ಮಂಗಳೂರು-ಟೀಮ್ ಬಜ್ಪೆ ಲೆಜೆಂಡ್ಸ್ ಇವರ ಆಶ್ರಯದಲ್ಲಿ ಯುವಜನತೆಯಲ್ಲಿ ಮಾದಕ ವ್ಯಸನದ ಬಗ್ಗೆ ಜಾಗ್ರತಿ ಮತ್ತು ಪರಸ್ಪರ ಸೌಹಾರ್ದತೆ ಹಾಗೂ ಕಿರಿಯ ಕಿರಿಯ ಆಟಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಸಲುವಾಗಿ ಮೊದಲ ಬಾರಿಗೆ ಬಜಪೆ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದಾರೆ.
ಬಜ್ಪೆಯಲ್ಲಿ ನಡೆಯುವ ಬಿಪಿಎಲ್ ಚಾಂಪಿಯನ್ಸ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯು ಹೊನಲು ಬೆಳಕಿನ ಪಂದ್ಯಾಕೂಟವಾಗಿದ್ದು ನವೆಂಬರ್ 17, 18 ಮತ್ತು 19 ರಂದು ನಡೆಯಲಿದ್ದು, 40 ವರ್ಷ ಮೇಲ್ಪಟ್ಟ ಹಿರಿಯರಿಗೆ ಅಂಡರ್ ಆರ್ಮ್ ಮಾದರಿ ಹಾಗೂ 15 ವರ್ಷಕ್ಕಿಂತ ಕಿರಿಯರಿಗೆ ಓವರ್ ಆರ್ಮ್ ಪಂದ್ಯಾ ಕೂಟ ಹೊನಲು ಬೆಳಕಿನಲ್ಲಿ ನಡೆಯಲಿದೆ. ವಿಜೇತರಿಗೆ ಆಕರ್ಷಕ ನಗದು ಬಹುಮಾನಗಳ ಜೊತೆ ಟ್ರೋಫಿಗಳನ್ನು ನೀಡಿ ಗೌರವಿಸಲಾಗುವುದು.
ನವೆಂಬರ್ 17 ಶುಕ್ರವಾರ ಸಂಜೆ 4.30 ಗಂಟೆಗೆ ಸರಿಯಾಗಿ ಅದ್ಧೂರಿಯ ಉದ್ಘಾಟನಾ ಸಮಾರಂಭ ನಡೆಯಲಿದೆ.ಬಜ್ಪೆ,ಸುಂಕದಕಟ್ಟೆ,ಭಟ್ ರಕೆರೆ,ಅಡ್ಯಪಾಡಿ,
ಪೊರ್ಕೋಡಿ,ಕರಂಬಾರ್,ಶಾಂತಿಗುಡ್ಡೆ, ಪೆರ್ಮುದೆ,
ಕೊಂಚಾರ್,ಸೌಹಾರ್ದ ನಗರ ಇಲ್ಲಿಯ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.ಆಯೋಜಕರ ಪ್ರಕಾರ, ಈ ಪಂದ್ಯಾವಳಿಯ ಉದ್ದೇಶವು ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ಈ ಸಂದರ್ಭದಲ್ಲಿ ಮಾತನಾಡಿದ ಆಸಿಫ್ ಬಜ್ಪೆ ಮತ್ತು ಜುಬೇರ್ ಬಜ್ಪೆ “ಪ್ರಸ್ತುತ ದಿನಗಳಲ್ಲಿ ನಮ್ಮ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗಿದ್ದಾರೆ. ಯುವಕರು ತಮ್ಮನ್ನು ತಾವು ಬ್ಯುಸಿ ಮತ್ತು ಫಿಟ್ ಆಗಿರಲು ಕ್ರೀಡಾ ಚಟುವಟಿಕೆಗಳಲ್ಲಿ ನಿರತರಾಗಿರಬೇಕೆಂದು ಅವರು ಮನವಿ ಮಾಡಿದ್ದಾರೆ. ನಮ್ಮ ಯುವಕರನ್ನು ಕ್ರೀಡಾ ಚಟುವಟಿಕೆಗಳಲ್ಲಿ ನಿರತರನ್ನಾಗಿಸುವುದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶ ಹಾಗೂ ಈ ಪಂದ್ಯಾವಳಿಯಲ್ಲಿ ಸಂಗ್ರಹವಾದ ಹಣವನ್ನು ಬಡಕುಟುಂಬಗಳಿಗೆ ನೀಡುವ ಉದ್ದೇಶವು ಕೂಡ ಇದೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ವಿಶೇಷವಾದ ಫುಡ್ ಕೋರ್ಟ್ ಕ್ರೀಡಾ ಪ್ರೇಕ್ಷಕರಿಗೆ ರಸದೌತಣವನ್ನು ನೀಡಲಿದೆ ಎಂದರು.”
ಹೆಚ್ಚಿನ ವಿವರಗಳಿಗಾಗಿ ಹಕೀಮ್-9844135947,
ಅಖ್ತರ್-9986754468,ನೌಶಾದ್- 8867222095,ಕೆ.ಹೆಚ್.ರಹೀಮ್- 9353319205 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
ಪಂದ್ಯಾ ಕೂಟದ ನೇರಪ್ರಸಾರ ಸ್ಟಾರ್ ವರ್ಟೆಕ್ಸ್-Sportskannadatv ಯೂಟ್ಯೂಬ್ ಲೈವ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದೆ.
ಪಂದ್ಯಾಟದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಸ್ಪೋರ್ಟ್ಸ್ ಕನ್ನಡ ಇತ್ತೀಚೆಗೆ ನಡೆಸಿದ ಟೀಮ್ ಬಜ್ಪೆ ಲೆಜೆಂಡ್ಸ್ ಸಂದರ್ಶನ ವೀಕ್ಷಿಸಲು Sportskannadatv ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಹಾಗೂ ಶೇರ್ ಮಾಡಿ.