ಕಳೆದ 33 ವರ್ಷಗಳಿಂದ ರಾಜ್ಯದ ವಿವಿಧೆಡೆ ವೀಕ್ಷಕ ವಿವರಣೆಯನ್ನು ನೀಡುತ್ತಾ ಬಂದಿರುವವರು ಕೋಟ ಶಿವನಾರಾಯಣ ಐತಾಳ್. ಇವರು ಕಳೆದ 23 ವರ್ಷಗಳಿಂದ ಕೆ ಎಸ್ ಸಿ ಎ ಅಂಗೀಕೃತ ನಿರ್ಣಾಯಕರಾಗಿ ಉಡುಪಿ ಜಿಲ್ಲೆಯ ಹಿರಿಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.
ದುಬೈಯಲ್ಲಿ ನಡೆದ ಅರಬ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿಯೂ ವೀಕ್ಷಕರ ವಿವರಣೆಯನ್ನು ನೀಡಿ ಖ್ಯಾತಿಯನ್ನು ಪಡೆದಿದ್ದಾರೆ.ಇವರ ಸಂಸ್ಥೆ ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ ಎಂಬ ಹೆಸರಿನಲ್ಲಿ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಇದೆ. ಇವರು ಈಗಾಗಲೇ ಕೋಟದಲ್ಲಿ ಒಂದು ಡಬಲ್ ವಿಕೆಟ್ ಪಂದ್ಯಾಟ ನಡೆಸಿದ್ದಾರೆ. ಅದಾದ ಬಳಿಕ ಹೊನಲು ಬೆಳಕಿನ ಪಂದ್ಯಾಟವನ್ನು ಕೂಡ ಆಯೋಜಿಸಿದ್ದಾರೆ. ಅದೇ ರೀತಿ ಚೆಸ್ ಪಂದ್ಯಾಟವನ್ನು ಕೂಡ ಸಂಘಟಿಸಿದ್ದಾರೆ. ಸಾಲಿಗ್ರಾಮ ಜಾತ್ರೆಯ ಪ್ರಯುಕ್ತ ಸ್ವರಾಂಜಲಿ ಎಂಬ ಸಂಗೀತ ಕಾರ್ಯಕ್ರಮ ಕೂಡ ಇವರ ನೇತೃತ್ವದಲ್ಲಿ ಜರುಗಿತ್ತು
ಇದೇ ನಿಟ್ಟಿನಲ್ಲಿ ಇವರ 33 ವರ್ಷಗಳ ವೀಕ್ಷಕ ವಿವರಣೆಯ ಸಾರ್ಥಕ ಪಯಣವನ್ನು ನೆನಪಿಸಿಕೊಳ್ಳುವ ಸಲುವಾಗಿ ಇದೇ ಅಕ್ಟೋಬರ್ 28, 29 ರಂದು ಒಂದು ಕ್ರಿಕೆಟ್ ಪಂದ್ಯಾಟವನ್ನು ನಡೆಸುತ್ತಿದ್ದಾರೆ. ಆಯ್ದ 12 ತಂಡಗಳ ನಡುವಿನ ಹಣಾಹಣಿ ‘ ಶಿವ ಬಿಗ್ ಬಾಷ್ ‘ ಎನ್ನುವ ನಾಮಾಂಕಿತದಲ್ಲಿ ಪಂದ್ಯಾಟ ನಡೆಯಲಿದೆ. ಈ ಒಂದು ಪಂದ್ಯಾ ಕೂಟದಲ್ಲಿ ಪೊಲೀಸರ ತಂಡ, ಜಿಲ್ಲಾಧಿಕಾರಿಗಳ ತಂಡ, ಡಾಕ್ಟರ್ಸ್ ಗಳ ತಂಡ, ವಕೀಲರ ತಂಡ, ಅಚೀವರ್ಸ್ ತಂಡ, ಇಂಜಿನಿಯರ್ಸ್ ತಂಡ, ಲೆಕ್ಕಪರಿಶೋಧಕರ ತಂಡ ಅದೇ ರೀತಿಯಲ್ಲಿ ಕಸ್ತೂರ್ಬಾ ಹಾಸ್ಪಿಟಲ್, ತಂಡ ರೋಬೋ ಸಾಫ್ಟ್ ತಂಡ, ಉಡುಪಿ ಜಿಲ್ಲಾ ಶಿಕ್ಷಕರ ತಂಡ ಇವಲ್ಲದೆ ತುಳು ಸಿನಿಮಾ ನಟರ ತಂಡ ಈ ಎಲ್ಲಾ ತಂಡಗಳು ಪಾರಂಪಳ್ಳಿ ಸಾಲಿಗ್ರಾಮದ ಹಾಳು ಕೋಟೆ ಮೈದಾನದಲ್ಲಿ ಪಂದ್ಯಗಳನ್ನು ಆಡಲಿವೆ.ಪಂದ್ಯಾಟದ ನೇರ ಪ್ರಸಾರ ಶಿವ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಶಿವ ಸ್ಪೋರ್ಟ್ಸ್& ಕಲ್ಚರಲ್ ಕ್ಲಬ್ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಶುಭಹಾರೈಕೆಗಳು.