಗಾಗಿ ‘ಸ್ಪಂದನ ಟ್ರೋಫಿ–2026’

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಇದರ ಏರ್ ಕಂಡೀಷನ್ ಡಿಪಾರ್ಟ್‌ಮೆಂಟ್ (ಸಾಮಾನ್ಯ ಸೇವೆಗಳ ವಿಭಾಗ) ವತಿಯಿಂದ ಆಯೋಜಿಸಲಾಗುತ್ತಿರುವ “ಸ್ಪಂದನ ಟ್ರೋಫಿ – 2026” ಕ್ರೀಡಾಕೂಟವು ಮಣಿಪಾಲದಲ್ಲಿ ವಿಶಿಷ್ಟ ಸಾಮಾಜಿಕ ಸಂದೇಶದೊಂದಿಗೆ ನಡೆಯಲಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ. ಸ್ಪಂದನ ಟ್ರೋಫಿ, ಕೇವಲ ಕ್ರೀಡಾಕೂಟವಾಗಿರದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಸಮರ್ಪಿತವಾಗಿರುವುದು ವಿಶೇಷ. ಕ್ರೀಡೆಯ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ವದ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಫೆಬ್ರವರಿ 21 ಮತ್ತು 22, 2026 ರಂದು ಮಣಿಪಾಲ್‌ನ ಎಂಡ್‌ಪಾಯಿಂಟ್ ಕ್ರಿಕೆಟ್ ಗ್ರೌಂಡ್ – ಬಿ ನಲ್ಲಿ ನಡೆಯಲಿರುವ ಈ MAHE ಸಿಬ್ಬಂದಿ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ. ಕ್ರಿಕೆಟ್, ತ್ರೋಬಾಲ್ ಹಾಗೂ ಪುರುಷ–ಮಹಿಳೆಯರಿಗಾಗಿ ವಿಭಾಗವಾರು ಟಗ್ ಆಫ್ ವಾರ್ ಸ್ಪರ್ಧೆಗಳು ನಡೆಯಲಿವೆ. ಸ್ಪಂದನ ಟ್ರೋಫಿ – 2026 ಕ್ರೀಡಾಕೂಟಕ್ಕೆ MAHE ಆಡಳಿತ, ವಿವಿಧ ವಿಭಾಗಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು, ‘Access Life – Supporting Cancer Bravehearts’ ಸಂಸ್ಥೆಯ ಸಹಕಾರವೂ ಈ ಕಾರ್ಯಕ್ರಮಕ್ಕೆ ದೊರೆತಿದೆ. ಕ್ರೀಡೆ,

Send this to a friend